DK Sivakumar : ಡಿಕೆಶಿ ಕುತ್ತಿಗೆಗೂ ಸುತ್ತಿಕೊಂಡ ನ್ಯಾಶನಲ್ ಹೆರಾಲ್ಡ್ ಉರುಳು : ಅ.7 ರಂದು ವಿಚಾರಣೆಗೆ ಹಾಜರಾಗಲು ನೊಟೀಸ್

ನವದೆಹಲಿ : ಭಾರತದಲ್ಲಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಕಾಂಗ್ರೆಸ್ ವಿರುದ್ಧ ಅಸ್ತ್ರಗಳಾಗಿ ಬಳಸಿಕೊಳ್ಳುತ್ತಿದೆ ಎಂಬ ಆರೋಪ ಕೇಳಿಬಂದಿರುವಾಗಲೇ ಮತ್ತೊಮ್ಮೆ ಭಾರತ ಜೋಡೋ ಯಾತ್ರೆಯಲ್ಲಿರುವಾಗಲೇ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Sivakumar)ಗೆ ಇಡಿ ನೊಟೀಸ್ ಜಾರಿಯಾಗಿದೆ. ಅಕ್ಟೋಬರ್ 7 ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ಅದೇಶಿಸಿದ್ದು, ಇದು ಮತ್ತೊಮ್ಮೆ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಭಾರತ ಜೋಡೋ ಯಾತ್ರೆ ಪ್ರಗತಿಯಲ್ಲಿದೆ. ಅಕ್ಟೋಬರ್ 7 ರಂದು ಆದಿಚುಂಚನಗಿರಿಯಲ್ಲಿ ಕಾಂಗ್ರೆಸ್ ಕಾರ್ಯಕ್ರಮವಿದ್ಧು ರಾಹುಲ್ ಗಾಂಧಿ ಮಠದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳ ಮಧ್ಯೆ ಈಗ ಮತ್ತೊಮ್ಮೆ ಡಿಕೆ ಬ್ರದರ್ಸ್ ಗೆ ಇಡಿ ನೊಟೀಸ್ ಜಾರಿ ಮಾಡಿದ್ದು ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಹೊಸ ನೋಟಿಸ್ ಬಗ್ಗೆ ಡಿಕೆಶಿ (DK Sivakumar)ಮಾಧ್ಯಮಗಳ ಜೊತೆ ಮಾತನಾಡಿದ್ದು, ನಮಗೆ ಇಡಿ ಹೊಸ ನೋಟಿಸ್ ಜಾರಿ‌ ಮಾಡಿದೆ. ನಮ್ಮ ಆಸ್ತಿ ಬಗ್ಗೆ ಈಗಾಗಲೇ ಸಿಬಿಐನವರು ತನಿಖೆ ಮಾಡುತ್ತಿದ್ದಾರೆ, ಅದ್ಯಾಕೇ ಇಬ್ಬರು ತನಿಖೆ ಮಾಡ್ತಿದ್ದಾರೋ ಗೊತ್ತಿಲ್ಲ. ಹೊಸದಾಗಿ ನೊಟೀಸ್ ಕೊಟ್ಟಿದ್ದಾರೆ. ಯಾರು ಯೆಂಗ್ ಇಂಡಿಯಾಗೆ, ನ್ಯಾಶನಲ್ ಹೆರಾಲ್ಡ್ ಗೆ ಸಹಾಯ ಮಾಡಿದ್ರು, ಡೊನೇಶನ್ ಕೊಟ್ರು, ಜಾಹೀರಾತು ಕೊಟ್ರು ಅಂತವರಿಗೆ ನೋಟಿಸ್ ನೀಡಲಾಗಿದೆ. ನಾನು ಯೆಂಗ್ ಇಂಡಿಯಾಗೆ ಡೊನೇಶನ್ ಕೊಟ್ಟಿದ್ದೇನೆ, ಎಷ್ಟು ಕೊಟ್ಟಿದ್ದೇನೆ.ಅನ್ನೋದನ್ನು ಈಗ ಡಿಸ್ ಕ್ಲೋಸ್ ಮಾಡಲು ಸಾಧ್ಯವಿಲ್ಲ. ಮುಂದೇ ಈ ಬಗ್ಗೆ ಮಾಹಿತಿ ನೀಡುತ್ತಾರೆ. ನಮ್ಮ ಸಂಸ್ಥೆಯಿಂದ ಹಾಗೂ ವೈಯಕ್ತಿಕವಾಗಿ ಧನಸಹಾಯ ನೀಡಿದ್ದೇನೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ್ ಖರ್ಗೆಯವರಿಗೆ ಸಮನ್ಸ್ ಜಾರಿ ಮಾಡಿದ ಅಧಿಕಾರಿಗಳೇ ನನಗೂ ನೋಟಿಸ್ ಜಾರಿ ಮಾಡಿದ್ದಾರೆ., ನಾನು ವಿಚಾರಣೆಗೆ ಹಾಜರಾಗಲು ಸಮಯ ಕೇಳುತ್ತೇನೆ. ಅಗತ್ಯ ಮಾಹಿತಿ ನೀಡುತ್ತೇನೆ ಆದರೆ ಸಮಯ ಕೇಳುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ : ಮತ್ತೆ ಸಂಪುಟ ವಿಸ್ತರಣೆ ಚರ್ಚೆ: ಪ್ರತ್ಯೇಕವಾಗಿ ಚರ್ಚೆ ನಡೆಸಿದ ಸಿಎಂ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ

ಇದನ್ನೂ ಓದಿ : ದೇಶಾದ್ಯಂತ ಗಾಂಧಿ ಜಯಂತಿ ಆಚರಣೆ : ರಾಷ್ಟ್ರಪಿತನ ಸಮಾಧಿಗೆ ನಮನ ಸಲ್ಲಿಕೆ

ಇದನ್ನೂ ಓದಿ : ಭಾರತ್ ಜೋಡೋ ಯಾತ್ರೆಗೆ ಜನರು ಬರ್ತಾ ಇಲ್ಲ, ಪೇಮೆಂಟ್ ಕೊಟ್ಟು ಕರೆತರುತ್ತಿದ್ದಾರೆ: ಶಾಸಕ ಎಂ.ಪಿ ರೇಣುಕಾಚಾರ್ಯ ಆರೋಪ

ಇದನ್ನೂ ಓದಿ : ಎಐಸಿಸಿ ಅಧ್ಯಕ್ಷರಾಗ್ತಾರಾ ಖರ್ಗೆ: ದಲಿತ ನಾಯಕನ ಆಯ್ಕೆಗೆ ಕಾರಣಗಳೇನು ಗೊತ್ತಾ?

ಚುಂಚನಗಿರಿ ಮಠ ನಮ್ಮ ಸಮಾಜದ ಮಠ ಅಲ್ಲಿಯ ಕಾರ್ಯಕ್ರಮವನ್ನು ಬಿಟ್ಟು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಒಂದು ದಿನದಲ್ಲಿ ಸೂರ್ಯ ಚಂದ್ರ ಬಿದ್ದು ಹೋಗೋದಿಲ್ಲ. ಅವಕಾಶ ಕೇಳುತ್ತೇನೆ. ಅವಕಾಶ ನೀಡದೇ ಇದ್ದರೇ ಕಾನೂನು ಕ್ರಮ ಕೈಗೊಳ್ಳಲಿ. ಡಿ.ಕೆ.ಸುರೇಶ್ ಕೂಡ ಚೆಕ್ ನಲ್ಲಿ ಡೊನೇಶನ್ ನೀಡಿದ್ದಾರೆ. ಅದಕ್ಕಾಗಿ ಅವರಿಗೂ ನೊಟೀಸ್ ಜಾರಿಯಾಗಿದೆ ಎಂದು ಡಿಕೆ ವಿವರ ನೀಡಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಇಡಿ,ಸಿಬಿಐ,ಐಟಿ ಬಳಿಕ ಈಗ ನ್ಯಾಶನಲ್ ಹೆರಾಲ್ಡ್ ಕೇಸ್ ನಲ್ಲೂ ಡಿಕೆಶಿ ಬ್ರದರ್ಸ್ ಹೆಸರು ಕೇಳಿಬಂದಿರೋದು ಡಿಕೆ ಮೇಲಿನ ಸಂಕಷ್ಟಗಳ ಸಂಖ್ಯೆ ಹೆಚ್ಚುವ ಮುನ್ಸೂಚನೆ ನೀಡಿದೆ.

National Herald article wrapped around DKS neck: Notice to attend hearing on August 7

Comments are closed.