ಕುಂದಾಪುರ ಶಿಲ್ಪಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಸಾವಿನ ಹಿಂದೆ ಲವ್‌ ಜಿಹಾದ್‌ ಆರೋಪ

ಕುಂದಾಪುರ : ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ (Shilpa Suicide ) ಇಲಿ ಪಾಷಾಣ ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಪ್ರಕರಣಕ್ಕೆ ಇದೀಗ ಬಿಗ್‌ ಟ್ವಿಸ್ಟ್‌ ಸಿಕ್ಕಿದ್ದು, ಹಿಂದೂ ಸಂಘಟನೆಗಳು ಲವ್‌ ಸೆಕ್ಸ್‌ ಜಿಹಾದ್‌ ( Love Sex jihad ) ಅಂತಾ ಆರೋಪಿಸಿದ್ದಾರೆ. ಇದೀಗ ಕೋಟೇಶ್ವರ ಸಮೀಪದ ಮೂಡುಗೋಪಾಡಿಯ ನಿವಾಸಿ ಅಜೀಜ್‌ ವಿರುದ್ದ ಲವ್‌ ಜಿಹಾದ್‌ (Love jihad ) ಆರೋಪ ಕೇಳಿಬಂದಿದೆ.

ಕುಂದಾಪುರ ತಾಲೂಕಿನ ತಲ್ಲೂರಿನ ಜವಳಿ ಅಂಗಡಿಯಲ್ಲಿ ಶಿಲ್ಪಾ ಉದ್ಯೋಗದಲ್ಲಿದ್ದಳು. ಕಳೆದ ನಾಲ್ಕು ವರ್ಷಗಳಿಂದಲೂ ಆಕೆಯನ್ನು ಪ್ರೀತಿಸುತ್ತಿರುವುದಾಗಿ ಹೇಳಿ ತನ್ನ ಬಲೆಗೆ ಬೀಳಿಸಿಕೊಂಡಿದ್ದ. ಅಲ್ಲದೇ ಆಕೆಯನ್ನು ತನ್ನ ಕಾಮತೃಷೆಗೆ ಬಳಿಸಿಕೊಂಡು ಆಕೆಯ ಬೆತ್ತಲೆ ಪೋಟೋ ಹಾಗೂ ವಿಡಿಯೋಗಳನ್ನು ಸೆರೆ ಹಿಡಿದಿದ್ದಾನೆ. ಆರಂಭದಲ್ಲಿ ಮದುವೆಯಾಗುವುದಾಗಿ ಹೇಳಿದ್ದ ಅಜೀಜ್‌ ನಂತರದಲ್ಲಿ ಆಕೆಯನ್ನು ಮದುವೆಯಾಗುವುದಿಲ್ಲ ಎಂದು ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ಅಜೀಜ್‌ಗೆ ಐದಾರು ವರ್ಷದ ಹಿಂದೆ ಮದುವೆಯಾಗಿದ್ದು, ತನ್ನ ಪತ್ನಿಯ ಜೊತೆಗೆ ಶಿಲ್ಪಾ ಕೆಲಸ ಮಾಡುತ್ತಿದ್ದ ಅಂಗಡಿಗೆ ಬಂದು ನಿಂದಿಸಿದ್ದ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಅಜೀಜ್‌ ದಂಪತಿ ಪ್ರಚೋದನೆಯನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಜೀಜ್‌ ದಂಪತಿಯಿಂದಾಗಿ ಮನನೊಂದ ಶಿಲ್ಪಾ ಇಲಿ ಪಾಷಾಣ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಶಿಲ್ಪಾ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಶಿಲ್ಪಾ ಆತ್ಮಹತ್ಯೆಯ ಹಿಂದೆ ಲವ್‌ ಜಿಹಾದ್‌ ಷಡ್ಯಂತ್ರವಿದೆ ಎಂದು ವಿಶ್ವ ಹಿಂದೂ ಪರಿಷತ್‌ ಆರೋಪಿಸಿದೆ. ಅಮಾಯಕ ಹೆಣ್ಣು ಮಗಳೊಬ್ಬಳ ಸಾವಿಗೆ ಕಾರಣರಾಗಿರುವ ಅಜೀಜ್‌ ಹಾಗೂ ಆತನ ಹೆಂಡತಿ ಸಲ್ಮಾ ವಿರುದ್ದ ಪೊಲೀಸರು ಕಠಿಣ ಕ್ರಮವನ್ನು ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಕಾರ್ಯದರ್ಶಿ ದಿನೇಶ್‌ ಮೆಂಡನ್‌ ಆಗ್ರಹಿಸಿದ್ದಾರೆ. ಹಿಂದೂ ಸಮಾಜದ ಹುಡುಗಿಯರನ್ನು ಪ್ರೀತಿ, ಪ್ರೇಮದ ನಾಟಕವಾಡಿ ಮುಸ್ಲೀಂ ಯುವಕರು ಅಕ್ರಮ ಚಟುವಟಿಕೆಗೆ ಬಳಿಸಿಕೊಂಡು ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಹೀಗಾಗಿ ಹಿಂದೂ ಯುವತಿಯರು ಎಚ್ಚರವಾಗಿರಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : young woman raped : ತಲೆಗೆ ಗನ್​ಪಾಯಿಂಟ್​ ಇಟ್ಟು ಯುವತಿ ಮೇಲೆ ಮನೆ ಮಾಲೀಕನಿಂದ ಅತ್ಯಾಚಾರ

ಇದನ್ನೂ ಓದಿ : Kerala dowry death: ಕೇರಳ ವಿಸ್ಮಯ ಸಾವು ಪ್ರಕರಣ: ಪತಿಗೆ 10 ವರ್ಷ ಜೈಲು, 12.55 ಲಕ್ಷ ರೂ ದಂಡ

Big twist Shilpa Suicide Case Love jihad accused of death

Comments are closed.