ಹಾಸ್ಟೆಲ್‌ ಶೌಚಾಲಯದಲ್ಲಿ ಕತ್ತು ಕೊಯ್ದುಕೊಂಡು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

ಬನ್ನೇರುಘಟ್ಟ: (College student committed suicide) ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಯೊಬ್ಬ ಕತ್ತು ಕೋಯ್ದುಕೊಂಡು ಹಾಸ್ಟೆಲ್‌ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬನ್ನೇರುಘಟ್ಟದಲ್ಲಿ ನಡೆದಿದೆ. ಕೇರಳ ಮೂಲದ ವಿದ್ಯಾರ್ಥಿ ನಿತಿನ್ (19 ವರ್ಷ) ಎಂಬಾತ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ನಿತಿನ್‌ ಬನ್ನೇರುಘಟ್ಟ ಬಳಿಯ ಎಎಂಸಿ ಇಂಜಿನಿಯರಿಂಗ್‌ ಕಾಲೇಜಿಲ್ಲಿ ಡಿಸೆಂಬರ್ 1 ರಂದು ಮೊದಲ ವರ್ಷದ ಕೋರ್ಸ್‌ಗೆ ಪ್ರವೇಶ ಪಡೆದು, ಇಂಜಿನಿಯರಿಂಗ್‌ ವಿದ್ಯಾಭ್ಯಾಸ ಮಾಡುತ್ತಿದ್ದನು. ಕಾಲೇಜು ಆವರಣದ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ವಿದ್ಯಾರ್ಥಿ ನಿತಿನ್‌ ಬುಧವಾರ ಮಧ್ಯಾಹ್ನ ಹಾಸ್ಟೆಲ್ ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಅವನ ಸಹಪಾಠಿ ಬಂದು ಬಾಗಿಲು ಬಡಿದಿದ್ದು, ನಿತಿನ್‌ ಬಾಗಿಲು ತೆರೆಯದಿದ್ದಾಗ ಸಹಪಾಠಿಗಳು ವಾರ್ಡನ್‌ಗೆ ಮಾಹಿತಿ ನೀಡಿದರು. ವಾರ್ಡನ್ ಮತ್ತು ಸಿಬ್ಬಂದಿ ಬಂದು ಬಾಗಿಲು ಒಡೆದು ನೋಡಿದಾಗ ಶೌಚಾಲಯದಲ್ಲಿ ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ನಿತಿನ್ ಶವ ಪತ್ತೆಯಾಗಿದೆ. ಚಾಕುವಿನಿಂದ ಕುತ್ತಿಗೆಗೆ ಇರಿದು ಆತ್ಮಹತ್ಯೆ (College student committed suicide) ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಕೂಡಲೆ ಹಾಸ್ಟೆಲ್‌ ಸಿಬ್ಬಂಧಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂಜಿನಿಯರಿಂಗ್‌ ಕಾಲೇಜಿಗೆ ಸೇರಿದ ಕೆಲವೇ ದಿನಗಳಲ್ಲಿ ನಿತಿನ್‌ ಇಂತಹ ಅತಿರೇಕದ ನಿರ್ಧಾರಕ್ಕೆ ಬಂದಿರುವುದಾದರು ಯಾಕೆ ಎಂಬುದು ತಿಳಿದಿಲ್ಲ. ತನಿಖೆಯ ನಂತರವಷ್ಟೇ ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕಾಗಿದೆ.

ಇದನ್ನೂ ಓದಿ : ಶಾಲಾ ಮಕ್ಕಳ ಬಸ್‌ ಪಲ್ಟಿ: ಐವರು ಮಕ್ಕಳಿಗೆ ಗಾಯ

ಇದನ್ನೂ ಓದಿ : ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಕಿರುಕುಳ: ಕಾಮುಕ ಶಿಕ್ಷಕನಿಗೆ ಧರ್ಮದೇಟು

ಇದನ್ನೂ ಓದಿ : Student died: ಶಾಲೆಯಲ್ಲಿ ನೇಣು ಬಿಗಿದು 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಇದನ್ನೂ ಓದಿ : Thumkur accident: ಕ್ಯಾಂಟರ್‌ ಗೆ ಕಾರು ಢಿಕ್ಕಿ: ನಾಲ್ವರು ಸಾವು

ಇದನ್ನೂ ಓದಿ : Liquor tragedy: ಬಿಹಾರದಲ್ಲಿ ಕಳ್ಳಭಟ್ಟಿ ದುರಂತಕ್ಕೆ 20 ಮಂದಿ ಬಲಿ; ವಿಧಾನಸಭೆಯಲ್ಲಿ ಚರ್ಚೆ, ಪ್ರತಿಪಕ್ಷಗಳ ಗದ್ದಲ

An incident of an engineering college student committed suicide by strangulation in the hostel toilet took place in Bannerghatta. Nitin (19 years old), a student from Kerala, committed suicide.

Comments are closed.