ಆರೋಗ್ಯ ಸಂಸ್ಥೆಗಳಲ್ಲಿನ ಎಲ್ಲಾ ಮರಣಗಳಿಗೆ ಮರಣ ಕಾರಣ ಸಂಗ್ರಹಕ್ಕೆ ಸೂಚನೆ : ಆರೋಗ್ಯ ಇಲಾಖೆ

ಬೆಂಗಳೂರು : (Collection of cause of death) ಜನನ ಮರಣ ನೊಂದಣಿ ಅಧಿನಿಯಮದ ಅನ್ವಯ ಎಲ್ಲಾ ವೈದ್ಯರು ಹಾಗೂ ವೈದ್ಯ ವೃತ್ತಿಪರರು ಉಪಚರಿಸಿದ ವ್ಯಕ್ತಿಯು ಮೃತನಾದಲ್ಲಿ ಮೃತ ವ್ಯಕ್ತಿಯ ಮರಣ ಕಾರಣವನ್ನು ಹಾಗೂ ಎಲ್ಲಾ ಮಾಹಿತಿಗಳನ್ನು ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರದಲ್ಲಿ ಭರ್ತಿ ಮಾಡಿ ಮರಣ ಮುಖ್ಯ ನೋಂದಣಾಧಿಕಾರಿಗಳ ಕಛೇರಿಗೆ ಸಲ್ಲಿಸುವುದನ್ನು ಇನ್ನು ಮುಂದೆ ಕಡ್ಡಾಯ ಮಾಡಲಾಗಿದ್ದು, ಈ ಬಗ್ಗೆ ಜನನ ಮರಣಗಳ ಮುಖ್ಯ ನೋಂದಣಾಧಿಕಾರಿಗಳ ಕಛೇರಿ ಸುತ್ತೋಲೆಯನ್ನು ಹೊರಡಿಸಿದೆ.

ಮರಣ ಕಾರಣಗಳ ಸಂಗ್ರಹಣೆ ಮತ್ತು ವಿಶ್ಲೇಷ್ಣೆಯ ಮಾಹಿತಿಯು ಸರ್ಕಾರಕ್ಕೆ, ಆರೋಗ್ಯ ಸಂಶೋಧಕರಿಗೆ ಹಾಗೂ ನೀತಿ ರೂಪಣೆ ಕಾರ್ಯಗಳಲ್ಲಿ ವಿವಿಧ ತೀರ್ಮಾನಗಳನ್ನು ಮತ್ತು ಕ್ರಮಗಳನ್ನು ಕೈಗೊಳ್ಳಲು ಅವಶ್ಯಕವಿರುವ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಖಾಸಗಿ ಹಾಗೂ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಸಂಭವಿಸುವ ಎಲ್ಲಾ ಮರಣಗಳಿಗೂ ಮರಣ ಕಾರಣಗಳನ್ನು ಸಂಗ್ರಹಿಸಲು ಸೂಚಿಸಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಕೆಪಿಎಮ್‌ಪಿ ಕಾಯ್ದೆಯಡಿ ನೋಂದಣಿಯಾಗಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೂ ಇ-ಜನ್ಮ ತಂತ್ರಾಂಶದಲ್ಲಿ ಮರಣ ಘಟನೆಯ ಮಾಹಿತಿಯನ್ನು ದಾಖಲಿಸಲು ಯುಸರ್‌ ಐಡಿ ಹಾಗೂ ಪಾಸ್‌ ವರ್ಡ್‌ ನೀಡಲು ಕ್ರಮವಹಿಸಲು ತೀರ್ಮಾನಿಸಲಾಗಿದೆ.

ಇದರ ಜೊತೆಗೆ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಸಂಭವಿಸುವ ಪ್ರತಿ ಮರಣಗಳಿಗೆ ಅಂದರೆ ಸಾಂಸ್ಥಿಕ ಹಾಗೂ ಸಂಸ್ಥೆಯೇತರ ಮರಣಗಳಿಗೆ ನಮೂನೆ-೪ ಮತ್ತು ನಮೂನರ-೪ಎ ನಲ್ಲಿ ಭರ್ತಿ ಮಾಡಿ ಜನನ ಮರಣ ಮುಖ್ಯ ನೋಂದಣಾಧಿಕಾರಿಗಳ ಕಛೇರಿಗೆ ಸಲ್ಲಿಸಲು ತೀರ್ಮಾನಿಸಲಾಗಿದೆ.

ಇದನ್ನೂ ಓದಿ : Covid RT-PCR test : ಹೆಚ್ಚಿದ ಕೊರೊನಾ ಆತಂಕ : ರಾಜ್ಯ ಆರೋಗ್ಯ ಇಲಾಖೆಯಿಂದ ಮಹತ್ವದ ಪ್ರಕಟಣೆ

ಈ ಹಿನ್ನಲೆಯಲ್ಲಿ ಇನ್ನು ಮುಂದೆ ರಾಜ್ಯದಲ್ಲಿನ ಎಲ್ಲಾ ಸರಕಾರಿ/ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಸಂಭವಿಸುವ ಎಲ್ಲಾ ಮರಣಗಳಿಗೆ ಮರಣ ಕಾರಣಗಳನ್ನು ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ನಮೂನೆ -೪ ಮತ್ತು ೪ಎ ನಲ್ಲ ಪ್ರತಿದಿನಗಳ ಜನನ ಮರಣಗಳ ಮುಖ್ಯ ನೋಂದಣಾಧಿಕಾರಿಗಳ ಕಛೇರಿಗೆ ಸಲ್ಲಿಸಲು ಸೂಚಿಸಲಾಗಿದೆ. ಒಂದು ವೇಳೆ ಆ ದಿನ ಮರಣ ಘಟನೆಗಳು ಸಂಭವಿಸದೇ ಇದ್ದಲ್ಲಿ ಶೂನ್ಯ ವರದಿಯನ್ನು ಸಲ್ಲಿಸಲು ತಿಳಿಸಲಾಗಿದೆ. ಈ ಕುರಿತು ನಮೂನೆಗಳ ಖಾಲಿ ಪ್ರಪತ್ರಗಳನ್ನು ಸಂಬಂಧಿಸಿದ ಜಿಲ್ಲಾ ಸಂಗ್ರಹಣಾಧಿಕಾರಿಗಳ ಕಛೇರಿಯಿಂದ/ ಜಂಟಿ ನಿರ್ದೇಶಕರು, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯವರಿಂದ ಪಡೆಯಲು ತಿಳಿಸಲಾಗಿದೆ.

Collection of cause of death: Notice for collection of cause of death for all deaths in health institutions: Department of Health

Comments are closed.