KS Eshwarappa vs KJ George : ನನ್ನ ಹಾಗೇ ಈಶ್ವರಪ್ಪನೂ ರಾಜೀನಾಮೆ ನೀಡಲಿ : ಮಾಜಿ ಸಚಿವ ಕೆ.ಜೆ.ಜಾರ್ಜ್ ಆಗ್ರಹ

ಬೆಂಗಳೂರು : ಸಚಿವ ಈಶ್ವರಪ್ಪ ( KS Eshwarappa) ನೀಡಿದ ಕಿರುಕುಳದಿಂದ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಸಚಿವ ಈಶ್ವರಪ್ಪ ವಿರುದ್ಧ ಎಫ್ ಆಯ್ ಆರ್ ದಾಖಲಾಗಿದೆ. ಈ ಮಧ್ಯೆ ಸಚಿವ ಈಶ್ವರಪ್ಪ ರಾಜೀನಾಮೆ ನೀಡಲೇಬೇಕೆಂದು ಕಾಂಗ್ರೆಸ್ ಆಗ್ರಹಿಸಿದ್ದು, ದೂರು ಹೊತ್ತು ರಾಜ್ಯಪಾಲರನ್ನು ಭೇಟಿ ಮಾಡಿದೆ. ಈ ಮಧ್ಯೆ ತಮ್ಮ ರಾಜೀನಾಮೆ ಸಂದರ್ಭವನ್ನು ನೆನಪಿಸಿಕೊಂಡ ಮಾಜಿ ಸಚಿವ ಕೆ.ಜೆ.ಜಾರ್ಜ್ (KJ George ) ಆಗ ನೈತಿಕ ಹೊಣೆ ಹೊತ್ತು ‌ನನ್ನ ರಾಜೀನಾಮೆ ಕೇಳಿದವರು ಈಗ ಯಾಕೆ ಮೌನವಾಗಿದ್ದಾರೆ ಎಂದು ಕುಟುಕಿದ್ದಾರೆ.

ಸಚಿವ ಈಶ್ವರಪ್ಪ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂಬ ಒತ್ತಡ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಇಂತಹುದೇ ಸಂದರ್ಭದಲ್ಲಿ ರಾಜೀನಾಮೆ‌ನೀಡಿದ್ದ ಮಾಜಿ ಸಚಿವ ಕೆ.ಜೆ.ಜಾರ್ಜ್ ಈಶ್ವರಪ್ಪ ವಿರುದ್ಧ ಮೌನ ಮುರಿದಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಕೆ.ಜೆ.ಜಾರ್ಜ್, ಇಂಥ ಹೊತ್ತಿನಲ್ಲಿ ಈಶ್ವರಪ್ಪನವರುನೈತಿಕ ಹೊಣೆ ಹೊತ್ತು ಈಶ್ವರಪ್ಪ ರಾಜೀನಾಮೆ ನೀಡಬೇಕು. ಈ ಹಿಂದೆ ಡಿವೈಸ್ಪಿ ಗಣಪತಿ ಆತ್ಮಹತ್ಯೆ ಕೇಸ್ ನಲ್ಲಿ ನನ್ನ ಮೇಲೆ ಯಾವುದೇ ನೇರವಾದ ಆರೋಪ ಇಲ್ಲದೆ ಇದ್ರು,ನಾನು ರಾಜೀನಾಮೆ ನೀಡಿದ್ದೆ.ಆದರೆ ಈಗ ಈಶ್ವರಪ್ಪ ವಿರುದ್ದ ಸಂತೋಷ್ ನೇರವಾದ ಆರೋಪ ಮಾಡಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಈಶ್ವರಪ್ಪ ರಾಜೀನಾಮೆ ನೀಡಲೇಬೇಕೆಂದು ಆಗ್ರಹಿಸಿದ್ದಾರೆ.

ಸಂತೋಷ್ ಪಟೇಲ್, ಡೆತ್ ನೋಟ್ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹಿಂದೆ ಇದೇ ಈಶ್ವರಪ್ಪ ಮೇಲ್ಮನೆ ವಿರೋಧ ಪಕ್ಷದ ನಾಯಕರಾಗಿ ನನ್ನ ರಾಜೀನಾಮೆ ಕೇಳಿದ್ರು ಇವಾಗ ಈಶ್ವರಪ್ಪ ಅದನ್ನೆಲ್ಲ ಮರೆತು ಬಿಟ್ರಾ..? ಅವ್ರು ನನ್ನ ರಾಜೀನಾಮೆ ಕೇಳಿರುವ ರೆಕಾರ್ಡ್ ಅಸೆಂಬ್ಲಿಯಲ್ಲಿ ಇದೆ. ಅದನ್ನು ಮತ್ತೆ ನೆನಪಿಸೋದು ಬೇಡ ಎಂದು ನಾನು ಭಾವಿಸಿದ್ದೇನೆ. ಈಶ್ವರಪ್ಪನವರು ತಮ್ಮ ಘನತೆ ಅರಿತು ರಾಜೀನಾಮೆ ನೀಡಬೇಕೆಂದು ಜಾರ್ಜ್ ಆಗ್ರಹಿಸಿದ್ದಾರೆ.

ಈಶ್ವರಪ್ಪ ಸಚಿವ ಸ್ಥಾನಕ್ಕೆ ಈಗ ರಾಜೀನಾಮೆ ಕೊಡಲಿ. ಆಮೇಲೆ ನನ್ನ ತರನೇ ಮತ್ತೆ ವಿಚಾರಣೆ ಎದುರಿಸಿ, ನಿರ್ದೋಷಿ ಆಗಿ ಮತ್ತೆ ಬೇಕಿದ್ರೆ ಮಂತ್ರಿ ಆಗಲಿ ಅವ್ರು ಮಂತ್ರಿ ಯಾಗಿ ತನಿಖೆ ಎದುರಿಸಿದ್ರೆ, ಪ್ರಕರಣದ ಮೇಲೆ ಪ್ರಭಾವ ಬೀರಿದಂತಾಗುತ್ತದೆ. ಹೀಗಾಗಿ ಈಶ್ವರಪ್ಪ ರಾಜೀನಾಮೆ ಕೊಡಬೇಕು ಎಂದು ಜಾರ್ಜ್ ಒತ್ತಾಯಿಸಿದ್ದಾರೆ. ಈ ಹಿಂದೆ ಕೊಡಗಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಡಿವೈಎಸ್ ಪಿ ಗಣಪತಿ ತಮ್ಮ ಸಾವಿಗೆ ಜಾರ್ಜ್ ಕಿರುಕುಳ ಕಾರಣವೆಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ ಸಚಿವರಾಗಿದ್ದ ಜಾರ್ಜ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ : ಸಂತೋಷ್‌ ಪಾಟೀಲ್ ಆತ್ಮಹತ್ಯೆ ಪ್ರಕರಣ : ಈಶ್ವರಪ್ಪಗೆ ಸಂಕಷ್ಟ, ರಾಜ್ಯಪಾಲರಿಗೆ ಇಂದು ಕಾಂಗ್ರೆಸ್‌ ದೂರು

ಇದನ್ನೂ ಓದಿ : ಇಂದೇ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ : ಬಿಜೆಪಿ ಹೈಕಮಾಂಡ್‌ನಿಂದ ಖಡಕ್‌ ವಾರ್ನಿಂಗ್‌

KS Eshwarappa vs KJ George Demand Resignation

Comments are closed.