bomb threat : ಡಿಕೆಶಿ ಮಾಲೀಕತ್ವದ ಖಾಸಗಿ ಶಾಲೆಗೆ ಬಾಂಬ್​ ಬೆದರಿಕೆ ಹಾಕಿದ್ದು ಅದೇ ಶಾಲೆಯ ವಿದ್ಯಾರ್ಥಿ : ತನಿಖೆಯಲ್ಲಿ ಬಯಲಾಯ್ತು ಸತ್ಯಾಂಶ

ಬೆಂಗಳೂರು : bomb threat : ರಾಜ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಮಾಲೀಕತ್ವದ ಖಾಸಗಿ ಶಾಲೆಗೆ ಬಾಂಬ್​ ಬೆದರಿಕೆ ಪ್ರಕರಣದಲ್ಲಿ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ. ಬಾಂಬ್​ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯನ್ನು ರಾಜ ರಾಜೇಶ್ವರಿ ನಗರ ಠಾಣಾ ಪೊಲೀಸರು ಪತ್ತೆ ಮಾಡಿದ್ದಾರೆ. ರಾಜ ರಾಜೇಶ್ವರಿ ನಗರದ ಹಿಲ್​ ವ್ಯೂ ಪಬ್ಲಿಕ್​ ಸ್ಕೂಲ್​ಗೆ ಬಾಂಬ್​ ಬೆದರಿಕೆ ಹಾಕಿದವನು ಇದೇ ಶಾಲೆಯ ವಿದ್ಯಾರ್ಥಿ ಎನ್ನುವುದು ತನಿಖೆಯಲ್ಲಿ ಬಯಲಾಗಿದೆ. ಇದೇ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಪರೀಕ್ಷೆಗೆ ಹೆದರಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಓದುವುದರಲ್ಲಿ ಬುದ್ಧವಂತನಾಗಿದ್ದ ಈತ ಈ ಬಾರಿಯ ಪರೀಕ್ಷೆಗೆ ಯಾವುದೇ ತಯಾರಿ ನಡೆಸಿರಲಿಲ್ಲ. ಹೀಗಾಗಿ ಜುಲೈ 21ರಂದು ನಡೆಯಬೇಕಿದ್ದ ಪರೀಕ್ಷೆಯಲ್ಲಿ ತಾನು ಅನುತ್ತೀರ್ಣನಾಗುತ್ತೇನೆಂಬ ಭಯ ಈತನಿಗೆ ಕಾಡಿತ್ತು. ಹೀಗಾಗಿ ಹೇಗಾದರೂ ಮಾಡಿ ಪರೀಕ್ಷೆಯಿಂದ ತಪ್ಪಿಸಿಕೊಳ್ಳಬೇಕು ಎಂದು ಪ್ಲಾನ್​ ಹಾಕಿದ್ದ ಈ ವಿದ್ಯಾರ್ಥಿಯು ತನ್ನ ಸ್ವಂತ ಲ್ಯಾಪ್​ಟಾಪ್​ನಿಂದ ಶಾಲೆಗೆ ಬಾಂಬ್​ ಬೆದರಿಕೆ ಇ ಮೇಲೆ ಕಳುಹಿಸಿದ್ದ ಎನ್ನಲಾಗಿದೆ.
ಹುಚ್ಚ ವೆಂಕಟ್​ ಹೆಸರಿನಲ್ಲಿ ಇ ಮೇಲ್ ಖಾತೆ ರಚಿಸಿದ್ದ ಈತ ಅದರ ಮೂಲಕವೇ ಭಾನುವಾರ ಸಂಜೆ ನ್ಯಾಷನಲ್​ ಹಿಲ್​ ವ್ಯೂವ್​ ಶಾಲೆಯ ಅಧಿಕೃತ ಮೇಲ್​ ಐಡಿಗೆ ಬಾಂಬ್​ ಬೆದರಿಕೆ ಸಂದೇಶ ಕಳುಹಿಸಿದ್ದ. ಈ ಬಗ್ಗೆ ಆತನ ಪೋಷಕರಿಗೂ ಸಹ ಯಾವುದೇ ಸುಳಿವಿರಲಿಲ್ಲ. ಭಾನುವಾರ ಮೇಲ್​ ಕಳಿಸಿದ್ದ ಈತ ಸೋಮವಾರದಂದು ಎಂದಿನಂತೆ ಶಾಲೆಗೆ ತೆರಳಿದ್ದ.


ಪೊಲೀಸರು ಬಂದ ಶಾಲೆಯನ್ನು ತಪಾಸಣೆ ಕೈಗೊಳ್ಳುವಾಗಲೂ ಶಾಲೆಯಲ್ಲೇ ಇದ್ದ ಈತ ಈ ಬಗ್ಗೆ ಯಾರಲ್ಲೂ ಹೇಳಿಕೊಂಡಿರಲಿಲ್ಲ. ಆದರೆ ಇದೀಗ ತನಿಖೆಯಲ್ಲಿ ಸತ್ಯಾಂಶ ಹೊರ ಬಿದ್ದಿದ್ದು ಪೊಲೀಸರು ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆದು ಬಾಲ ನ್ಯಾಯ ಕಾಯ್ದೆಯ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ .

ಇದನ್ನು ಓದಿ : Mani Ratnam : ಖ್ಯಾತ ನಿರ್ದೇಶಕ, ನಿರ್ಮಾಪಕ ಮಣಿರತ್ನಂಗೆ ಕೊರೊನಾ ಸೋಂಕು : ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : KS Eshwarappa : ಮುಸಲ್ಮಾನರು ಎಲ್ಲಿರ್ತಾರೋ ಅಲ್ಲಿ ಸಿದ್ದರಾಮಯ್ಯ ಚುನಾವಣೆಗೆ ನಿಲ್ತಾರೆ : ಕೆ.ಎಸ್​ ಈಶ್ವರಪ್ಪ ವ್ಯಂಗ್ಯ

hoax bomb threat from bangalore public school student

Comments are closed.