man killed for bar bill : ಬಾರ್​ನಲ್ಲಿ ಬಿಲ್​ ಪಾವತಿ ಮಾಡುವ ವಿಚಾರಕ್ಕೆ ಜಗಳ : ಮಧ್ಯಸ್ಥಿಕೆ ವಹಿಸಿದವನ ಬರ್ಬರ ಕೊಲೆ

ಬೆಂಗಳೂರು : man killed for bar bill : ಮದ್ಯದ ಅಂಗಡಿಗಳಲ್ಲಿ ಕುಡಿದ ಅಮಲಿನಲ್ಲಿ ಜಗಳಗಳು ನಡೆದ ಸಾಕಷ್ಟು ಘಟನೆಗಳ ಬಗ್ಗೆ ನಾವು ಕೇಳಿದ್ದೇವೆ. ಪಾನಮತ್ತರಾದ ಬಳಿಕ ದೇಹದ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಪರಿಣಾಮ ಇಂತಹ ಅನೇಕ ಘಟನೆಗಳು ಬಾರ್​ಗಳಲ್ಲಿ ಜರಗುತ್ತಲೇ ಇರುತ್ತದೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಾರ್​ನಲ್ಲಿ ಬಿಲ್​ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆಯೊಂದು ಕೊಲೆಯಲ್ಲಿ ದಾರುಣ ಅಂತ್ಯವನ್ನು ಕಂಡಿದೆ. ಕೊಲೆಯಾದ ವ್ಯಕ್ತಿಯನ್ನು ಪ್ರಕಾಶ್​ ಎಂದು ಗುರುತಿಸಲಾಗಿದೆ. ಈ ಸಂಬಂಧ ಕಾರ್ಯಪೃವತ್ತರಾದ ಇಂದಿರಾ ನಗರ ಠಾಣಾ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.


ಅಂದ ಹಾಗೆ ಈ ಘಟನೆ ನಡೆದಿದ್ದು ಜುಲೈ29ರಂದು. ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಪ್ರಕಾಶ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾರೆ. ಈ ಸಂಬಂಧ ಪೊಲೀಸರು ಜೈಕುಮಾರ್ ಎಂಬಾತನನ್ನು ಬಂಧಿಸಿದ್ದು ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.


ಜುಲೈ 29ರಂದು ಇಂದಿರಾ ನಗರದ ಡಬಲ್​ ರೋಡ್​ನಲ್ಲಿರುವ ಟೆಂಪ್ಟೇಶನ್​​ ಬಾರ್​ & ರೆಸ್ಟಾರೆಂಟ್​ನಲ್ಲಿ ಪ್ರಕಾಶ್​ ಮದ್ಯಪಾನ ಮಾಡುತ್ತಿದ್ದರು. ಇದೇ ಬಾರ್​ಗೆ ಬಂಧಿತ ಆರೋಪಿ ಜೈ ಕುಮಾರ್​ ಹಾಗೂ ಆತನ ಸ್ನೇಹಿತರು ಆಗಮಿಸಿದ್ದರು. ಮದ್ಯಪಾನ ಮಾಡಿದ ಬಳಿಕ ಬಿಲ್​ ಕೊಡುವ ವಿಚಾರ ಎದುರಾದಾಗ ಜಗಳ ಉಂಟಾಗಿತ್ತು. ಬಾರ್​ನ ಕ್ಯಾಶಿಯರ್​ ಜೊತೆಯಲ್ಲಿ ಜೈಪ್ರಕಾಶ್​ ಹಾಗೂ ಆತನ ಸ್ನೇಹಿತರು ಗಲಾಟೆ ಮಾಡುತ್ತಿದುದನ್ನು ಗಮನಿಸಿದ ಪ್ರಕಾಶ್​ ಮಧ್ಯಸ್ಥಿಕೆ ವಹಿಸಿ ಹಣ ಪಾವತಿ ಮಾಡುವಂತೆ ಮಾಡಿದ್ದರು ಇದಾದ ಬಳಿಕ ಪ್ರಕಾಶ್​ ಬಾರ್​ನಿಂದ ಹೊರಗೆ ನಡೆದು ತನ್ನ ಸ್ನೇಹಿತರನ್ನು ಡ್ರಾಪ್​ ಮಾಡಿ ಮನೆಗೆ ಹಿಂತಿರುಗಬೇಕಾದಾಗ ರಸ್ತೆಯಲ್ಲಿ ಜೈ ಪ್ರಕಾಶ್​ ಹಾಗೂ ಆತನ ಸ್ನೇಹಿತರು ಅಡ್ಡಗಟ್ಟಿದ್ದರು.


ಬಾರ್​ನಲ್ಲಿ ಬಿಲ್​ ಪಾವತಿ ಮಾಡುವಾಗ ಮಧ್ಯಸ್ಥಿಕೆ ವಹಿಸಲು ನಿನ್ನನ್ನು ಕರೆದವರು ಯಾರು ಎಂದು ಪ್ರಶ್ನಿಸಿದ ಜೈ ಪ್ರಕಾಶ್​ ಮತ್ತಾತನ ಸ್ನೇಹಿತರು ಅವಾಚ್ಯ ಶಬ್ದಗಳಿಂದ ಪ್ರಕಾಶ್​ಗೆ ನಿಂದಿಸಿದ್ದರು. ಇದಾದ ಬಳಿಕ ಪ್ರಕಾಶ್​ ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪ್ರಕಾಶ್​ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಇದನ್ನು ಓದಿ : Asia Cup 2022 : ಏಷ್ಯಾಕಪ್ ವೇಳಾಪಟ್ಟಿ ಪ್ರಕಟ : ಟೂರ್ನಿಯ ಫಾರ್ಮ್ಯಾಟ್, ಭಾರತದಲ್ಲಿ Live Streaming, ಒಂದೇ ಕ್ಲಿಕ್‌ನಲ್ಲಿ ಕಂಪ್ಲೀಟ್ ಡೀಟೇಲ್ಸ್

ಇದನ್ನೂ ಓದಿ : DK Shivakumar hug Siddaramaiah : ಸಿದ್ದರಾಮಯ್ಯ ತಬ್ಬಿಕೊಳ್ಳಲು ಡಿಕೆ ಶಿವಕುಮಾರ್‌ಗೆ ರಾಹುಲ್ ಕೊಟ್ರಾ ಸಲಹೆ : ವೈರಲ್ ವಿಡಿಯೋದಲ್ಲಿ ಬಯಲಾಯ್ತು ಸತ್ಯ

a man killed for bar bill by friends in bengaluru

Comments are closed.