Tejaswisooriya’s Controversial Statement : ಮುಸ್ಲಿಂ, ಕ್ರೈಸ್ತ್ ರನ್ನು ಮರು ಮತಾಂತರ ಮಾಡಿ: ಸಂಸದ ತೇಜಸ್ವಿಸೂರ್ಯ ವಿವಾದಾತ್ಮಕ ಹೇಳಿಕೆ

ಉಡುಪಿ : ತೀವ್ರ ವಿರೋಧದ ನಡುವೆಯೂ ಬಿಜೆಪಿ ಸರ್ಕಾರ ಮತಾಂತರ ನಿಷೇಧದ ಕಾಯಿದೆ ಜಾರಿಗೆ ತಂದಿದೆ. ಇದರ ಬೆನ್ನಲ್ಲೇ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejaswisooriya’s Controversial Statement)ಕ್ರೈಸ್ತ್ ಮತ್ತು ಮುಸ್ಲಿಂರನ್ನು ಘರವಾಪಸಿ ಮಾಡದೇ ಬೇರೆ ವಿಧಿಯಿಲ್ಲ ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.

ಉಡುಪಿಯ ಕೃಷ್ಣಮಠದಲ್ಲಿ ನಡೆಯುತ್ತಿರುವ ವಿಶ್ವರೂಪಂ ಕಾರ್ಯಕ್ರಮದಲ್ಲಿ ರೋಷಾವೇಷದಿಂದ ಮಾತನಾಡಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಘರವಾಪಸೀ ಯನ್ನು ನಾವು ಆದ್ಯ ಕರ್ತವ್ಯದ ರೀತಿಯಲ್ಲಿ ಮಾಡಬೇಕಾಗಿದೆ‌. ಇದಕ್ಕೆ ಕರುನಾಡಿನ ಮಠಮಾನ್ಯಗಳ ಸಂತರು ನಾಯಕತ್ವ ವಹಿಸಬೇಕು ಎಂದು ತೇಜಸ್ವಿ ಸೂರ್ಯಬಹಿರಂಗ ಹೇಳಿಕೆ ನೀಡಿದ್ದಾರೆ. ಟಿಪ್ಪುವಿನ ಖಡ್ಗದ ಕಾರಣಕ್ಕೆ ಈ ನಾಡಿನಲ್ಲಿ,ದೇಶದಲ್ಲಿ ಸಾಕಷ್ಟು ಮತಾಂತರಗಳು ಆಗಿವೆ.ಹೀಗಾಗಿ ಮುಸ್ಲಿಂ ಹಾಗೂ ಕ್ರೈಸ್ತ್ ರನ್ನು ಮತಾಂತರ ಮಾಡದೇ ಬೇರೆ ವಿಧಿಯಿಲ್ಲ. ಕೇವಲ ಮುಸ್ಲಿಂ ಕ್ರಿಶ್ಚಿಯನ್ ಮಾತ್ರವಲ್ಲ ಚೀನಾ ಹಾಗೂ ಜಪಾನ್ ಗೆ ಮತಾಂತರ ಆದವರನ್ನು ವಾಪಸ್ ಕರೆತರಬೇಕು.

ಟಿಪ್ಪುವಿನ ಭಯಕ್ಕೆ ಮತಾಂತರ ಆದವರನ್ನು ಟಿಪ್ಪು ಜಯಂತಿಯಂದೇ ನಮ್ಮ ಧರ್ಮಕ್ಕೆ ನಾವು ವಾಪಸ ತರಬೇಕು. ನಮ್ಮ ದೇವರನ್ನು ಪೂಜಿಸಿಕೊಂಡು ಬದುಕುದು ಹಿಂದುವಿನ ಲಕ್ಷಣ. ಆದರೆ ನಮ್ಮ ಧರ್ಮದ ನಂಬಿಕೆಗಳಿಗೆ, ಧರ್ಮಕ್ಕೆ ಧಕ್ಕೆ ಬಂದಾಗ ಖಡ್ಗ ಹಿಡಿದು ಹೋರಾಡುವುದು ಹಿಂದುತ್ವ ಎಂದು ತೇಜಸ್ವಿ ಸೂರ್ಯ ವ್ಯಾಖ್ಯಾನಿಸಿದ್ದಾರೆ. ಘರವಾಪಸೀ ಯನ್ನು ನಾವು ನಮ್ಮ ಊರು,ಗ್ರಾಮ ಮನೆ ಪಕ್ಕದಿಂದಲೇ ಆರಂಭಿಸಬೇಕು ಎಂದಿರುವ ತೇಜಸ್ವಿ ಸೂರ್ಯ, ದೊಡ್ಡ ಕನಸುಗಳನ್ನು ಕಾಣಬೇಕು. ಸಾಧನೆಗೆ ಅಸಾಧ್ಯ ಎಂಬುದು ಯಾವುದು ಇಲ್ಲ. ಈ ದೇಶದಲ್ಲಿ ರಾಮಮಂದಿರ ಕಟ್ಟುತ್ತಿದ್ದೇವೆ. ಕಾಶ್ಮೀರದ 370 ಕಾಯಿದೆ ತೆಗೆದು ಹಾಕಿದ್ದೇವೆ ಎಂದಿದ್ದಾರೆ.

ಪಾಕಿಸ್ತಾನ್ ದ ಮುಸ್ಲಿಂರನ್ನು ಹಿಂದೂಗಳಾಗಿ ಪರಿವರ್ತನೆ ಮಾಡಬೇಕೆಂದು ತೇಜಸ್ವಿ ಸೂರ್ಯ ಕರೆ ನೀಡಿದ್ದು, ಘರವಾಪಸೀಯನ್ನು ನಾವು ಆದ್ಯಕರ್ತವ್ಯದಂತೆ ಮಾಡಬೇಕು ಯಾಕೆಂದರೆ ಅಖಂಡ ಭಾರತದ ಪರಿಕಲ್ಪನೆ ಪಾಕಿಸ್ತಾನವನ್ನು ಒಳಗೊಂಡಿದೆ ಎನ್ನುವ ಮೂಲಕ ಹೊಸ ವಿವಾದದ ಕಿಡಿ ಹೊತ್ತಿಸಿದ್ದಾರೆ. 2014 ಕ್ಕೂ ಮೊದಲು ಹಿಂದುಗಳು ಹೀಗೆ ಬಹಿರಂಗವಾಗಿ ಮಾತನಾಡುವ ಸ್ಥಿತಿ ಇರಲಿಲ್ಲ. ಒಂದೊಮ್ಮೆ ಹೀಗೆ ಮಾತನಾಡಿದರೇ ಸಭೆ ಸಮಾರಂಭದ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತಿತ್ತು ಎನ್ನುವ ಮೂಲಕ ಕಾಂಗ್ರೆಸ್ ಗೆ ಕುಟುಕಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಅವರು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ರು

ಒಟ್ಟಿನಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಾಗುತ್ತಿದ್ದಂತೆ ತೇಜಸ್ವಿ ಸೂರ್ಯ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರನ್ನು ಮರುಮತಾಂತರ ಮಾಡುವ ಮಾತನಾಡಿದ್ದು ಹೊಸ ವಿವಾದಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.

ಇದನ್ನೂ ಓದಿ : Vaastu Tips Broom : ಮನೆಯಲ್ಲಿರುವ ಪೊರಕೆಯು ನಿರ್ಧರಿಸುತ್ತೆ ನಿಮ್ಮ ಆರ್ಥಿಕ ಸ್ಥಿತಿ

ಇದನ್ನೂ ಓದಿ : COVID-19 Vaccination Children : ಓಮೈಕ್ರಾನ್, ಕೊರೊನಾ ನಿಯಂತ್ರಣ ಕ್ಕೆ ಮಾಸ್ಟರ್ ಪ್ಲ್ಯಾನ್: 15-18 ವಯಸ್ಸಿನ ಮಕ್ಕಳಿಗೆ ವಾಕ್ಸಿನ್

(MP Tejaswisooriya’s controversial statement on the conversion of Muslims and Christian to Hindus)

Comments are closed.