Pushpa Amar Nath: ಉರಿಗೌಡ ನಂಜೇಗೌಡ ತಮಿಳುನಾಡು ಮೂಲದವರು: ಅವರ ಹೆಸರಲ್ಲಿ ಬಿಜೆಪಿ ರಾಜಕೀಯ ನಾಚಿಕೆಗೇಡು ; ಪುಷ್ಪಾ ಅಮರ್‌ ನಾಥ್‌

ಮೈಸೂರು : (Pushpa Amar Nath) ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ಯುದ್ದ ನಡೆಯುತ್ತಿದ್ದು, ಚುನಾವಣೆ ಹೊತ್ತಲ್ಲೇ ಉರಿಗೌಡ ನಂಜೇಗೌಡ ಅವರನ್ನು ಮತಯುದ್ದದ ರಣರಂಗಕ್ಕೆ ಬಿಜೆಪಿ ನುಗ್ಗಿಸಿದೆ. ಇಬ್ಬರ ಹೆಸರು ಫೋಟೋ ಇಟ್ಟುಕೊಂಡು ಲಾಭದ ಲೆಕ್ಕ ಹಾಕುತ್ತಿದ್ದ ಬಿಜೆಪಿ ಈಗ ಕೈಸುಟ್ಟುಕೊಂಡಿದೆ. ಶತಮಾನಗಳು ಉರುಳಿದ ನಂತರದಲ್ಲಿ ಈ ಇಬ್ಬರ ಫೋಟೋ ಬಗ್ಗೆ ಯುದ್ದ ಶುರುವಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನಡೆಯುತ್ತಿರುವ ತಿಕ್ಕಾಟ ಮುಂದುವರೆದಿದ್ದು, ಇದೀಗ ಈ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೇ ಡಾ. ಪುಷ್ಪ ಅಮರನಾಥ್‌ ವಾಗ್ದಾಳಿ ನಡೆಸಿದ್ದಾರೆ.

ಉರಿಗೌಡ, ನಂಜೇಗೌಡ ಕರ್ನಾಟಕದವರಲ್ಲ, ತಮಿಳುನಾಡು ಮೂಲದವರು. ಅವರ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡು ಎಂದು ಆಕ್ರೋಶ ಹೊರಹಾಕಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಬಡವರ ಕಷ್ಟ ಗೊತ್ತಿಲ್ವಾ ? ಸಿಲಿಂಡರ್‌ ಬೆಲೆ ದುಬಾರಿಯಾಗಿದ್ದರೂ ಶೋಭಾ ಮಾತನಾಡುತ್ತಿಲ್ಲ. ಒಂದು ಹೆಣ್ಣಾಗಿ ಮಹಿಳೆಯರ ಕಷ್ಟ ಅವರಿಗೆ ಗೊತ್ತಿಲ್ಲ ಅಂದರೆ ಹೇಗೆ. ಅವರಿಗೆ ನಾಚಿಕೆ ಆಗಲ್ವಾ ಎಂದು ಪುಷ್ಪ ಅಮರನಾಥ್‌ ಕಿಡಿಕಾರಿದ್ದಾರೆ.

ಅಲ್ಲದೇ ಈ ಬಾರಿ ಕಾಂಗ್ರೆಸ್‌ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. ಕೇಂದ್ರಕ್ಕೆ ಬಡವರ ಕಾಳಜಿ ಇಲ್ಲ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಪ್ರಧಾನಿ ಮೋದಿ ಟೊಳ್ಳು ಭರವಸೆ ಕೊಟ್ಟು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಮುಂದಿನ ವಿಧಾನಸಭೆಯಲ್ಲಿ ಬಿಜೆಪಿ ನೆಲಕಚ್ಚಲಿದೆ. ಕಾಂಗ್ರೆಸ್ ಗೆ ಜನರು ಸ್ಪಷ್ಟ ಬಹುಮತ ನೀಡಲಿದ್ದಾರೆ ಎಂದರು. ಕಾಂಗ್ರೆಸ್‌ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಲಾಗುವುದು. ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸಲಾಗುವುದು ಎಂದು ಹೇಳಿದರು.

ಉರಿಗೌಡ ಹಾಗೂ ನಂಜೇಗೌಡ ಎಂಬ ಹೆಸರನ್ನಿಟ್ಟುಕೊಂಡು ಮೈಸೂರು ಭಾಗದಲ್ಲಿ ಚುನಾವಣೆ ಗೆಲ್ಲಲು ಬಿಜೆಪಿ ಉಪಾಯ ಮಾಡಿತ್ತು. ಈ ಕಾರಣಕ್ಕೆ ಉರಿಗೌಡ, ನಂಜೇಗೌಡ ಎಂಬ ಹೆಸರನ್ನು ಅಸ್ತ್ರವನ್ನಾಗಿ ಮಾಡಿಕೊಂಡಿತ್ತು. ಇಬ್ಬರ ಪ್ರತಿಮೆ ನಿರ್ಮಾಣ ಮಾಡೋದಿಕ್ಕೂ ಕೂಡ ಪಕ್ಷ ಸಿದ್ದವಾಗಿತ್ತು. ಇದೇ ವೇಳೆ ಇವರಿಬ್ಬರ ಬಗ್ಗೆ ಸಿನಿಮಾ ಮಾಡೋದಿಕ್ಕೂ ಕೂಡ ತಯಾರಿ ನಡೆಸಲಾಗಿತ್ತು. ಆದರೆ ಆದಿಚುಂಚನಗಿರಿ ಶ್ರೀಗಳ ಮಧ್ಯ ಪ್ರವೇಶದಿಂದಾಗಿ ಸಿನಿಮಾ ಉಪಾಯವನ್ನು ಕೈಬಿಡಲಾಯಿತು.

ಇದನ್ನೂ ಓದಿ : Rahul Gandhi sacked : ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ವಜಾ

Pushpa Amar Nath: Urigowda Nanjegowda hails from Tamil Nadu: BJP political shame in his name; Pushpa Amar Nath

Comments are closed.