IPL 2023 RCB : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೆಸ್ಟ್ ಪ್ಲೇಯಿಂಗ್ XI, ಸ್ಟ್ರೆಂತ್ & ವೀಕ್ನೆಸ್

ಬೆಂಗಳೂರು: (IPL 2023 RCB) “ಈ ಸಲ ಕಪ್ ನಮ್ದೇ” ಎಂಬ ಫೇಮಸ್ ಘೋಷವಾಕ್ಯದ ಮಧ್ಯೆಯೂ ಸತತ 15 ವರ್ಷಗಳಿಂದ ಕಪ್ ಗೆಲ್ಲಲು ವಿಫಲವಾಗುತ್ತಾ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ, ಐಪಿಎಲ್-16 (IPL 2023) ಟೂರ್ನಿಗೆ ಸಜ್ಜಾಗುತ್ತಿದೆ. ಫಾಫ್ ಡುಪ್ಲೆಸಿಸ್ ನಾಯಕತ್ವದ ಆರ್’ಸಿಬಿ ಇದೇ ಭಾನುವಾರ (ಮಾರ್ಚ್ 26) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯವಾಡಲಿದೆ. ಈ ಬಾರಿ ಕಪ್ ಗೆದ್ದೇ ಗೆಲ್ಲುವ ಆತ್ಮವಿಶ್ವಾಸದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (IPL 2023 RCB) ತಂಡದ ಬೆಸ್ಟ್ ಪ್ಲೇಯಿಂಗ್ XI ಹೀಗಿದೆ:

  1. ಫಾಫ್ ಡುಪ್ಲೆಸಿಸ್ (ನಾಯಕ)
  2. ವಿರಾಟ್ ಕೊಹ್ಲಿ
  3. ರಜತ್ ಪಾಟಿದಾರ್
  4. ಗ್ಲೆನ್ ಮ್ಯಾಕ್ಸ್’ವೆಲ್
  5. ಮಹಿಪಾಲ್ ಲೋಮ್ರೊರ್
  6. ದಿನೇಶ್ ಕಾರ್ತಿಕ್
  7. ಶಹಬಾಜ್ ಅಹ್ಮದ್
  8. ವನಿಂದು ಹಸರಂಗ
  9. ಹರ್ಷಲ್ ಪಟೇಲ್
  10. ಮೊಹಮ್ಮದ್ ಸಿರಾಜ್
  11. ಜೋಶ್ ಹೇಜಲ್’ವುಡ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ತಂಡ: ತಂಡದ ಬೆಸ್ಟ್ ಪ್ಲೇಯಿಂಗ್ XI ಹೀಗಿದೆ:
ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್’ವೆಲ್, ಮಹಿಪಾಲ್ ಲೋಮ್ರೊರ್, ದಿನೇಶ್ ಕಾರ್ತಿಕ್,ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್’ವುಡ್, ಅನುಜ್ ರಾವತ್, ಆಕಾಶ್ ದೀಪ್, ಫಿನ್ ಅಲೆನ್, ಸುಯಾಶ್ ಪ್ರಭುದೇಸಾಯಿ, ಕರಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲ್ಲೀ, ರೀಸಿ ಟಾಪ್ಲೀ, ಹಿಮಾನ್ಶು ಶರ್ಮಾ, ಮನೋಜ್ ಭಾಂಡಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್, ಮೈಕೆಲ್ ಬ್ರೇಸ್’ವೆಲ್

ರಾಯಲ್ ಚಾಲೆಂಜರ್ಸ್ ಸ್ಟ್ರೆಂತ್

  1. ಬಲಿಷ್ಠ ಬ್ಯಾಟಿಂಗ್ ಲೈನಪ್
  2. ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಅವರ ಭರ್ಜರಿ ಫಾರ್ಮ್
  3. ಕಿವೀಸ್ ಆಲ್ರೌಂಡರ್ ಮೈಕೆಲ್ ಬ್ರೇಸ್’ವೆಲ್ ಸೇರ್ಪಡೆ
  4. ಬೌಲಿಂಗ್’ನಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಉತ್ತಮ ಫಾರ್ಮ್
  5. ಬ್ಯಾಟಿಂಗ್-ಬೌಲಿಂಗ್’ನಲ್ಲಿ ಸಮತೋಲನ ಹೊಂದಿರುವುದು.

ರಾಯಲ್ ಚಾಲೆಂಜರ್ಸ್ ವೀಕ್ನೆಸ್

  1. ಒತ್ತಡವನ್ನು ನಿಭಾಯಿಸಲು ವಿಫಲವಾಗುತ್ತಾ ಬಂದಿರುವುದು.
  2. ಹೆವಿವೇಟ್ ತಂಡವೆಂಬ ಹಣೆಪಟ್ಟಿ
  3. ದಿನೇಶ್ ಕಾರ್ತಿಕ್ ಈಗಲೂ ಬೆಸ್ಟ್ ಫಿನಿಷರ್ ಆಗಿ ಉಳಿದಿದ್ದಾರೆಯೇ ಎಂಬ ಅನುಮಾನ,
  4. ಗ್ಲೆನ್ ಮ್ಯಾಕ್ಸ್’ವೆಲ್ ಉತ್ತಮ ಫಾರ್ಮ್’ನಲ್ಲಿ ಇಲ್ಲದೇ ಇರುವುದು.
  5. ಯುಜ್ವೇಂದ್ರ ಚಹಲ್ ಎಕ್ಸಿಟ್ ನಂತರ ಸ್ಪಿನ್ ವಿಭಾಗ ದುರ್ಬಲ.

ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಲೀಗ್ ಐಪಿಎಲ್ ಟೂರ್ನಿ (IPL 2023) ಮಾರ್ಚ್ 31ರಂದು ಆರಂಭವಾಗಲಿದೆ.

ಮಾರ್ಚ್ 31ರಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ (Gujarat Titans) ತಂಡ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವನ್ನು ಎದುರಿಸಲಿದೆ. ಫಾಫ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಏಪ್ರಿಲ್ 2ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Shreyas Iyer IPL : ಬಿಸಿಸಿಐ ಸೂಚನೆಗೆ ಕ್ಯಾರೇ ಅನ್ನದ ಶ್ರೇಯಸ್ ಅಯ್ಯರ್, ಐಪಿಎಲ್‌ಗಾಗಿ ಬಿಗ್ ರಿಸ್ಕ್ ತೆಗೆದುಕೊಳ್ಳಲು ಮುಂಬೈಕರ್ ರೆಡಿ

ಇದನ್ನೂ ಓದಿ : Indian Cricket Team : ಟೀಮ್ ಇಂಡಿಯಾ ಒಗ್ಗಟ್ಟು ಛಿದ್ರ ಛಿದ್ರ, ಸ್ನೇಹಿತರೆಲ್ಲಾ ಇನ್ನು ಮುಂದೆ ದುಷ್ಮನ್‌ಗಳು

Comments are closed.