painting a kitten with tiger paint : ಬೆಕ್ಕಿನ‌ ಮರಿಗೆ ಹುಲಿ ಬಣ್ಣ ಬಳಿದು ವಂಚನೆಗೆ ಯತ್ನ: ಖತರ್ನಾಕ್ ಯುವಕ‌ ಅಂದರ್

ಕೇರಳ : painting a kitten with tiger paint : ಅಡ್ಡ ದಾರಿಯಲ್ಲಿ ಹಣ ಸಂಪಾದಿಸೋಕೆ ಖದೀಮರು ಒಂದಲ್ಲ ಒಂದು ಐಡಿಯಾನ ಹುಡುಕುತ್ತಾರೆ. ಇಲ್ಲೊಬ್ಬ ಖತರ್ನಾಕ್ ಯುವಕನೊಬ್ಬ ಬೆಕ್ಕಿನ ಮರಿಗೆ ಹುಲಿಯ ಬಣ್ಣ ಬಳಿದು ಹಣ ಸುಲಿಗೆ ಮಾಡಲು ಯತ್ನಿಸಿ ತಗಲಾಕಿಕೊಂಡಿದ್ದಾನೆ. ಕೇರಳದ ಇಡುಕ್ಕಿಯಲ್ಲಿ ಈ ಘಟನೆ ನಡೆದಿದ್ದು ಸುಲಿಗೆ ಮಾಡಲು ಯತ್ನಿಸಿದ ತಮಿಳುನಾಡಿನ ಯುವಕನನ್ನು ಬಂಧಿಸಲಾಗಿದೆ.

ತಮಿಳುನಾಡಿನ ತಿರುವಣ್ಣಾಮಲ ಅರಣಿ ನಿವಾಸಿ ಇಪ್ಪತ್ತನಾಲ್ಕು ವರ್ಷ ವಯಸ್ಸಿನ ಪಾರ್ತಿಬನ್ ಬಂಧಿತ ಆರೋಪಿಯಾಗಿದ್ದು, ಈತ ಹುಲಿ ಮರಿಗಳನ್ನು ಮಾರಾಟ ಮಾಡುವುದಾಗಿ ಸಾಮಾಜಿಕ ಜಾಲತಾಣ ವಾಟ್ಸಪ್ ಮೂಲಕ ಪ್ರಚಾರ ಮಾಡಿದ್ದಾನೆ. ಮೂರು ತಿಂಗಳ ಮೂರು ಹುಲಿ‌ ಮರಿ ತನ್ನ ಬಳಿ ಇದ್ದು, ಒಂದು ಮರಿಗೆ ಇಪ್ಪತೈದು ಲಕ್ಷ ರೂನಂತೆ ಪಾವತಿಸಿದರೆ ಹತ್ತು‌ದಿನದೊಳಗೆ ಹೇಳಿದ ಸ್ಥಳಕ್ಕೆ ಹುಲಿ ಮರಿಯನ್ನು ತಲುಪಿಸುವುದಾಗಿ ವಾಟ್ಸಪ್ ನಲ್ಲಿ ಪೋಸ್ಟ್ ಹಾಕಿದ್ದಾನೆ. ಹುಲಿ ಮರಿಗಳಿಗೆ ಆಹಾರ ಹಾಕುತ್ತಿರುವ ಫೋಟೋವನ್ನು ಸಹ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದಾನೆ.

ವಾಟ್ಸಪ್ ನಲ್ಲಿ ಹುಲಿ ಮರಿಗಳ ಮಾರಾಟ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಈ ವಿಚಾರ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ತನ್ನ ಬೆನ್ನ ಹಿಂದೆ ಬಿದ್ದಿರುವ ಮಾಹಿತಿ ಪಡೆದ ಪಾರ್ಥಿಬನ್ ತಲೆಮರೆಸಿಕೊಂಡಿದ್ದ. ಬಳಿಕ ಪೊಲೀಸರ ನೆರವಿನೊಂದಿಗೆ ಹುಡುಕಾಟ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳ ಕೈಗೆ ಆರೋಪಿ ಯುವಕ ತಗಲಾಕಿಕೊಂಡಿದ್ದಾನೆ.‌

ಯುವಕನ‌ ಮನೆ ಪರಿಸರದಲ್ಲಿ ಪರಿಶೀಲನೆ ನಡೆಸಿದಾಗ ಹುಲಿ ಮರಿಗಳು ಪತ್ತೆಯಾಗಿಲ್ಲ. ಈತನ ಸ್ನೇಹಿತ ಹುಲಿ ಮರಿಗಳ ಚಿತ್ರ ಕಳುಹಿಸಿದ್ದು, ಬೆಕ್ಕಿನ ಮರಿಗಳಿಗೆ ಬಣ್ಣ ಹಚ್ಚಿ ಅವುಗಳನ್ನು ಹುಲಿ ಮರಿಗಳನ್ನಾಗಿ ಬಿಂಬಿಸೋದು ಇವರ ಪ್ಲ್ಯಾನ್ ಆಗಿತ್ತು. ಆದ್ರೆ ಇದೀಗ ಮಾಡಬಾರದ ಕೆಲಸ ಮಾಡೋಕೆ ಹೋಗಿ ಯುವಕ‌ ಅಂದರ್ ಆಗಿದ್ದಾನೆ. ಈ ವಂಚನೆ ಜಾಲದ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದಾರಾ ಎಂಬ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇದನ್ನು ಓದಿ : KL Rahul Dooda Ganesh : ನಮ್ಮ ಕನ್ನಡಿಗ ಕೆ.ಎಲ್ ರಾಹುಲ್ ವಿರುದ್ಧ ಮತ್ತೆ ವಿಷ ಕಾರಿದ ದೊಡ್ಡ ಗಣೇಶ್

ಇದನ್ನೂ ಓದಿ : Road Safety Series 2022 : ಇಂದಿನಿಂದ ದಿಗ್ಗಜರ ಕ್ರಿಕೆಟ್; ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಕ್ರಿಕೆಟ್ ದೇವರು

Attempt to cheat by painting a kitten with tiger paint

Comments are closed.