Minister Umesh Katthi : ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕೆಂಬುದಕ್ಕೆ ಕಾಂಗ್ರೆಸ್​ನಲ್ಲಿ ಸ್ಪಷ್ಟತೆಯಿಲ್ಲ : ಕತ್ತಿ ವ್ಯಂಗ್ಯ

ವಿಜಯಪುರ : Minister Umesh Katthi : ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ರಾಜ್ಯದ ಜನತೆಗೆ ಉಚಿತ ಅಕ್ಕಿ ನೀಡುತ್ತೇನೆಂದು ಆಶ್ವಾಸನೆ ಕೊಟ್ಟಿರುವ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ವಿಜಯಪುರದ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಟಾಂಗ್​ ನೀಡಿದ್ದಾರೆ. ಸಿದ್ದರಾಮಯ್ಯ ಈ ಹಿಂದೆ ತಾನು 10 ಕೆಜಿ ಉಚಿತ ಅಕ್ಕಿ ಕೊಡುತ್ತೇನೆ ಎಂದೂ ಭಾಷಣ ಮಾಡೊದ್ದರು. ಆದರೆ ಅಧಿಕಾರಕ್ಕೆ ಬಂದಮೇಲೆ 2 ತಿಂಗಳು ಆ ರೀತಿ ನಡೆದುಕೊಂಡಿದ್ದು ಬಿಟ್ಟರೆ ಮತ್ತೆ ಯಾವತ್ತೂ ಕೊಟ್ಟಿಲ್ಲ ಎಂದು ವ್ಯಂಗ್ಯವಾಡಿದರು.


ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್​ನಲ್ಲಿ ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಪೈಪೋಟಿ ವಿಚಾರವಾಗಿಯೂ ಇದೇ ವೇಳೆ ಲೇವಡಿ ಮಾಡಿದ ಸಚಿವ ಉಮೇಶ್​ ಕತ್ತಿ, ಕಾಂಗ್ರೆಸ್ಸಿಗರಿಗೆ ಮಾಡಲು ಕೆಲಸವಿಲ್ಲ. ಸಿದ್ದರಾಮಯ್ಯ ಅಥವಾ ಡಿಕೆ.ಶಿವಕುಮಾರ್​ ಇಬ್ಬರಲ್ಲಿ ಯಾರ ನೇತೃತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕು ಎಂಬ ಸ್ಪಷ್ಟತೆ ಅವರಿಗಿಲ್ಲ. ಮೊದಲು ಕಾಂಗ್ರೆಸ್ಸಿಗರು ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಕಾಲೆಳೆದರು.


ನಾವು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಲಿದ್ದೇವೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿಯೇ ಎಲೆಕ್ಷನ್​ಗೆ ಹೋಗಲಿದ್ದೇವೆ. ಚುನಾವಣೆಯಲ್ಲಿ ಗೆದ್ದ ಬಳಿಕ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿಯೇ ಸಚಿವ ಸಂಪುಟ ಆಯ್ಕೆ ಪ್ರಕ್ರಿಯೆ ಕೂಡ ನಡೆಯಲಿದೆ. ಹೀಗೆ ಹೇಳುವ ತಾಕತ್ತು ಕಾಂಗ್ರೆಸ್ಸಿನವರಿಗೆ ಇದ್ದರೆ ಹೇಳಲಿ. ನಾವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ. ಇದರಲ್ಲಿ 130ಕ್ಕಿಂತ ಹೆಚ್ಚು ಸೀಟಂತೂ ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.


ಸರ್ಕಾರದ ಜಾಹಿರಾತಿನಲ್ಲಿ ದೇಶದ ಮೊದಲ ಪ್ರಧಾನಿ ಜವಹರಲಾಲ್​ ನೆಹರೂ ಭಾವಚಿತ್ರವನ್ನು ಕೈ ಬಿಟ್ಟ ವಿಚಾರವಾಗಿ ಮಾತನಾಡಿದ ಕತ್ತಿ, ಕಾಂಗ್ರೆಸ್ಸಿಗರು ಮೊದಲು ಇಂತಹ ವಿಚಾರಗಳಿಗೆ ಬಣ್ಣ ಹಚ್ಚುವುದನ್ನು ಬಿಡಲಿ. ನಾವೀಗ ಅಮೃತ ಮಹೋತ್ಸವ ಆಚರಣೆಯ ಸಂಭ್ರಮದಲ್ಲಿದ್ದೇವೆ. ಒಂದೆರಡು ಭಾವಚಿತ್ರಗಳು ಬಿಟ್ಟು ಹೋದರೆ ಅದೇನು ದೊಡ್ಡ ತಪ್ಪಲ್ಲ. ಇದನ್ನೇ ಮೀಡಿಯಾದ ಎದುರು ಹೇಳುವುದು ಬೇಡ. ಇಂತಹ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ನಡೆಯುತ್ತಲೇ ಇರಲಿ ಎಂದು ಹೇಳಿದರು.

ಇದನ್ನು ಓದಿ : Egyptian church : ಚರ್ಚ್​ನಲ್ಲಿ ಅಗ್ನಿ ಅವಘಡ : 41 ಮಂದಿ ದಾರುಣ ಸಾವು, ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳು ಎಂದ ಸಚಿವಾಲಯ

ಇದನ್ನೂ ಓದಿ : Mangalore airport : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬರ್​ ಆತಂಕ : ಯುವತಿ ಸೇರಿದಂತೆ ಇಬ್ಬರು ಖಾಕಿ ವಶಕ್ಕೆ

Minister Umesh Katthi vented his anger against Congress leaders

Comments are closed.