Rishabh Pant brand ambassador : ದೆಹಲಿಯ ರಿಷಭ್ ಪಂತ್ ಉತ್ತರಾಖಂಡ್ ಸರ್ಕಾರದ ಬ್ರಾಂಡ್ ಅಂಬಾಸಿಡರ್

ಡೆಹ್ರಾಡೂನ್: (Rishabh Pant brand ambassador) ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಉತ್ತರಾಖಂಡ್ ಸರ್ಕಾರದ ಕ್ರೀಡಾ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ರಿಷಭ್ ಪಂತ್ ಅವರನ್ನು ತಮ್ಮ ರಾಜ್ಯದ ರಾಯಭಾರಿಯಾಗಿ ನೇಮಿಸಿ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆದೇಶ ಹೊರಡಿಸಿದ್ದಾರೆ. ದೇಶೀಯ ಕ್ರಿಕೆಟ್’ನಲ್ಲಿ ದೆಹಲಿಯನ್ನು ಪ್ರತಿನಿಧಿಸುವ ರಿಷಭ್ ಪಂತ್ ದೆಹಲಿಯಲ್ಲೇ ವಾಸವಾಗಿದ್ದಾರೆ. ಹಾಗಾದ್ರೆ ದೆಹಲಿಯ ರಿಷಭ್ ಪಂತ್ ಅವರಿಗೆ ಉತ್ತರಾಖಂಡ್ ಸರ್ಕಾರ ಕ್ರೀಡಾ ರಾಯಭಾರಿ ಗೌರವ ನೀಡಿದ್ದೇಕೆ? ಈ ಆಯ್ಕೆಯ ಹಿಂದೆಯೂ ಒಂದು ಇಂಟ್ರೆಸ್ಟಿಂಗ್ ಸಂಗತಿ ಅಡಗಿದೆ.

ರಿಷಭ್ ಪಂತ್ ಕ್ರಿಕೆಟ್ ಆಡಿದ್ದು, ಬೆಳೆದದ್ದು ಎಲ್ಲಾ ದೆಹಲಿಯಲ್ಲಾದ್ರೂ ಅವರ ಹುಟ್ಟೂರು ಉತ್ತರಾಖಂಡ್… ರಿಷಭ್ ಪಂತ್ ಉತ್ತರಾಖಂಡ್’ನ ಹರಿದ್ವಾರ ಜಿಲ್ಲೆಯ ರೂರ್ಕಿಯವರು. ಕ್ರಿಕೆಟ್’ಗಾಗಿ ದೆಹಲಿಗೆ ವಾಸಸ್ಥಾನ ಬದಲಿಸಿದ್ದ ರಿಷಭ್ ಪಂತ್ ಅವರ ಕುಟುಂಬ ಈಗಲೂ ಹರಿದ್ವಾರದಲ್ಲೇ ವಾಸವಾಗಿದೆ. ಹೀಗಾಗಿ ತಮ್ಮ ರಾಜ್ಯದ ಹೆಮ್ಮೆಯ ಆಟಗಾರನಿಗೆ ಉತ್ತರಾಖಂಡ್ ಸರ್ಕಾರ ಕ್ರೀಡಾ ರಾಯಭಾರಿಯ ಗೌರವ ನೀಡಿದೆ. ಉತ್ತರಾಖಂಡ್ ರಾಜ್ಯದ ಕ್ರೀಡೆಯನ್ನು ರಿಷಬ್ ಪಂತ್ ಉತ್ತೇಜಿಸಲಿದ್ದಾರೆ.

“ಸಾಮಾನ್ಯ ಕುಟುಂಬದಿಂದ ಬಂದು ತಮ್ಮ ಮನೋಸ್ಥೈರ್ಯದಿಂದ ಕ್ರಿಕೆಟ್ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿರುವ ರಿಷಬ್ ಪಂತ್ ನಿಜಕ್ಕೂ ಮಾದರಿ ಮತ್ತು ಸ್ಫೂರ್ತಿ. ತಮ್ಮ ಸಾಧನೆಯಿಂದ ರಿಷಬ್ ರಾಜ್ಯ ಮತ್ತು ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅವರನ್ನು ರಾಯಭಾರಿಯನ್ನಾಗಿ ಮಾಡಿರುವುದು ಉತ್ತರಾಖಂಡ್’ನ ಕ್ರೀಡಾ ವಿಭಾಗದಲ್ಲಿ ಯುವ ಜನತೆಗೆ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆಯಾಗಲಿದೆ” ಎಂದು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ತಮ್ಮನ್ನು ಉತ್ತರಾಖಂಡ್ ರಾಜ್ಯದ ರಾಯಭಾರಿ ಯನ್ನಾಗಿ ಮಾಡಿರುವುದಕ್ಕೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯವರಿಗೆ ರಿಷಭ್ ಪಂತ್ ಕೃತಜ್ಞತೆ ಸಲ್ಲಿಸಿದ್ದಾರೆ.

ಭಾರತ ಪರ 31 ಟೆಸ್ಟ್ ಪಂದ್ಯಗಳನ್ನಾಡಿರುವ 24 ವರ್ಷದ ರಿಷಭ್ ಪಂತ್ 5 ಶತಕಗಳೊಂದಿಗೆ 2,123 ರನ್ ಗಳಿಸಿದ್ದಾರೆ. 27 ಏಕದಿನ ಪಂದ್ಯಗಳಿಂದ 1 ಶತಕ ಸಹಿತ 840 ರನ್ ಹಾಗೂ 54 ಟಿ20 ಪಂದ್ಯಗಳಿಂದ 883 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : India Tour of Zimbabwe : ಜಿಂಬಾಬ್ವೆಯಲ್ಲಿ ಅಭ್ಯಾಸ ಆರಂಭಿಸಿದ ಕೆ.ಎಲ್ ರಾಹುಲ್ ಬಳಗ

ಇದನ್ನೂ ಓದಿ : Cricketers celebrates Independence Day: 75ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ ಕ್ರಿಕೆಟಿಗರು

Cricketer Rishabh Pant named Uttarakhand’s brand ambassador

Comments are closed.