KGF-2 Women Show : ಕೆಜಿಎಫ್-2 ಫಸ್ಟ್‌ ಡೇ ಫಸ್ಟ್‌ ಶೋ : ಮಹಿಳೆಯರಿಗಾಗಿ ಸ್ಪೆಷಲ್‌ ಶೋ ಆಯೋಜನೆ

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್-2 (KGF-2) ರಿಲೀಸ್ ದೇ ಸದ್ದು. ಇನ್ನೇನು ಸಿನಿಮಾ ರಿಲೀಸ್ ಗೆ ಕ್ಷಣಗಣನೆ ಆರಂಭವಾಗಿರೋ ಬೆನ್ನಲ್ಲೇ, ಸಿನಿಮಾದ ಬಗ್ಗೆ ಅಭಿಮಾನಿಗಳ ಅಭಿಮಾನದ ಪರಾಕಾಷ್ಠೆ ಒಂದೊಂದಾಗಿ ಬಹಿರಂಗವಾಗ ತೊಡಗಿದೆ. ಈಗಾಗಲೇ ಕೆಜಿಎಫ್-2 ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಹೊಸ ದಾಖಲೆ ಬರೆದಿದೆ. ಕರ್ನಾಟಕದಾದ್ಯಂತ ಆರು ಸಾವಿರ ಸ್ಕ್ರೀನ್ ನಲ್ಲಿ ಪ್ರದರ್ಶನ ಕಾಣುತ್ತಿದೆ‌‌. ಈ ಮಧ್ಯೆ ಸಿನಿಮಾ ರಿಲೀಸ್ ಜೊತೆಗೆ ಹೊಸ ದಾಖಲೆ ಬರೆಯೋಕೆ ರಾಕಿಂಗ್ ಸ್ಟಾರ್ ಯಶ್ ಲೇಡಿ ಫ್ಯಾನ್ಸ್ ಸಜ್ಜಾಗಿದ್ದಾರೆ. ಹೌದು ಇದೇ ಮೊದಲ ಬಾರಿಗೆ ಯಶ್ ಲೇಡಿ ಫ್ಯಾನ್ಸ್ ಗಾಗಿ ಸ್ಪೆಶಲ್ ಶೋ (KGF-2 Women Show) ಆಯೋಜನೆಯಾಗಿದೆ.

ಹೌದು ಕೆಜಿಎಫ್-2 (KGF-2) ಸಿನಿಮಾದ ಫರ್ಸ್ಟ್ ಡೇ ಫರ್ಸ್ಟ್ ಶೋಗಾಗಿ ಯಶ್ ಮಹಿಳಾ ಅಭಿಮಾನಿಗಳಿಗೆ ಸ್ಪೆಶಲ್ ಶೋ ವ್ಯವಸ್ಥೆ ಮಾಡಲಾಗಿದೆ. ಇದನ್ನು ಯಶ್ ಮಹಿಳಾ ಅಭಿಮಾನಿ ಬಳಗವೇ ಮಾಡ್ತಿರೋದು ಇನ್ನೊಂದು ವಿಶೇಷ. ಕೆಂಗೇರಿಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಯಶ್ ಲೇಡಿ ಫ್ಯಾನ್ಸ್ ಗೆ ಸ್ಪೆಷಲ್ ಶೋ ಆಯೋಜಿಸಲಾಗಿದ್ದು, ನಾಳೆ ಬೆಳಗ್ಗೆ 10 ಗಂಟೆ ಶೋವನ್ನು ಕೇವಲ ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ. ಬೆಳಗ್ಗೆ 10 ಗಂಟೆ ಶೋನ ಎಲ್ಲಾ ಟಿಕೆಟ್ ಗಳ ಖರೀದಿ ಮಾಡಿರುವ ಯಶ್ ನ ಮಹಿಳಾ ಫ್ಯಾನ್ಸ್ ಈಗಾಗಲೇ ಥಿಯೇಟರ್ ಬುಕ್ ಮಾಡಿದ್ದಾರೆ.

ಥಿಯೇಟರ್ ನಲ್ಲಿರೋ ಒಟ್ಟು 590 ಟಿಕೇಟ್ ಗಳನ್ನು ಭರ್ಜರಿ ಎರಡು ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ ಖರೀದಿಸಲಾಗಿದೆ. ಇನ್ನೂ ಈ ಶೋಗಾಗಿ ಕೇವಲ ಬೆಂಗಳೂರು ಮಾತ್ರವಲ್ಲ ಮಂಡ್ಯ, ಮೈಸೂರು, ರಾಮನಗರ, ಬೀದರ್, ತುಮಕೂರಿನಿಂದ ರಾಕಿಂಗ್ ಸ್ಟಾರ್ ಯಶ್ (Yash) ಮಹಿಳಾ ಫ್ಯಾನ್ಸ್ ಬೆಂಗಳೂರಿಗೆ ಬರ್ತಿದ್ದಾರೆ. ಈ ಮಧ್ಯೆ ಸಿನಿಮಾ ರಿಲೀಸ್ ನ ಬಿಡುವಿಲ್ಲದ ಶೆಡ್ಯೂಲ್ ಮಧ್ಯೆಯೂ ಸಿನಿಮಾದ ನಿರ್ಮಾಪಕ ವಿಜಯ್ ಕಿರಂಗದೂರು ತಮ್ಮ ಹುಟ್ಟೂರನ್ನು ಮರೆತಿಲ್ಲ. ಸಿನಿಮಾ ರಿಲೀಸ್ ಗೂ ಮುನ್ನ ವಿಜಯ್ ಮಂಡ್ಯದ ಕಿರಂಗದೂರಿಗೆ ಭೇಟಿ ನೀಡಿದ್ದು ತಮ್ಮ ಕುಟುಂಬದ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಟ ಯಶ್ ಕೂಡ ವಿಜಯ್ ಗೆ ಸಾಥ್ ನೀಡಿದ್ದಾರೆ.

ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ. ಇನ್ನೊಂದೆಡೆ ಸಿನಿಮಾ ನೋಡೋ ಕನಸಿನಲ್ಲಿದ್ದ ಕೆಜಿಎಫ್-2 ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ಮಲ್ಟಿಪ್ಲೆಕ್ಸ್ ಮತ್ತು ಕೆಜಿಎಫ್-2 ತಂಡದ ನಡುವಿನ ಭಿನ್ನಮತ ಶಮನಗೊಂಡ ಹಿನ್ನೆಲೆಯಲ್ಲಿ ಇಂದಿನಿಂದಲೇ ಮಲ್ಟಿಪ್ಲೆಕ್ಸ್ ನಲ್ಲೂ ಕೆಜಿಎಫ್-2 ಸಿನಿಮಾ ತೆರೆಗೆ ಬರಲಿದ್ದು, ಈಗಾಗಲೇ ಟಿಕೇಟ್ ಬುಕ್ಕಿಂಗ್ ಆರಂಭಗೊಂಡಿದೆ.

ಇದನ್ನೂ ಓದಿ : ತೆರೆಗೆ ಬಂದ ಧೀರ ಧೀರ ಧೀರ ಸುಲ್ತಾನಾ : ಮೋಡಿ ಮಾಡಿದ ಕೆಜಿಎಫ್-2 ಸಾಂಗ್

ಇದನ್ನೂ ಓದಿ : ಕೆಜಿಎಫ್-2 ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ : ಮಲ್ಟಿಪ್ಲೆಕ್ಸ್ ಗೆ ಬರಲ್ಲ ರಾಕಿ ಬಾಯ್ ಸಿನಿಮಾ

KGF-2 Women Show : First Day First Show, Special Show for Women

Comments are closed.