Alia Bhatt and Ranbir Kapoor : ಸಪ್ತಪದಿ ತುಳಿದ ರಣಬೀರ್​ – ಆಲಿಯಾ ಜೋಡಿ

Alia Bhatt and Ranbir Kapoor : ಬಿ ಟೌನ್​​ನ ಈ ವರ್ಷದ ಮದುವೆ ಇಂದು ನೆರವೇರಿದೆ. ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಜೋಡಿ ಇಂದು ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವಾಸ್ತು ನಿವಾಸದಲ್ಲಿ ಸಪ್ತಪದಿ ತುಳಿದಿದ್ದಾರೆ. ಕೃಷ್ಣ ರಾಜ್​ ಬಂಗಲೆಯಲ್ಲಿ ನಡೆದ ದಂಪತಿಯ ಮೆಹಂದಿ ಸಮಾರಂಭದಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ಹಾಜರಿದ್ದರು.


ಸಮಾರಂಭದ ಬಳಿಕ ಸಾಹ್ನಿ ಕಟ್ಟಡದಿಂದ ಹೊರ ಬಂದ ರಣಬೀರ್​ ಕಪೂರ್​ ತಾಯಿ ನೀತು ಕಪೂರ್​ ಹಾಗೂ ಸಹೋದರಿ ರಿದ್ಧಿಮಾ ಕಪೂರ್​​ ಮದುವೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಆದರೆ ಇಲ್ಲಿಯವರೆಗೆ ಮದುವೆಯ ಯಾವುದೇ ಫೋಟೋಗಳು ಹೊರ ಬಿದ್ದಿಲ್ಲ.


ಸೆಲೆಬ್ರಿಟಿಗಳ ಮದುವೆ ಸಮಾರಂಭಕ್ಕೆ ಕರೀನಾ ಕಪೂರ್​ ಖಾನ್​, ಸೈಫ್​ ಅಲಿ ಖಾನ್​, ರಿಮಾ ಜೈನ್​, ರಣಧೀರ್​ ಕಪೂರ್​, ರಾಹುಲ್ ಭಟ್​ ಹಾಗೂ ಕರಣ್​ ಜೋಹರ್​ ಸೇರಿದಂತೆ ಅನೇಕರು ಸಾಕ್ಷಿಯಾದರು. ಪಂಜಾಬಿ ಸಂಪ್ರದಾಯದಂತೆ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿರಿಸಿದೆ ಎನ್ನಲಾಗಿದೆ.


ಮದುವೆ ಸಮಾರಂಭದ ಥೀಮ್​ ಬಣ್ಣ ಬಿಳಿ ಹಾಗೂ ಬಂಗಾರ ಬಣ್ಣವಾಗಿತ್ತು. ನೀತು ಕಪೂರ್​, ಸೋನಿ ರಾಜ್ದಾನ್​, ಶಹೀನ್ ಭಟ್​​, ರಿದ್ಧಿಮಾ ಕಪೂರ್​, ರೀಮಾ ಜೈನ್​, ಕರೀನಾ ಕಪೂರ್​ ಖಾನ್​ ಸೇರಿದಂತೆ ಅನೇಕರು ಗುಲಾಬಿ ಬಣ್ಣದ ಧಿರಿಸಿನಲ್ಲಿ ಕಾಣಿಸಿಕೊಂಡರು.


ಮದುವೆಯ ಸಂಭ್ರಮ ಮುಗಿದ ಬಳಿಕ ಇನ್ನೇನು ಕೆಲವೇ ದಿನಗಳಲ್ಲಿ ನಟ ರಣಬೀರ್​ ಕಪೂರ್​ ರಶ್ಮಿಕಾ ಮಂದಣ್ಣ ಜೊತೆಯಲ್ಲಿ ಆ್ಯನಿಮಲ್​ ಸಿನಿಮಾ ಶೂಟಿಂಗ್​​ನಲ್ಲಿ ಬ್ಯುಸಿಯಾಗಲಿದ್ದಾರೆ. ಇತ್ತ ಸಾಲು ಸಾಲು ಸಿನಿಮಾಗಳ ಸಕ್ಸಸ್​ನಲ್ಲಿ ತೇಲುತ್ತಿರುವ ನಟಿ ಆಲಿಯಾ ಭಟ್​ ಹಾಲಿವುಡ್​ ಅಂಗಳಕ್ಕೆ ಹಾರಲಿದ್ದಾರೆ.

ಇದನ್ನು ಓದಿ : Kanthara : ಕರಾವಳಿಯ ಕತೆ ಹೇಳೋಕೆ ಬರ್ತಿದೆ ಕಾಂತಾರ : ರಿಲೀಸ್ ಆಯ್ತು ಟೀಸರ್

ಇದನ್ನೂ ಓದಿ : KGF Chapter 2 Piracy Leak: ಕೆಜಿಎಫ್​ 2ಗೆ ಪೈರಸಿ ಶಾಕ್​: ಮೊದಲ ದಿನವೇ ಲೀಕ್​ ಆದ ಸಿನೆಮಾ

It’s official! Alia Bhatt and Ranbir Kapoor are now married | LIVE Updates

Comments are closed.