Yash : ಯಶ್! ರಾಜಮೌಳಿ ಅವರ ಸಿನಿಮಾಕ್ಕೆ ನಾನು ಫಿಟ್ ಅನಿಸಿದರೆ, ಆ ಅವಕಾಶ ಮಿಸ್ ಮಾಡಿಕೊಳ್ಳಲ್ಲ

ನಟ ಯಶ್ (Yash) ದೇಶದ ಎರಡನೇ ಪಾನ್ ಇಂಡಿಯಾ ಸಿನಿಮಾ ಮಾಡಿದ ಹೆಗ್ಗಳಿಕೆ. ಮೊದಲನೆಯದು ಬಾಹುಬಲಿ. ಎರಡನೆಯದು ಕೆಜಿಎಫ್ 1. ದೇಶದ ಎಲ್ಲಾ ಭಾಗದ ಮಾಧ್ಯಮಗಳನ್ನು ಒಂದೇ ಸೂರಿನಲ್ಲಿ ಸೇರಿಸಿ ಪಾನ್ ಇಂಡಿಯಾ ಸಿನಿಮಾದ ಘೋಷಣೆ ಮಾಡಿದ್ದ ಯಶ್. ಈಗ ಕೆಜಿಎಫ್ ಚಾಪ್ಟರ್ 2 ಮೂಲಕ ಮತ್ತೊಂದು ಮೈಲಿಗಲ್ಲು ನಿರ್ಮಿಸಲು ಹೊರಟಿದ್ದಾರೆ. ಏಪ್ರಿಲ್ 14 ಅಂದರೆ ನಾಳೆ ಸಿನಿಮಾ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಒಂದು ಹೊಸ ಸುದ್ದಿ ಓಡಾಡುತ್ತಿದೆ.

ಅದು ಏನೆಂದರೆ, ಯಶ್ ಮತ್ತು ರಾಜಮೌಳಿ ಇಬ್ಬರೂ ಸೇರಿ ಮಗದೊಂದು ಸಿನಿಮಾ ಮಾಡಲಿದ್ದಾರೆ. ಈ ವಿಚಾರ ಬಾಲಿವುಡ್ ನಲ್ಲೂ ಒಡಾಡತೊಡಗಿತ್ತು. ಈ ಇಬ್ಬರೂ ಜನಪ್ರಿಯನಟ, ನಿರ್ದೇಶಕರು ಒಟ್ಟಿಗೆ ಸೇರಿದರೆ ಎಂಥ ಅದ್ಭುತ ಸಿನಿಮಾ ಮಾಡಬಹುದು ಅನ್ನೋ ಲೆಕ್ಕಾಚಾರ ಶುರುವಾಗಿತ್ತು. ಆದರೆ, ಯಶ್ ಜೊತೆ ಸೇರಿ ಸಿನಿಮಾ ಮಾಡುವ ಬಗ್ಗೆ ರಾಜಮೌಳಿಯಾಗಲಿ ಅವರ ತಂಡವಾಗಲಿ ಖಚಿತಪಡಿಸಿಲ್ಲ. ಆರ್ ಆರ್ ಆರ್ ಗೆಲುವಿನ ನಂತರ ರಾಜಮೌಳಿ ಅವರಿಗೆ ಇಂಥ ಗಾಳಿಸುದ್ದಿ ಹೊಸದೇನಲ್ಲ. ರಾಜಮೌಳಿ ಅವರು ತಕ್ಷಣವೇ ಮಹೇಶ್ ಬಾಬು ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇದರ ಮುಂದವರಿದ ಭಾಗವಾಗಿ ಈಗ ಯಶ್ ರಾಜಮೌಳಿ ಅವರ ಸಿನಿಮಾದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ ಎನ್ನುವ ಸುದ್ದಿ ಓಡಾಡುತ್ತಿದೆ.

ಇದಕ್ಕೆ ಕಾರಣ, ಕೆಲವು ತಿಂಗಳ ಹಿಂದೆ ಯಶ್ ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ. ಕಥೆಯನ್ನು ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರೆಯುತ್ತಿದ್ದಾರೆ ಎನ್ನುವ ಸುದ್ದಿ ಜೋರಾಗಿತ್ತು. ಈ ಬಗ್ಗೆ ಯಶ್ ಅವರನ್ನು ಕೇಳಿದಾಗ ಅಂಥ ಅವಕಾಶ ದೊರೆತಿಲ್ಲ. ಸಿಕ್ಕರೆ ಗ್ಯಾರಂಟಿ ಬಿಡುವುದಿಲ್ಲ. ಅವರು ನನ್ನ ಫೇವರೇಟ್ ಡೈರೆಕ್ಟರ್. ಸಿನಿಮಾದ ಬಗ್ಗೆ ಅದ್ಬುತವಾದ ವಿಷನ್ ಇದೆ. ಒಂದು ಪಕ್ಷ ನಾನು ಅವರ ಯಾವುದಾದರು ಸಿನಿಮಾಕ್ಕೆ ಫಿಟ್ ಅನಸಿದ್ದೇ ಆದರೆ, ನಾನ್ಯಾಕೆ ನಟಿಸಬಾರದು ಎಂದು ಖುಷಿಯನ್ನು ಹಂಚಿಕೊಂಡಿದ್ದೇ ಮತ್ತೆ ಸುದ್ದಿಯಾಗಿದೆ.

ಪ್ರಸ್ತುತ ರಾಜಮೌಳಿ ಯಾವುದೇ ಕಾರಣಕ್ಕೂ ಯಶ್ ಗಾಗಿಯೇ ಪ್ರತ್ಯೇಕವಾಗಿ ಸಿನಿಮಾ ಮಾಡಲು ಸಾಧ್ಯವೇ ಇಲ್ಲ. ಕಾರಣ, ಈಗಾಗಲೇ ಅವರು ಮಹೇಶ್ ಬಾಬು ಅವರ ಸಿನಿಮಾ ಮಾಡುವ ಯೋಜನೆಯಲ್ಲಿದ್ದಾರೆ. ಇತ್ತ ಮಹೇಶ್ ಬಾಬು ತ್ರಿವಿಕ್ರಮ್ ಶ್ರೀನಿವಾಸ್ ಅವರ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಇದಾದ ನಂತರ ರಾಜಮೌಳಿ ಸಿನಿಮಾ ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಿರುವಾಗ ಯಶ್-ರಾಜಮೌಳಿ ಕಾಂಬಿನೇಷನ್ ಸಧ್ಯಕ್ಕೆ ಸೇರುವುದು ಅನುಮಾನ.

ಇದನ್ನೂ ಓದಿ : KGF Chapter 2 : ಕೆಜಿಎಫ್-2 ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ : ಮಲ್ಟಿಪ್ಲೆಕ್ಸ್ ಗೆ ಬರಲ್ಲ ರಾಕಿ ಬಾಯ್ ಸಿನಿಮಾ

ಇದನ್ನೂ ಓದಿ : KGF-2 Women Show : ಕೆಜಿಎಫ್-2 ಫಸ್ಟ್‌ ಡೇ ಫಸ್ಟ್‌ ಶೋ : ಮಹಿಳೆಯರಿಗಾಗಿ ಸ್ಪೆಷಲ್‌ ಶೋ ಆಯೋಜನೆ


(Yash If I am fit for Rajamouli film I never miss the opportunity)

Comments are closed.