Narendra Modi at 8 : ಮೋದಿ ಸರ್ಕಾರದ 5 ಜನಪರ ಯೋಜನೆಗಳು

ನರೇಂದ್ರ ಮೋದಿಯವರ(Narendra Modi at 8) ಸರ್ಕಾರವು ಮೇ 26ರಂದು 8 ವರ್ಷಗಳನ್ನು ಪೂರೈಸಲಿದೆ. ಸರ್ಕಾರವನ್ನು ಯಶಸ್ವಿಯಾಗಿ ನಡೆಸುತ್ತಿರುವಾಗ, ನರೇಂದ್ರ ಮೋದಿ (PM Modi) ನೇತೃತ್ವದ ಎನ್‌ಡಿಎ(NDA) ಸರ್ಕಾರವು ಕೆಲವು ಕಲ್ಯಾಣ ಯೋಜನೆಗಳನ್ನು (Welfare Scheme) ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ವಿಶೇಷವಾಗಿ ಬಡವರಿಗೆ ಇದರಿಂದ ಪ್ರಯೋಜನವಾಗಿದೆ. ಮೋದಿ ಸರ್ಕಾರ ಸಮಾಜದ ಬಡ ಮತ್ತು ಬಡತನ ರೇಖೆಯ ಅಂಚಿನಲ್ಲಿರುವ ವರ್ಗಗಳಿಗೆ ಸಾಕಷ್ಟು ಕಲ್ಯಾಣ ಕಾರ್ಯಗಳನ್ನು ನೀಡಿದೆ. ಹಣಕಾಸು, ಆರೋಗ್ಯದಿಂದ ಸಾಮಾಜಿಕ ವಲಯದವರೆಗೆ ಬದಲಾವಣೆಗಳನ್ನು ತಂದಂತಹ 5 ಪ್ರಮುಖ ಜನಪರ ಯೋಜನೆಗಳು ಹೀಗಿವೆ.

1 ಉಜ್ವಲಾ ಯೋಜನೆ :

ಉಜ್ವಲಾ ಯೋಜನೆಯನ್ನು ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಎಂಬ ಹೆಸರಿನಿಂದ ಕರೆಯಲಾಗುತ್ತದೆ. 2016 ರಲ್ಲಿ ಈ ಯೋಜನೆಯನ್ನು ಮೊದಲಿಗೆ ಪ್ರಾರಂಭಿಸಲಾಯಿತು. ಈ ಯೋಜನೆಯಡಿ ಲಕ್ಷಾಂತರ ಕುಟುಂಬಗಳಿಗೆ ಎಲ್‌ಪಿಜಿ ಅಡುಗೆ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗಿದೆ. ಇದರ ಫಲಾನುಭವಿಗಳಲ್ಲಿ, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಮಹಿಳೆಯರ 7 ವರ್ಗಗಳನ್ನು ಸೇರಿಸಲಾಗಿದೆ. ಈ ಯೋಜನೆಯು ಆಗಸ್ಟ್‌ 2019ರಲ್ಲಿ 8 ಕೋಟಿ ಜನರಿಗೆ ತಲುಪುವ ಗುರಿಯನ್ನು ಪೂರ್ಣಗೊಳಿಸಿತು.

2 ಆಯುಷ್ಮಾನ್‌ ಭಾರತ್‌ :

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PM-JAY) ಅಥವಾ ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಪ್ಟೆಂಬರ್‌ 2018 ರಲ್ಲಿ ಪ್ರಾರಂಭಿಸಿದರು. ಇದು ವಿಶ್ವದ ಅತಿದೊಡ್ಡ ಆರೋಗ್ಯ ರಕ್ಷಣಾ ಯೋಜನೆಯಾಗಿದೆ. ಈ ಯೋಜನೆಯಡಿ ದೇಶದ ಶೇ. 40ರಷ್ಟು ಜನರು ಪ್ರಯೋಜನ ಪಡೆಯುತ್ತಿದ್ದಾರೆ. 10.74 ಕೋಟಿ ಬಡ ಮತ್ತು ವಂಚಿತ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 5ಲಕ್ಷ ರೂಪಾಯಿಗಳ ಆರೋಗ್ಯ ರಕ್ಷಣೆ ನೀಡಲಾಗುತ್ತಿದೆ.

ಇದನ್ನೂ ಓದಿ : DigiLocker : ಡಿಜಿಲಾಕರ್‌ ಬಳಸುವುದು ಹೇಗೆ ಗೊತ್ತೇ? ನಿಮ್ಮ ಅಗತ್ಯ ದಾಖಲೆಗಳನ್ನು ಹೀಗೆ ಸ್ಟೋರ್‌ ಮಾಡಿಕೊಳ್ಳಿ

3 ಪಿ ಎಮ್‌ ಕಿಸಾನ್‌ ಸಮ್ಮಾನ್‌ ಯೋಜನಾ :

ಪ್ರತಿ ವರ್ಷ ರೈತ ಕುಟುಂಬಗಳಿಗೆ 6,000 ರೂಪಾಯಿಗಳ ಆರ್ಥಿಕ ಪ್ರಯೋಜನವನ್ನು ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ನೀಡಲಾಗುತ್ತಿದೆ. ಜನವರಿ 1, 2022 ರವರೆಗೆ, ಪ್ರಧಾನಿ ನರೇಂದ್ರ ಮೋದಿ ಅವರು 20,900 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯಲ್ಲಿ ರೈತ ಕುಟುಂಬಗಳಿಗೆ 2000 ರೂಪಾಯಿಗಳನ್ನು ನೇರವಾಗಿ ಅವರ ಬ್ಯಾಂಕ್‌ ಖಾತೆಗಳಿಗೆ ಮೂರು ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ. ಈ ಯೋಜನೆಯಡಿ ರೈತರು 10 ಕಂತುಗಳನ್ನು ಪಡೆದಿರುತ್ತಾರೆ. ಇದು ದೇಶಾದ್ಯಂತ 10.09 ಕೋಟಿ ರೈತರಿಗೆ ಪ್ರಯೋಜನವನ್ನು ನೀಡಿದೆ.

4 ಇನ್ಶುರೆನ್ಸ್‌ ಮತ್ತು ಪೆನ್ಷನ್‌ ಯೋಜನೆ :

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ(PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) 2015 ರಲ್ಲಿ ಸಾಮಾನ್ಯ ಜನರನ್ನು, ವಿಶೇಷವಾಗಿ ಬಡವರು ಮತ್ತು ಹಿಂದುಳಿದವರನ್ನು ವಿಮಾ ರಕ್ಣಣೆ ಅಡಿಯಲ್ಲಿ ತರಲು ಪ್ರಾರಂಭಿಸಲಾಯಿತು. ಜೀವನ್‌ ಜ್ಯೋತಿ ಬೀಮಾ ಯೋಜನೆಯಡಿ 2 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ನೀಡಲಾಗುವುದು. ಪ್ರಧಾನ ಮಂತ್ರಿ ಸುರಕ್ಷಾ ಬೀಮಾ ಯೋಜನೆ (PMSBY) ಅಡಿಯಲ್ಲಿ ಅಪಘಾತದಿಂದ ಸಾವು ಮತ್ತು ಪೂರ್ಣ ಅಂಗವೈಕಲ್ಯಕ್ಕೆ 2 ಲಕ್ಷ ರೂಪಾಯಿಗಳು ಮತ್ತು ಭಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂಪಾಯಿಗಳನ್ನು ನೀಡಲಾಗುವುದು.

5 ಜನ್‌ಧನ್‌ ಯೋಜನೆ :

ಪ್ರಧಾನ ಮಂತ್ರಿ ಜನ್‌ ಧನ್‌ ಯೋಜನೆ (PMJDY) ಇದು ಒಂದು ರಾಷ್ಟ್ರೀಯ ಮಿಷನ್‌ ಆಗಿದೆ. ಇದರ ಮೂಲಕ ಫಲಾನುಭವಿಗಳಬ್ಯಾಂಕ್‌ ಖಾತೆಗೆ ಹಣಕಾಸಿನ ಪ್ರಯೋಜನಗಳನ್ನು ನೇರವಾಗಿ ವರ್ಗಾಯಿಸಲಾಗುತ್ತದೆ. ನರೇಂದ್ರ ಮೋದಿಯವರು ಈ ಯೋಜನೆಯನ್ನು ಆಗಸ್ಟ್‌ 15, 2014 ರ ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯಲ್ಲಿ ಘೋಷಿಸಿದರು. ಈ ಯೋಜನೆಯಲ್ಲಿ ವಿದ್ಯಾರ್ಥಿವೇತನಗಳು, ಸಬ್ಸಿಡಿಗಳು, ಪಿಂಚಣಿಗಳು ಮತ್ತು ಕೋವಿಡ್‌ ಪರಿಹಾರ ನಿಧಿಗಳನ್ನು ನೇರವಾಗಿ ಜನರ ‘ ಜನ್‌ಧನ್‌ ಖಾತೆ’ಗೆ ಜಮಾ ಮಾಡಲಾಗುವುದು.

(ಪೂರಕ ಮಾಹಿತಿ : ಡಿಎನ್‌ಎ)

ಇದನ್ನೂ ಓದಿ : PM Kisan eKYC deadline extended: ಪಿಎಂ ಕಿಸಾನ್ ಇಕೆವೈಸಿ ಗಡುವು ವಿಸ್ತರಣೆ, ಇಲ್ಲಿದೆ ಹೆಚ್ಚಿನ ಮಾಹಿತಿ

(Narendra Modi at 8 five landmark schemes)

Comments are closed.