COVID-19 Vaccination Children : ಓಮೈಕ್ರಾನ್, ಕೊರೊನಾ ನಿಯಂತ್ರಣ ಕ್ಕೆ ಮಾಸ್ಟರ್ ಪ್ಲ್ಯಾನ್: 15-18 ವಯಸ್ಸಿನ ಮಕ್ಕಳಿಗೆ ವಾಕ್ಸಿನ್

ನವದೆಹಲಿ : ದೇಶದಲ್ಲಿ ಓಮೈಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸಿ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದರು. ಇದೀಗ ಕ್ರಿಸ್ಮಸ್ ದಿನದಂದು ರಾತ್ರಿ 9.40 ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ತುರ್ತು ಭಾಷ‌ಣ ಮಾಡಿದ್ದು ತಜ್ಞರ ಸಲಹೆಯಂತೆ ದೇಶದಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕರೋನಾ ಲಸಿಕೆ ಹಾಗೂ ಫ್ರಂಟ್ ಲೈನ್ ವಾರಿಯರ್ಸ್ ಗೆ (COVID-19 Vaccination Children)ಬೂಸ್ಟರ್ ಡೋಸ್ ನೀಡುವುದಾಗಿ ಪ್ರಕಟಿಸಿದ್ದಾರೆ.

ಮಕ್ಕಳಿಗೆ ಕೊರೋನಾ ಲಸಿಕೆ‌ ನೀಡುವ ಅಭಿಯಾನ ಆರಂಭಿಸುವುದಾಗಿ ಮೋದಿ ಪ್ರಕಟಿಸಿದ್ದು ಜನವರಿ 3 ರಿಂದಲೇ ಶಾಲಾ ಹಾಗೂ ಕಾಲೇಜುಗಳಲ್ಲಿ ಲಸಿಕಾ ಆಭಿಯಾನ ಆರಂಭ ವಾಗಲಿದೆ. ಇದಲ್ಲದೇ ದೇಶದಾದ್ಯಂತ ಕೊರೋನಾ ಫ್ರಂಟ್ ಲೈನ್ ವಾರಿಯರ್ಸ್ ಗೆ ಆರೋಗ್ಯ ಕಾರ್ಯಕರ್ತರಿಗೆ ಜನವರಿ 10 ರಿಂದ ಮುನ್ನೆಚ್ಚರಿಕೆ ಡೋಸ್ ನೀಡಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಘೋಷಿಸಿದ್ದಾರೆ.

ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರವಲ್ಲ ತೀವ್ರ ರೋಗ ಪೀಡಿತರಿಗೆ ಕೂಡಾ ಬೂಸ್ಟರ್ ಡೋಸ್ ನೀಡಲು ನಿರ್ಧರಿಸಿದ್ದಾರೆ. ಅಲ್ಲದೇ 60 ವರ್ಷ ಮೇಲ್ಟಟ್ಟವರಿಗೂ ಆದ್ಯತೆಯ ಮೇರೆಗೆ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುತ್ತದೆ. ಅಲ್ಲದೇ ದೇಶದಾದ್ಯಂತ 5 ಲಕ್ಷಕ್ಕೂ ಅಧಿಕ ಆಕ್ಸಿಜನ್ ಬೆಡ್ ವ್ಯವಸ್ಥೆ ಕಲ್ಪಿಸಲಾಗಿದ್ದು ರಾಜ್ಯಗಳಲ್ಲೂ ರೋಗಿಗಳಿಗೆ ಬೆಡ್ ಹಾಗೂ ಆಕ್ಸಿಜನ್ ಬೆಡ್ ಸಿದ್ಧಪಡಿಸುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ.

ನಾವು ಕೊರೋನಾ ಹಾಗೂ ಓಮೈಕ್ರಾನ್ ವಿರುದ್ಧ ಮೂರು ಅಸ್ತ್ರಗಳೊಂದಿಗೆ ಹೋರಾಡಬೇಕಿದ್ದು, ಮುನ್ನೆಚ್ಚರಿಕೆ,ಲಸಿಕೆ, ಕೊರೋನಾ ನಿಯಮಗಳನ್ನು ಪಾಲಿಸುವ ಮೂಲಕ ನಾವೆಲ್ಲರೂ ಜವಾಬ್ದಾರಿ ನಿಭಾಯಿಸಬೇಕು ಎಂದಿದ್ದಾರೆ. ಕೊರೋನಾ ಹಾಗೂ ಓಮೈಕ್ರಾನ್ ಆತಂಕ ದೇಶದಲ್ಲಿ ಹೆಚ್ಚಿದ್ದು ಶಾಲಾ ಕಾಲೇಜುಗಳಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಆತಂಕ ಶುರು ವಾಗಿದೆ. ಆದರೆ ಮತ್ತೊಮ್ಮೆ ಶೈಕ್ಷಣಿಕ ಚಟುವಟಿಕೆಗಳನ್ನು ಬಂದ್ ಮಾಡಿದಲ್ಲಿ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇದೇ ಕಾರಣಕ್ಕೆ ಲಸಿಕೆ ನೀಡಿ ಮಕ್ಕಳನ್ನು ಸೋಂಕಿನ ವಿರುದ್ಧ ಹೋರಾಡುವಂತೆ ಮಾಡುವ ಉದ್ದೇಶ ಕೇಂದ್ರ ಸರ್ಕಾರದ್ದಾಗಿದೆ.

ಇನ್ನು ಕೇಂದ್ರ ಸರ್ಕಾರದ ನಿರ್ಧಾರವನ್ನು ಬಯೋಟೆಕ್ ಸಂಸ್ಥೆ ಸ್ವಾಗತಿಸಿದ್ದು, ವಯಸ್ಕರಿಗೆ ನೀಡುವಷ್ಟೇ ಡೋಸ್ ಮಕ್ಕಳಿಗೂ ನೀಡಲಾಗುತ್ತದೆ. ಇದರಿಂದ ಅವರಲ್ಲಿ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಬರಲಿದ್ದು ಕೇಂದ್ರದ ಈ ನಿರ್ಧಾರ ಸ್ವಾಗತಾರ್ಹ. ಇದರಿಂದ ಪೋಷಕರಿಗೂ ಧೈರ್ಯ ಬರಲಿದೆ ಎಂದಿದೆ.

ಇದನ್ನೂ ಓದಿ :BBMP Helpline : ಮೋದಿ ಸೂಚನೆ ಇದ್ದರೂ ಡೋಂಟ್ ಕೇರ್ : ನಿದ್ರೆ ಯಲ್ಲಿದೆ ಬಿಬಿಎಂಪಿ ಹೆಲ್ಪ್ ಲೈನ್ ಸೆಂಟರ್

ಇದನ್ನೂ ಓದಿ : 33 Students Corona : ಕೋಲಾರದ ಮೆಡಿಕಲ್ ಕಾಲೇಜಿನ 33 ವಿದ್ಯಾರ್ಥಿಗಳಿಗೆ ಕೊರೊನಾ

( COVID-19 vaccination for children between 15-18, boosters for above 60 years and healthcare workers, announces PM Narendra Modi)

Comments are closed.