BJP High Command : ರಾಜ್ಯ ಬಿಜೆಪಿಗೆ ವಲಸಿಗರೇ ಕಂಟಕ : ಸಚಿವ ಎಸ್.ಟಿ. ಸೋಮಶೇಖರ್‌ ಪುತ್ರನ ಪ್ರಕರಣದ ವರದಿ ಕೇಳಿದ ಹೈಕಮಾಂಡ್

ಬೆಂಗಳೂರು : ಅಧಿಕಾರದ ಆಸೆಗಾಗಿ ಕಾಂಗ್ರೆಸ್ ನಿಂದ ಆಫರೇಶನ್ ಕಮಲ‌ ಮಾಡಿ ಶಾಸಕರನ್ನು ಸೆಳೆದಿದ್ದ ಬಿಜೆಪಿ ವರ್ಚಸ್ಸಿಗೆ ವಲಸಿಗರೇ ಕಂಟಕವಾಗುತ್ತಿದ್ದಾರೆ. ವಲಸಿಗ ಶಾಸಕ ಹಾಗೂ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ರಾಸಲೀಲೆ ಬಹಿರಂಗವಾಗಿ ಮುಜುಗರ ಎದುರಿಸಿದ್ದ ಬಿಜೆಪಿ ಆ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಬ್ಬ ವಲಸಿಗ ಶಾಸಕ ಹಾಗೂ ಹಾಲಿ ಸಚಿವ ಎಸ್.ಟಿ.ಸೋಮಶೇಖರ್ ಪುತ್ರನ ಪ್ರಕರಣ ಮತ್ತೆ ಬಿಜೆಪಿ ರಾಜ್ಯ ನಾಯಕರಿಗೆ ಮುಜುಗರ ತಂದಿದೆ. ಈ ಹಿನ್ನೆಲೆಯಲ್ಲೀಗ ಬಿಜೆಪಿ ಹೈಕಮಾಂಡ್‌ ( BJP High Command ) ಪ್ರಕರಣದ ಕುರಿತು ವರದಿ ಕೇಳಿದೆ.

ಯಶವಂತಪುರ ಕ್ಷೇತ್ರ ಶಾಸಕ ಹಾಗೂ ಹಾಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪುತ್ರನದ್ದು ಎನ್ನಲಾದ ವಿಡಿಯೋವೊಂದು ನಿನ್ನೆಯಿಂದ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ಪ್ರಖ್ಯಾತ ಜ್ಯೋತಿಷಿ ಪುತ್ರ ರಾಹುಲ್ ಭಟ್ ಈ ವಿಡಿಯೋವನ್ನು ಬಳಸಿಕೊಂಡು ಸಚಿವ ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್ ನನ್ನು ಬ್ಲ್ಯಾಕ್ ಮೇಲ್ ಮಾಡಿದ್ದು ಸಿಸಿಬಿ ಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಭಟ್ ಜೊತೆ ಆತನ ಸ್ನೇಹಿತ ರಾಕೇಶ್ ಅಣ್ಣಪ್ಪ್ ಹಾಗೂ ಇನ್ನೋರ್ವ ನನ್ನು ವಶಕ್ಕೆ ಪಡೆದ ಸಿಸಿಬಿ ವಿಚಾರಣೆ ನಡೆಸಿದೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಸ್ .ಟಿ.ಎಸ್ ಪುತ್ರನ ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋದಿಂದ ಬಿಜೆಪಿ ಹೈಕಮಾಂಡ್ ಮುಜುಗರಕ್ಕೆ ಒಳಗಾಗಿದ್ದು ರಾಜ್ಯ ಬಿಜೆಪಿಯಿಂದ ವರದಿ ಕೇಳಿದೆ. ಹೈಕಮಾಂಡ್ ಸೂಚನೆ ಮೇರೆಗೆ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಸ್.ಟಿ.ಸೋಮಶೇಖರ್ ಪುತ್ರನದ್ದು ಎನ್ನಲಾದ ವಿಡಿಯೋದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೈಕಮಾಂಡ್ ಗೆ ಸಲ್ಲಿಸಿದ್ದಾರೆ. ಅಲ್ಲದೇ ಪೊಲೀಸ್ ತನಿಖೆಯ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ.

ಪಂಚ ರಾಜ್ಯಗಳ ಚುನಾವಣೆ ಎದುರಿನಲ್ಲಿ ಈ ರೀತಿಯ ಘಟನೆಗಳು ಹೆಚ್ಚಾದಲ್ಲಿ ಪಕ್ಷಕ್ಕೆ ಮುಜುಗರವಾಗಲಿದೆ ಎಂಬ ಕಾರಣಕ್ಕೆ ಹೈಕಮಾಂಡ್ ರಾಜ್ಯದ ವರಿಷ್ಠರಿಗೆ ಖಡಕ್ ವಾರ್ನಿಂಗ್ ಕೂಡ ರವಾನಿಸಿದೆ‌. ಈ ಹಿಂದೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಿಂದ ಬಿಜೆಪಿ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ತೀವ್ರ ಮುಖಭಂಗ ಅನುಭವಿಸಿತ್ತು. ಮಹಿಳಾ ಆಯೋಗಗಳು ಸೇರಿದಂತೆ ಹಲವರು ಸಂತ್ರಸ್ಥ ಮಹಿಳೆಯ ಪರ ನಿಂತು ರಮೇಶ್ ಜಾರಕಿಹೊಳಿ ಶಿಸ್ತು ಕ್ರಮ ಜರುಗಿಸಬೇಕು. ಸರ್ಕಾರದಿಂದ ರಮೇಶ್ ಕೈಬಿಡಬೇಕೆಂದು ಒತ್ತಾಯಿಸಿದ್ದರು. ಹೀಗಾಗಿ ಈ ಭಾರಿ ಆರಂಭದಲ್ಲೇ ಹೈಕಮಾಂಡ್ ಕಾಳಜಿ ವಹಿಸಿದ್ದು, ಪಕ್ಷದ ಇಮೇಜ್ ಗೆ ಧಕ್ಕೆಯಾಗದಂತೆ ಪ್ರಕರಣವನ್ನು ನಿಭಾಯಿಸುವಂತೆ ವರಿಷ್ಠರು ರಾಜ್ಯ ಬಿಜೆಪಿಗೆ ಆದೇಶಿಸಿದ್ದಾರಂತೆ.

ಇದನ್ನೂ ಓದಿ : ಡಿಕೆಶಿಗೆ ನಿಯಮ ಉಲ್ಲಂಘನೆ ನೊಟೀಸ್ : ಬಿಜೆಪಿ ನೊಟೀಸ್ ಗೆ ಹೆದರಲ್ಲ ಅಂದ್ರು ಕನಕಪುರ ಬಂಡೆ

ಇದನ್ನೂ ಓದಿ :  ಮತ್ತೊಬ್ಬ ಸಚಿವರ ಕುಟುಂಬಕ್ಕೆ ಅಶ್ಲೀಲ ವಿಡಿಯೋ ಕಂಟಕ : ಖ್ಯಾತ ಜ್ಯೋತಿಷಿ ಪುತ್ರ ಅರೆಸ್ಟ್

(minister SomaShekar son case, BJP High Command demand the report of the case)

Comments are closed.