ಪುತ್ರ ವ್ಯಾಮೋಹಕ್ಕೆ ಸಚಿನ್ ಪೈಲಟ್ ಬಲಿ ? ಹೊಸ ಪಕ್ಷ ಸ್ಥಾಪನೆಯತ್ತ ಪೈಲೆಟ್ ?

0

ಬಂಡಾಯದ ಬೇಗುದಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಹೈರಾಣಾಗಿಸಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಪುತ್ರ ವ್ಯಾಮೋಹ ಮತ್ತೊಬ್ಬ ಯುವ ನಾಯಕನನ್ನು ಬಲಿ ಪಡೆದಿದೆ. ಕಾಂಗ್ರೆಸ್ ವಿರುದ್ದ ತೊಡೆತಟ್ಟಿರುವ ಸಚಿನ್ ಪೈಲೆಟ್ ಇದೀಗ ಹೊಸ ಪಕ್ಷವನ್ನು ಕಟ್ಟಿ ಸೇಡು ತೀರಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ.

ಹೌದು, ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪಣತೊಟ್ಟವರು ಜ್ಯೋತಿರಾದಿತ್ಯ ಸಿಂಧ್ಯಾ ಹಾಗೂ ಯುವ ನಾಯಕ ಸಚಿವ ಪೈಲಟ್. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ವರ್ಷಗಳಲ್ಲಿ ಇಬ್ಬರೂ ನಾಯಕರು ಕಾಂಗ್ರೆಸ್ ಪಕ್ಷದಿಂದಲೇ ದೂರವಾಗಿದ್ದಾರೆ. ಜ್ಯೋತಿರಾದಿತ್ಯ ಸಿಂಧ್ಯಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ರೆ, ಸಚಿನ್ ಪೈಲಟ್ ಹೊಸ ಪಕ್ಷ ಕಟ್ಟುವ ಸುಳಿವುಕೊಟ್ಟಿದ್ದಾರೆ. ಅಷ್ಟಕ್ಕೂ ಕಾಂಗ್ರೆಸ್ ಪಕ್ಷಕ್ಕಾಗಿ ಹಲಗಿರುಳು ಬೆವರು ಸುರಿಸಿದ ನಾಯಕರು ಪಕ್ಷದಿಂದ ದೂರವಾಗಲು ಕಾರಣವಾಗಿರೋದು ಬೇರಾರೂ ಅಲ್ಲಾ ಸೋನಿಯಾ ಗಾಂಧಿಯವರ ಪುತ್ರ ವ್ಯಾಮೋಹ.

ರಾಜಸ್ಥಾನದಲ್ಲಿ ನೆಲಕಚ್ಚಿದ್ದ ಕಾಂಗ್ರೆಸ್ ಗೆ ಮರುಜೀವ ಕೊಡುವುದು ಅಷ್ಟು ಸುಲಭ ಮಾತಾಗಿರಲಿಲ್ಲ. ಅಶೋಕ್ ಗೆಹ್ಲೋಟ್ ರಾಷ್ಟ್ರರಾಜಕಾರಣ ನಡೆಸುತ್ತಾ ದೆಹಲಿಯಲ್ಲಿದ್ದಾಗ ರಾಜಸ್ಥಾನದ ಮೂಲೆ ಮೂಲೆಗೂ ಸಂಚರಿಸಿ ಪಕ್ಷವನ್ನು ಸಂಘಟಿಸಿರುವುದು ಇದೇ ಸಚಿನ್ ಪೈಲೆಟ್. ಕೇವಲ 36 ವರ್ಷದ ಸಚಿನ್, ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಲು ಬೆವರು ಸುರಿಸಿದ್ದಾರೆ. ಸಚಿನ್ ಪೈಲೆಟ್ ಈ ಬಾರಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತು ಬಲವಾಗಿ ಕೇಳಿಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡಿ ಕಾಂಗ್ರೆಸ್ ಕೈತೊಳೆದು ಕೊಂಡಿತ್ತು.

ಆದ್ರೀಗ ಸಚಿವ ಪೈಲೆಟ್ ಕಾಂಗ್ರೆಸ್ ವಿರುದ್ದವೇ ಮುನಿಸಿಕೊಂಡಿದ್ದರು. ಮುಂದಿನ ಚುನಾವಣೆಗೆ ಮುನ್ನವೇ ತನ್ನನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಬೇಕು. ತನ್ನ ಬೆಂಬಲಿಗ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಅಲ್ಲದೇ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನೂ ತಾನು ಯಾರಿಗೆ ಹೇಳುತ್ತೇನೋ ಅವರಿಗೆ ನೀಡಬೇಕು. ಜೊತೆಗೆ ಕಾಂಗ್ರೆಸ್ ಉಸ್ತುವಾರಿಯಾಗಿರುವ ಅವಿನಾಶ್ ಪಾಂಡೆ ಅವರನ್ನು ಬದಲಾಯಿಸಬೇಕೆಂಬ ಕುರಿತು ಪೈಲೆಟ್ ಡಿಮ್ಯಾಂಟ್ ಇಟ್ಟಿದ್ದರು. ಆದ್ರಿದನ್ನು ಕಾಂಗ್ರೆಸ್ ಅಧಿನಾಯಕಿ ಸೋನಿಯಾರಿಂದ ಸಹಿಸೋದಕ್ಕೆ ಸಾಧ್ಯವಾಗಲೇ ಇಲ್ಲವೆಂಬ ಮಾತು ಕೇಳಿಬರುತ್ತಿದೆ.

ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರಿಗೆ ಸರಿಸಮನಾಗಿ ನಿಲ್ಲಬಲ್ಲ ನಾಯಕನೆನಿಸಿಕೊಂಡಿದ್ದ ಸಚಿನ್ ಪೈಲೆಟ್ ಅವರನ್ನು ಕಳೆದು ಕೊಂಡಿದೆ. ಸಚಿನ್ ಪೈಲೆಟನ್ನು ಡಿಸಿಎಂ ಸ್ಥಾನದಿಂದ ಹಾಗೂ ರಾಜಸ್ಥಾನ ಪಕ್ಷದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ. ಸಚಿನ್ ಪೈಲೆಟ್ ನಿರ್ಗಮನದ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದ ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿ ಪುತ್ರ ವ್ಯಾಮೋಹದಿಂದ, ಮಗನ ಭವಿಷ್ಯದ ಬಗ್ಗೆ ಕಾರ್ಯಸೂಚಿಯನ್ನು ಹಿಡಿದುಕೊಂಡು ಈ ರೀತಿ ಮಾಡುತ್ತಿದ್ದಾರೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.

ಉಪಮುಖ್ಯಮಂತ್ರಿಯಾಗಿ, ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದವರನ್ನು ಕಿತ್ತು ಹಾಕಿರುವುದು ಕಾಂಗ್ರೆಸ್ ಪಕ್ಷದಲ್ಲಿಯೇ ಅಪರೂಪ. ಪಕ್ಷಕ್ಕಾಗಿ ದುಡಿದ ನಾಯಕನನ್ನು ಮನವೊಲಿಸಲು ಮುಂದಾಗದ ಕಾಂಗ್ರೆಸ್ ನಾಯಕರು ಪಕ್ಷದಿಂದಲೇ ಹೊರ ಹಾಕಿದ್ದಾರೆ. ಆದರೆ ಪಕ್ಷವನ್ನು ಅಧಿಕಾರಕ್ಕೆ ತಂದ ಯುವ ನಾಯಕನ್ನು ಕಿತ್ತೊಗೆಯುವ ಮೊದಲು ಕಾಂಗ್ರೆಸ್ ಒಮ್ಮೆ ಚಿಂತನೆ ನಡೆಸಬಹುದಿತ್ತು. ಇನ್ನೊಂದು ಅವಕಾಶವನ್ನೂ ನೀಡಬಹುದಿತ್ತು. ಆದ್ರೀಗ ಕಾಂಗ್ರೆಸ್ ಕೈಗೊಂಡ ನಿರ್ಣಯ ಪಕ್ಷಕ್ಕೆ ಮುಳುವಾಗುವ ಲಕ್ಷಣಗಳು ಗೋಚರಿಸುತ್ತಿದೆ.

ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿತರಾಗಿರುವ ಸಚಿನ್ ಪೈಲೆಟ್ ಇದೀಗ ಹೊಸ ಪಕ್ಷ ಕಟ್ಟುವುದಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿಯೂ ಚಿಂತನೆ ನಡೆಸಿದ್ದಾರೆನ್ನಲಾಗುತ್ತಿದೆ. ಒಂದೊಮ್ಮೆ ನೇರವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ರೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದ ಹೊಡೆತ ಕೊಡುವ ಸಾಧ್ಯತೆಯಿದೆ. ಒಂದು ಹಂತದಲ್ಲಿ ರಾಹುಲ್ ಗಾಂಧಿಯನ್ನು ಮೀರುವ ಎಲ್ಲಾ ಸಾಮರ್ಥ್ಯ ಇದ್ದ ಜ್ಯೋತಿರಾದಿತ್ಯ ಸಿಂಧ್ಯಾ ನಂತರ ಈಗ ಪೈಲೆಟ್ ಕಾಂಗ್ರೆಸ್ಸಿನಿಂದ ನಿರ್ಗಮಿಸಿದ್ದಾರೆ.

ಸಿಂದ್ಯಾ, ಪೈಲೆಟ್ ಕಾಂಗ್ರೆಸ್ ನಿಂದ ದೂರವಾಗಿರೋದು ಮೇಲ್ನೋಟಕ್ಕೆ ನಷ್ಟವೆನಿಸದೇ ಇದ್ರೂ ಕೂಡ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡಮಟ್ಟದ ಹೊಡೆತ ನೀಡುವುದಂತೂ ಗ್ಯಾರಂಟಿ.

Leave A Reply

Your email address will not be published.