Ambedkar Jayanthi 2023: ಭಾರತ ಕಂಡ ಶ್ರೇಷ್ಠ ನಾಯಕ ಡಾ.ಬಿ.ಆರ್‌ ಅಂಬೇಡ್ಕರ್‌ ಅವರು ಬೆಳೆದು ಬಂದ ಹಾದಿ

(Ambedkar Jayanthi 2023) ಇಂದು ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ. ಭಾರತೀಯರ ಪವಿತ್ರ ಗ್ರಂಥವಾದ ದೇಶದ ಆತ್ಮವೆಂದೇ ಕರೆಯಬಹುದಾದ ಸಂವಿಧಾನ ರಚನೆಯ ಹಿಂದಿನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು, ಅವರ ಆದರ್ಶಗಳು ಭಾರತೀಯರ ಪಾಲಿಗೆ ಸ್ಪೂರ್ತಿ. ಎಲ್ಲರಲ್ಲೂ, ಎಲ್ಲದರಲ್ಲೂ ಸಮಾನತೆಯನ್ನು ಕಂಡ ಓರ್ವ ನಾಯಕ. ಇವರ ಚಿಂತನೆಗಳು ಎಲ್ಲ ಯುವಜನತೆಗೂ ಸ್ಪೂರ್ತಿದಾಯಕ.

ಅಂಬೇಡ್ಕರ್‌ ಅವರು ಏಪ್ರಿಲ್‌ 14, 1891 ರಲ್ಲಿ ಜನಿಸಿದರು. ನಂತರ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್‌ ಪದವಿಯನ್ನು ಪಡೆದರು. 1920 ರಲ್ಲಿ ಬಿ. ಆರ್. ಅಂಬೇಡ್ಕರ್ ಅವರು ‘ಮೂಕನಾಯಕ’ ಎಂಬ ಪತ್ರಿಕೆಯನ್ನು ಆರಂಭಿಸಿದರು. ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ನೇಮಕಗೊಂಡಿದ್ದರು. ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ವಿರುದ್ದ ಧನಿಯೆತ್ತಿ ಹೋರಾಟ ನಡೆಸಿದ ಏಕೈಕ ನಾಯಕ ಅಂದರೇ ಅದು ಅಂಬೇಡ್ಕರ್‌ ಅವರು. ನಂತರದಲ್ಲಿ ಸಂವಿದಾನವನ್ನು ರಚಿಸಿ ಅದರ ಕರಡು ಸಮಿತಿಯ ಅಧ್ಯಕ್ಷರಾಗಿದ್ದು, ಸಂವಿಧಾನ ಶಿಲ್ಪಿಯೆಂತಲೇ ಜಗತ್ಪ್ರಸಿದ್ದಿ ಹೊಂದಿದರು.

ಸಂವಿಧಾನ ರಚನಾ ಕಾರ್ಯ :
ಇವರನ್ನು ಭಾರತದ ಸಂವಿಧಾನದ ಶಿಲ್ಪಿ ಹಾಗೂ ಆಧುನಿಕ ಮನು ಎಂದೂ ಕರೆಯುತ್ತಾರೆ. ಸಂವಿಧಾನದ ಕರಡು ಪ್ರತಿಯನ್ನು ಸಂವಿಧಾನ ಸದಸ್ಯರ ಮುಂದೆ 3 ಬಾರಿ ಓದಿದರು. ಅಂಬೇಡ್ಕರ್ ಅವರು ಸಂವಿಧಾನದ ಅಂತಿಮ ಕರಡು ಸಿದ್ಧಪಡಿಸಲು 2 ವರ್ಷ 11 ತಿಂಗಳು 17 ದಿನಗಳನ್ನು ತೆಗೆದುಕೊಂಡರು. ಭಾರತದ ಹೊಸ ಸಂವಿಧಾನವನ್ನು ರಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಲು ಕಾಂಗ್ರೆಸ್ ಸರ್ಕಾರವು ಅವರನ್ನು ಆಹ್ವಾನಿಸಿತು. ಅಂಬೇಡ್ಕರ್‌ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಬಾಬಾಸಾಹೇಬರು 1952 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. ನಂತರ 1952 ರಲ್ಲಿ ರಾಜ್ಯಸಭೆಗೆ ನೇಮಕಗೊಂಡರು.

ಸಾಧನೆಗಳು
*. 1918 ರಲ್ಲಿ ಮುಂಬಯಿಯ ಸೈಡನ್‌ಹಮ್ ಕಾಲೇಜಿನಲ್ಲಿ ಉಪನ್ಯಾಸಕರಾದರು. ನಂತರ ಅದೇ ಸಂದರ್ಭದಲ್ಲಿ ಅಸ್ಪೃಶ್ಯರ ಸಮಸ್ಯೆಗಳ್ನನು ಪರಿಹರಿಸುವ ಉದ್ದೇಶದಿಂದ ’ಮೂಕನಾಯಕ’ ಎನ್ನುವ ಮರಾಠಿ ವರ್ತಮಾನವನ್ನು ಆರಂಬಿಸಿದರು. *. ಸಮ್ಮೇಳನಗಳನ್ನು ಸಂಘಟಿಸಲು ಮತ್ತು ಅವುಗಳಲ್ಲಿ ಭಾಗವಹಿಸಲು ಆರಂಭಿಸಿದರು. ದಲಿತರು ಅನುಭವಿಸುತ್ತಿರುವ ಅವಮಾನಗಳನ್ನು ಬೆಳಕಿಗೆ ತಂದು ಅವುಗಳಿಗೆ ಪ್ರಚಾರ ನೀಡುವುದು ಮತ್ತು ಸಮಾನ ಹಕ್ಕುಗಳಿಗಾಗಿ ಹೋರಾಟ ನಡೆಸುವುದೇ ಮುಖ್ಯ ಎಂದು ಕೊಂಡರು.
*. ನಂತರ ಪುನಃ ಸ್ನೇಹಿತರ ಸಹಾಯದೊಂದಿಗೆ 1920 ರಲ್ಲಿ ಲಂಡನ್‌ಗೆ ತೆರಳಿ ಗ್ರೇಸ್ ಇನ್‌ನಲ್ಲಿ 1923 ರಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯಲ್ಲಿ ಅರ್ಥಸಾಸ್ತ್ರದ ಡಾಕ್ಟರೇಟ್ ಪಡೆದು ಭಾರತಕ್ಕೆ ಮರಳಿದರು. ಜಗತ್ಪ್ರಸಿದ್ಧ ಸಂಸ್ಥೆಯಿಂದ ಡಾಕ್ಟರೇಟ್ ಪಡೆದ ಭಾರತದ ಮೊದಲಿಗರಾಗಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್ ತಮ್ಮ ಜೀವನವನ್ನು ದಲಿತೋದ್ಧಾರದ ಕೆಲಸಕ್ಕೆ ಮುಡಿಪಾಗಿಟ್ಟರು.
*. 1924ರಲ್ಲಿ ’ಬಹಿಷ್ಕೃತ ಹಿತಕಾರಿಣಿ ಸಭಾ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ದಲಿತರ ಉದ್ಧಾರಕ್ಕಾಗಿ, ಶಿಕ್ಷಣ ಪ್ರತಿಯೊಬ್ಬರಿಗೂ ತಲಪಬೇಕು. ಇದಕ್ಕಾಗಿ ಹಾಸ್ಟೆಲ್, ಶಾಲೆ ಮತ್ತು ಉಚಿತ ಗ್ರಂಥಾಲಯಗಳನ್ನು ಆರಂಭಿಸಿದರು.
*. 1927ರಲ್ಲಿ ಬಾಬಾಸಾಹೇಬರು ಕೊಲಾಬಾ ಜಿಲ್ಲೆಯ ಮಹಾದ್‌ನಲ್ಲಿ ಜರಗಿದ ಸಮ್ಮೇಳದ ಅಧ್ಯಕ್ಷತೆ ವಹಿಸಿದ್ದ ಅವರು, ನಾವೀಗ ಮೇಲು-ಕೀಳು ಎಂಬ ಭಾವನೆಯನ್ನು ನಮ್ಮ ಮನಸ್ಸುಗಳಿಂದ ಕಿತ್ತುಹಾಕಬೇಕಾಗಿದೆ.
*. 1935 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ರಚನೆಯಲ್ಲಿ ಅಂಬೇಡ್ಕರ್ ಪ್ರಮುಖ ಪಾತ್ರ ವಹಿಸಿದರು.
*. 1955 ರಲ್ಲಿ, ಉತ್ತಮ ಸರ್ಕಾರಕ್ಕಾಗಿ ಮಧ್ಯಪ್ರದೇಶ ಮತ್ತು ಬಿಹಾರ ವಿಭಜನೆಯನ್ನು ಪ್ರಸ್ತಾಪಿಸಿದ ಮೊದಲ ವ್ಯಕ್ತಿ.
*. ಸಂಸ್ಕೃತವನ್ನು ಭಾರತೀಯ ಒಕ್ಕೂಟದ ಅಧಿಕೃತ ಭಾಷೆಯನ್ನಾಗಿ ಮಾಡಲು ಬಯಸಿದ್ದರು ಮತ್ತು ಅವರು ‘ಲೋಕಸಭೆ’ ಚುನಾವಣೆಯಲ್ಲಿ ಎರಡು ಬಾರಿ ಭಾಗವಹಿಸಿದರು ಆದರೆ ಎರಡೂ ಸಂದರ್ಭಗಳಲ್ಲಿ ಗೆಲ್ಲಲು ವಿಫಲರಾದರು.
*. ಉದ್ಯೋಗ ಮತ್ತು ಕ್ಷೇತ್ರ ಮೀಸಲಾತಿ ತತ್ವವನ್ನು ವಿರೋಧಿಸಿದರು.
*. ಪಿಎಚ್‌ಡಿ ಗಳಿಸಿದ ಮೊದಲ ಭಾರತೀಯರಾಗಿದ್ದರು.
*. ಡಾ.ಭೀಮರಾವ್ ಅಂಬೇಡ್ಕರ್ ಅವರು ಬರೆದ ಕೊನೆಯ ಪುಸ್ತಕದ ಹೆಸರು ‘ಬುದ್ಧ ಮತ್ತು ಅವನ ಧರ್ಮʼ.

ಇದನ್ನೂ ಓದಿ : Ambedkar’s Statue : ಹೈದರಾಬಾದ್‌ ನಲ್ಲಿ ಅದ್ದೂರಿಯಾಗಿ ಅನಾವರಣಗೊಳ್ಳಲಿದೆ 125 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ

ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊದಲ ಜನ್ಮದಿನವನ್ನು ಸಾರ್ವಜನಿಕವಾಗಿ 14 ಏಪ್ರಿಲ್ 1928 ರಂದು ಪುಣೆಯಲ್ಲಿ ಅಂಬೇಡ್ಕರ್ ವಾದಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದ ಜನಾರ್ದನ್ ಸದಾಶಿವ ರಣಪಿಸೆಯವರು [10] ಆಚರಿಸಿದರು . ಅವರು ಬಾಬಾಸಾಹೇಬರ ಜನ್ಮ ವಾರ್ಷಿಕೋತ್ಸವ ಅಥವಾ ಅಂಬೇಡ್ಕರ್ ಜಯಂತಿ ಆಚರಣೆಯನ್ನು ಪ್ರಾರಂಭಿಸಿದರು

Ambedkar Jayanthi 2023: The Path of India’s Greatest Leader Dr. BR Ambedkar

Comments are closed.