Karnataka Night Curfew : ರಾಜ್ಯದಲ್ಲಿ ಹತ್ತು ದಿನ ನೈಟ್‌ ಕರ್ಪ್ಯೂ ಜಾರಿ : ಮಕ್ಕಳಿಗೆ ಜ.3 ರಿಂದ ಲಸಿಕೆ : ಸಚಿವ ಡಾ.ಸುಧಾಕರ್‌

ಬೆಂಗಳೂರ : ರಾಜ್ಯದಲ್ಲಿ ಓಮೈಕ್ರಾನ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಜನವರಿ ೨೮ರಿಂದ ಹತ್ತು ದಿನಗಳ ಕಾಲ ನೈಟ್‌ ಕರ್ಪ್ಯೂ ಜಾರಿ ಮಾಡಲಾಗುತ್ತದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ನೈಟ್‌ ಕರ್ಪ್ಯೂ (Karnataka Night Curfew) ಜಾರಿಯಲ್ಲಿರಲಿದೆ. ಅಲ್ಲದೇ ಮಕ್ಕಳಿಗೆ ಜನವರಿ 3 ರಿಂದ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆಯನ್ನು ನೀಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌ ಹೇಳಿದ್ದಾರೆ.

ಸಿಎಂ ಬಸವರಾಜ್‌ ಬೊಮ್ಮಾಯಿ ಅವರ ನೇತೃತ್ವದಲ್ಲಿಂದು ಓಮಿಕ್ರಾನ್‌ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ, ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಿದ್ರು. ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು, ರಾಜ್ಯದಲ್ಲಿ ಹೊಸ ವರ್ಷಾಚರಣೆಯ ಹೊತ್ತಲೇ ಓಮಿಕ್ರಾನ್‌ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗುವುದು. ಇತರ ರಾಜ್ಯಗಳಲ್ಲಿ ಓಮಿಕ್ರಾನ್‌ ಹೆಚ್ಚುತ್ತಿರುವ ಕುರಿತು ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಓಮೈಕ್ರಾನ್‌ ಅತ್ಯಂತ ವೇಗವಾಗಿ ಹರಡುತ್ತಿದೆ, ಇದೀಗ ಕೋವಿಡ್‌ ತಾಂತ್ರಿಕ ಸಮಿತಿಯ ಸಲಹೆಯ ಮೇರೆಗೆ ರಾಜ್ಯದಲ್ಲಿ ಡಿಸೆಂಬರ್‌ 28ರಂದು ರಾತ್ರಿ 10 ದಿನಗಳ ಕಾಲ ನೈಟ್‌ ಕರ್ಪ್ಯೂ ಜಾರಿ ಮಾಡಲಾಗುತ್ತಿದೆ. ಜನವರಿ 6ರ ವರೆಗೆ ಜಾರಿಯಲ್ಲಿರಲಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ಎಲ್ಲಾ ಚಟುವಟಿಕೆಗಳು ಸ್ತಭ್ದವಾಗಲಿದೆ ಎಂದಿದ್ದಾರೆ.

ಸಭೆಯಲ್ಲಿ ಓಮೈಕ್ರಾನ್‌ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಅನ್ನುವ ಕುರಿತು ಹಲವು ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಲಾಗಿದೆ. ರಾಜ್ಯದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಆಚರಣೆಯನ್ನು ನಿಷೇಧಿಸಲಾಗಿದೆ. ಇನ್ನು ಎಲ್ಲಾ ಹೋಟೆಲ್‌ಗಳಲ್ಲಿ ಶೇ.೫೦ರಷ್ಟು ಪ್ರವೇಶಾತಿಗೆ ಮಾತ್ರವೇ ಅವಕಾಶವನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಸೂಚನೆಯನ್ನು ನೀಡಲಾಗಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ ನೀಡಿದಂತೆ ರಾಜ್ಯದಲ್ಲಿಯೂ ಮಕ್ಕಳಿಗೆ ಲಕಸಿಕೆಯನ್ನು ನೀಡಲಾಗುತ್ತೆ. ಆರಂಭಿಕ ಹಂತದಲ್ಲಿ ೧೫-೧೮ ವರ್ಷದ ಮಕ್ಕಳಿಗೆ ಲಸಿಕೆ ಯನ್ನು ನೀಡಲಾಗುತ್ತದೆ. ಜನವರಿ 3ನೇ ತಾರೀಕಿನಿಂದ ಲಸಿಕೆ ನೀಡುವ ಕಾರ್ಯವನ್ನು ಆರಂಭಿಸಲಾಗುತ್ತದೆ. ಇನ್ನು ೬೦ ವರ್ಷ ಮೇಲ್ಪಟ್ಟು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೂಸ್ಟರ್‌ ಡೋಸ್‌ ನೀಡುವ ಕಾರ್ಯಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಜನವರಿ ೧೦ರಿಂದ ಬೂಸ್ಟರ್‌ ಡೋಸ್‌ ನೀಡಲಾಗುತ್ತದೆ ಎಂದಿದ್ದಾರೆ.

ರಾಜ್ಯದಲ್ಲಿ ಶೇ.97ರಷ್ಟು ಜನರಿಗೆ ಮೊದಲು ಡೋಸ್‌ ನೀಡಲಾಗಿದ್ದು, ಶೇ. 3ರಷ್ಟು ಜನರಿಗೆ ಮಾತ್ರವೇ ಮೊದಲ ಡೋಸ್‌ ನೀಡುವ ಕಾರ್ಯ ಬಾಕಿ ಉಳಿದಿದೆ. ಶೇ.3.5ರಷ್ಟು ಜನರಿಗೆ ಎರಡನೇ ಡೋಸ್‌ ಲಸಿಕೆಯನ್ನು ನೀಡಲಾಗಿದೆ. ಇದೀಗ ಶೇ. 100ರಷ್ಟು ಲಸಿಕೆ ನೀಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಿದೆ. ದೇಶದಲ್ಲಿಯೇ ಅತ್ಯಧಿಕ ಕೊರೊನಾ ಲಸಿಕೆ ನೀಡಿದ ರಾಜ್ಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಇಲಾಖೆ ಹಾಗೂ ಇತರ ಇಲಾಖೆಗಳಿಗೆ ಸೂಚಿಸಲಾಗಿದೆ. ಅತ್ಯಧಿಕ ಕೊರೊನಾ ಲಸಿಕೆ ನೀಡಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ದೇಸದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಓಮೈಕ್ರಾನ್‌ ಅತ್ಯಂತ ವೇಗವಾಗಿ ಹರಡುತ್ತಿದೆ. ರಾಜ್ಯದಲ್ಲಿ ಸುಮಾರು 38 ರಷ್ಟು ಪ್ರಕರಣ ದಾಖಲಾಗಿದೆ. ಜನರು ತೀವ್ರತೆ ಹೆಚ್ಚಾಗುವ ಮುಂಚೆ ಎರಡನೇ ಡೋಸ್‌ನ್ನು ತೆಗೆದುಕೊಳ್ಳಬೇಕು. ಲಸಿಕೆ ಪಡೆಯುವುದರಿಂದ ಹೊಸ ವೈರಸ್‌ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ ಎಂದಿದ್ದಾರೆ.

ಓಮೈಕ್ರಾನ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 4000 ಐಸಿಯು ಬೆಡ್‌ ಸಿದ್ದಪಡಿಸುವ ತಯಾರಿ ನಡೆದಿದೆ. ಅಲ್ಲದೇ 7051 ಬೆಡ್‌ಗಳನ್ನು ಐಸಿಯು ಬೆಡ್‌ಗಳಾಗಿ ಮೇಲ್ದರ್ಜೆಗೆ ಏರಿಸುವ ಕಾರ್ಯವನ್ನು ಮಾಡಲಾಗುತ್ತುದೆ. 3091ಹೆಚ್ಚುವರಿ ಹಾಸಿಗೆಯನ್ನು ಮೀಸಲಿಡಲಾಗುತ್ತದೆ. ಮೂರನೇ ಡೊಸ್‌ ನೀಡುವ ಕಾರ್ಯನ್ನು ಜನವರಿ 10ರಿಂದ 60 ವರ್ಷ ಮೇಲ್ಪಟ್ಟವರಿಗೆ ನೀಡುವ ಕಾರ್ಯವನ್ನು ಮಾಡಲಾಗುತ್ತದೆ ಎಂದಿದ್ದಾರೆ.

ಇದನ್ನೂಓದಿ : ಓಮೈಕ್ರಾನ್‌ ಬೆನ್ನಲ್ಲೇ ಮಾರಣಾಂತಿಕ ಡೆಲ್ಮಿಕ್ರಾನ್ ಪತ್ತೆ : ಏನಿದರ ರೋಗ ಲಕ್ಷಣ

ಇದನ್ನೂ ಓದಿ : ಓಮೈಕ್ರಾನ್, ಕೊರೊನಾ ನಿಯಂತ್ರಣ ಕ್ಕೆ ಮಾಸ್ಟರ್ ಪ್ಲ್ಯಾನ್: 15-18 ವಯಸ್ಸಿನ ಮಕ್ಕಳಿಗೆ ವಾಕ್ಸಿನ್

(Ten Days Karnataka Night Curfew: January 3rd after Covid -19 Vaccine for Children)

Comments are closed.