International non-violence day:ಅಂತರಾಷ್ಟ್ರೀಯ ಅಹಿಂಸಾ ದಿನಾಚರಣೆ : ವಿಶ್ವಕ್ಕೆ ಮಾದರಿಯಾಯ್ತು ಗಾಂಧೀಜಿ ಪರಿಕಲ್ಪನೆ

(International non-violence day)ಗಾಂಧಿಜೀ ಅವರು ಸರಳತೆ ಭಾರತೀಯರು ಮಾತ್ರವಲ್ಲ, ವಿಶ್ವದ ಹಲವು ರಾಷ್ಟ್ರದ ಜನರು ಕೂಡ ಅನುಸರಿಸುತ್ತಿದ್ದಾರೆ. ರಾಷ್ಟ್ರಪಿತನ ಸರಳತೆಯಜೀವನ, ಅಹಿಂಸೆಯ ತತ್ವಗಳ ಮೂಲಕ ಭಾರತದ ಸ್ವಾತಂತ್ರ್ಯಕ್ಕೆ ಹೊರಾಡಿದ ಮಾರ್ಗ ಎಷ್ಟೋ ಮಂದಿಗೆ ಸ್ಫೂರ್ತಿದಾಯಕ. ಬರಾಕ್‌ ಒಬಾಮ ಆಡಳಿತದಲ್ಲಿ ಇರುವಾಗ ಅವರ ಕಚೇರಿಯಲ್ಲಿ ಗಾಂಧೀಜಿಯವರ ಪೋಟೊವನ್ನು ಅಳವಡಿಸಿಕೊಂಡಿದ್ದರು. ಅವರ ಜೀವನದಲ್ಲೂ ಕೂಡ ಗಾಂಧಿಜೀಯವರ ತತ್ವಗಳು ಪ್ರಭಾವ ಬೀರಿರುವುದರ ಬಗ್ಗೆ ಹಲವು ಭಾರಿ ಮಾತನಾಡಿದ್ದುಂಟು. ಇಷ್ಟೇ ಅಲ್ಲದೆ ಮಹಾತ್ಮ ಗಾಂಧೀಜಿಯವರು ಪಾಲಿಸುವಂತಹ ಅಹಿಂಸೆಯ ಮಾರ್ಗ ಹಲವಾರು ಮಂದಿ ಅವರ ಜೀವನದಲ್ಲಿ ಅಳವಡಿಸಿಕೊಂಡಿದ್ದುಂಟು. ಪ್ರಪಂಚದಾದ್ಯಂತ ಕೂಡ ಅವರ ಅಹಿಂಸೆಯ ಪರಿಕಲ್ಪನೆಯನ್ನು ಅಂತರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸಲಾಗುತ್ತದೆ.

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜಯಂತಿಯ ದಿನದಂದು ಅಹಿಂಸೆಯ ದಿನವಾಗಿ ಆಚರಿಸಲಾಗುತ್ತಿದೆ. ಅಹಿಂಸೆಯ ಕಲ್ಪನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಮೂಲ ಉದ್ದೇಶವಾಗಿದೆ. (UNGA) ಯುನೈಟೆಡ್‌ ನೇಷನ್ಸ್‌ ಜನರಲ್‌ ಅಸೆಂಬ್ಲಿ ಜೂನ್‌ 15,2007 ರಂದು ಅಹಿಂಸಾ ದಿನವನ್ನು ಆಚರಿಸುವುದಕ್ಕೆ ನಿರ್ಣಯವನ್ನು ತೆಗೆದುಕೊಂಡಿತು. ಅದರಂತೆ ಪ್ರತಿ ವರ್ಷವೂ ಗಾಂಧಿಜೀಯವರ ಜನ್ಮ ದಿನದಂದು ಅಂತರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸಲಾಗುತ್ತದೆ.

ಅಂತರಾಷ್ಟ್ರೀಯ ಅಹಿಂಸಾ ದಿನದ ಇತಿಹಾಸವನ್ನು ನೋಡಿದ್ರೆ, 2004 ರಲ್ಲಿ ಇರಾನಿನ ನೋಬಲ್‌ ಪ್ರಶಸ್ತಿ ವಿಜೇತೆ ಶಿರಿನ್‌ ಎಬಾಡಿ ಗಾಂಧಿಜೀಯವರ ಜನ್ಮ ದಿನದಂದು ಅಂತರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸುವ ವಿಷಯದ ಬಗ್ಗೆ ಪ್ರಸ್ತಾಪವನ್ನು ಮಾಡಿದರು. (UNGA) ಯುನೈಟೆಡ್‌ ನೇಷನ್ಸ್‌ ಜನರಲ್‌ ಅಸೆಂಬ್ಲಿ ಜೂನ್‌ 15, 2007 ರಂದು ಅಹಿಂಸಾ ದಿನವನ್ನು ಆಚರಿಸುವುದಕ್ಕೆ ನಿರ್ಣಯವನ್ನು ತೆಗೆದುಕೊಂಡಿತು. ಆಗಿನ ಭಾರತದ ವಿದೇಶಾಂಗ ಸಚಿವರಾದ ಆನಂದ್‌ ಶರ್ಮಾ ಅವರ ಸಮ್ಮತವೂ ಕೂಡ ಇತ್ತು.

ಇದನ್ನೂ ಓದಿ: Accident news : ಐರಾವತ ಬಸ್‌ ಟೆಂಪೋ ನಡುವೆ ಭೀಕರ ಅಪಘಾತ : 30ಕ್ಕೂ ಅಧಿಕ ಮಂದಿಗೆ ಗಾಯ

ಇದನ್ನೂ ಓದಿ:Gandhi Jayanthi 2022 : ದೇಶಾದ್ಯಂತ ಗಾಂಧಿ ಜಯಂತಿ ಆಚರಣೆ : ರಾಷ್ಟ್ರಪಿತನ ಸಮಾಧಿಗೆ ನಮನ ಸಲ್ಲಿಕೆ

ಇದನ್ನೂ ಓದಿ:MP Tejaswi Surya :ಪಿಎಫ್ಐ ಕಾಂಗ್ರೆಸ್ ನವರ ಬ್ರದರ್ಸ್ ಇದ್ದಂತೆ: ಸಂಸದ ತೇಜಸ್ವಿ ಸೂರ್ಯ

ಗಾಂಧಿಜೀಯವರ ಸರಳ ಜೀವನ, ನಡೆದುಬಂದ ಹಾದಿ ಎಷ್ಟೋ ಸರಳವಾಗಿ ಜೀವಿಸುಂತಹ ಜನರಿಗೆ ಸ್ಪೂರ್ತಿ ಅಲ್ಲದೆ ನಾಯಕನಾಗಿಯೂ ಹಲವು ಸಾಧನೆಗಳನ್ನು ಮಾಡುವ ಮೂಲಕ ಯಶಸ್ವಿಯಾಗಿದ್ದಾರೆ. ಇತ್ತಿಚೀನ ದಿನಗಳಲ್ಲಿ ಜನರು ಬಾಯಲ್ಲಿ ಬರುವ ದೇಸಿ ಎಂಬ ಪರಿಕಲ್ಪನೆ ಇವರಿಂದ ಹುಟ್ಟಿಕೊಂಡಿತ್ತು. ಸ್ವದೇಶಿ ಉಪ್ಪುನ್ನು ಬಳಸಿ ಎಂದು ಉಪ್ಪಿನ ಸತ್ಯಾಗ್ರಹ ಹೀಗೆ ಹಲವಾರು ಚಳುವಳಿಗಳಲ್ಲಿ ಜನರನ್ನೂ ಒಟ್ಟು ಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಬ್ಬ ನಾಯಕನಿಗೆ ಇರಬೇಕಾದ ಗುಣವನ್ನು ಇವರಿಂದ ಅಳವಡಿಸಿಕೊಳ್ಳಬಹುದು.

International non-violence day: Gandhiji concept inspire world

Comments are closed.