ಕಾಂಗ್ರೆಸ್‌ನ ಮಾಜಿ ಶಾಸಕ ಶಂಕರ ಗೌಡ ವಿಧಿವಶ

ಗದಗ: (Shankara Gowda N Patil) ಕಾಂಗ್ರೆಸ್‌ ನ ಮಾಜಿ ಶಾಸಕ ಶಂಕರಗೌಡ ಎನ್‌ ಪಾಟೀಲ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದು,ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ತಮ್ಮ 81 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದ ಇವರು ಗುರುವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.

ಪಾಟೀಲ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಇದರ ಕಾರಣ ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 1989-1994ರ ಅವಧಿಯಲ್ಲಿ ಶಂಕರಗೌಡ ಅವರು ಕಾಂಗ್ರೆಸ್‌ ನಿಂದ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು. ಸರಳ ನಡೆ-ನುಡಿ, ನೇರ ವ್ಯಕ್ತಿತ್ವ ಹೊಂದಿದ್ದ ಶಂಕರಗೌಡ ಅವರು ಎಲ್ಲಾ ಪಕ್ಷದವರ ಜೊತೆಗೆ ಅನ್ಯೋನ್ಯತೆ ಹೊಂದಿದ್ದರು.

ಸರಳ ವ್ಯಕ್ತಿಯಾಗಿದ್ದ ಪಾಟಿಲ್‌ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದು, ಗುರುವಾರ ಸಂಜೆ ನಾಲ್ಕು ಗಂಟೆಗೆ ಅವರ ಸ್ವಗ್ರಾಮವಾದ ಪುಟಗಂವ ಬಡ್ನಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದ್ದು, ಪಾಟೀಲರ ಅಂತಿಮ ದರ್ಶನಕ್ಕೆ ಅಭಿಮಾನಿಗಳು ಆಗಮಿಸಿದ್ದಾರೆ.

ಇದನ್ನೂ ಓದಿ : Actor Shashikumar: ಮತ್ತೆ ಚುನಾವಣೆಗೆ ನಟ ಶಶಿಕುಮಾರ್ ಸಜ್ಜು: ಕ್ಷೇತ್ರ ಯಾವುದು? ಟಿಕೆಟ್ ಸಿಗುತ್ತಾ?

ಇದನ್ನೂ ಓದಿ : Liquor tragedy: ಬಿಹಾರದಲ್ಲಿ ಕಳ್ಳಭಟ್ಟಿ ದುರಂತಕ್ಕೆ 20 ಮಂದಿ ಬಲಿ; ವಿಧಾನಸಭೆಯಲ್ಲಿ ಚರ್ಚೆ, ಪ್ರತಿಪಕ್ಷಗಳ ಗದ್ದಲ

ಇದನ್ನೂ ಓದಿ : VastuDosha for congress office: ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ವಾಸ್ತು ದೋಷ : ಪರಿಹಾರಕ್ಕೆ ಮೊರೆ ಹೋದ ನಾಯಕರು

ಇದನ್ನೂ ಓದಿ : Siddaramaiah Secret meeting : ಹೈಕಮಾಂಡ್ ಗೂ ಕ್ಯಾರೇ ಎನ್ನದ ಸಿದ್ಧರಾಮಯ್ಯ: ವರಿಷ್ಠರ ಭೇಟಿ ಬಳಿಕ ಅಪ್ತರೊಂದಿಗೆ ರಹಸ್ಯ ಮೀಟಿಂಗ್

ಇದನ್ನೂ ಓದಿ : India-China Border : ಭಾರತ-ಚೀನಾ ಗಡಿ ಸಂಘರ್ಷಣೆ : ನಮ್ಮ ಸೈನಿಕರ ಸಾವು ಸಂಭವಿಸಿಲ್ಲ, ರಾಜನಾಥ್‌ ಸಿಂಗ್‌ ಸ್ಪಷ್ಟನೆ

Former Congress MLA Shankara Gowda N Patil died at the age of 81 after being ill and the treatment in the hospital was ineffective. He had worked as an MLA in Shirahatti constituency of Gadag district and passed away on Thursday morning.

Comments are closed.