ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ದೇಶವನ್ನು ಸ್ವರ್ಗ ಮಾಡುವ ಭ್ರಮೆ ಹುಟ್ಟಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಮತ್ತು ಮೋದಿ ಸರ್ಕಾರ ರೈತರಿಗೆ, ಯುವಕರಿಗೆ ಮಂಕು ಬೂದಿ ಎರಚಿ, ದಾರಿ ತಪ್ಪಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಪ್ರಧಾನಿಯಾಗಿ 7 ವರ್ಷ ಕಳೆದಿದ್ದರು. ಜನರಿಗೆ ಅಚ್ಚೇ ದಿನ್ ಬರಲಿಲ್ಲ, ಬದಲಾಗಿ ಬೆಲೆ ಏರಿಕೆಯಿಂದ ಜನಸಾಮಾನ್ಯರ ಪಾಲಿಗೆ ಬಹಳ ಕೆಟ್ಟ ದಿನಗಳು ಬಂದಿವೆ. ಆದರೆ ದೇಶದ ಕೆಲವೇ ಕೆಲವು ಉದ್ದಿಮೆದಾರರಿಗೆ ಅಚ್ಚೇದಿನ್ ಬಂದಿದೆ ಎಂದು ಮೂದಲಿಸಿದರು.

ಇದನ್ನೂ ಓದಿ: Mysore : ಸಿಎಂ ಬೊಮ್ಮಾಯಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ : ಅರುಣ್ ಸಿಂಗ್

ದೇಶವನ್ನು ಅಭಿವೃದ್ಧಿ ಮಾಡುವ ನೆಪದಲ್ಲಿ ಮೋದಿ ಸರಕಾರ ಆಸ್ತಿಗಳನ್ನು ಖಾಸಗಿಯವರಿಗೆ ಮನಬಂದಂತೆ ಮಾರಾಟ ಮಾಡಲು ಮುಂದಾಗಿದೆ ಎಂದು ಸಿದ್ದರಾಮಯ್ಯ ತೀವ್ರ ಅಸಮಾಧಾನ ಹೊರಹಾಕಿದರು. ಅಚ್ಚೇ ದಿನ್ ಬರುತ್ತೆ ಎಂದು ಜನರಲ್ಲಿ ಆಶಾ ಗೋಪುರ ಕಟ್ಟಿ ದೇಶ ಭಕ್ತಿ, ರಾಷ್ಟ್ರ ಭಕ್ತಿಯ ಹೆಸರಿನಲ್ಲಿ ದಾರಿ ತಪ್ಪಿಸಿದರು.

ಇದನ್ನೂ ಓದಿ: ಚಾಮುಂಡೇಶ್ವರಿಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಗೆ ಬರುವಂತೆ ಪ್ರಾರ್ಥಿಸಿದ್ದೇನೆ : ಗ್ರಹ ಸಚಿವ ಆರಗ ಜ್ಞಾನೇಂದ್ರ

ಬಿಜೆಪಿ ಎಂದೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ. ಅವರಿಗೆ ದೇಶ ಭಕ್ತಿ ಕೊರತೆ ಇದೆ ಎಂದರು. ಇನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿ 224 ಶಾಸಕರು ನನ್ನ ಸಂಪರ್ಕದಲ್ಲಿ ಇದ್ದಾರೆ. ಆದರೆ ನಾನು ಯಾರಿಗೂ ಪಕ್ಷಕ್ಕೆ ಆಹ್ವಾನ ನೀಡಿಲ್ಲ. ಜಿಟಿ ದೇವೇಗೌಡ ಮಾತ್ರ ಸಂಪರ್ಕ ಮಾಡಿ ಮಾತುಕತೆ ಮಾಡಿದ್ದಾರೆ ಎಂದು ಹೇಳಿದರು.

( Sidaramaya gave a  statement against pm modi )

Comments are closed.