Siddaramaiah : ಭಾರತ್​ ಜೋಡೋ ಯಾತ್ರೆ ಬೆನ್ನಲ್ಲೇ ಪ್ರತ್ಯೇಕ ರಥಯಾತ್ರೆಗೆ ಸಿದ್ದರಾಮಯ್ಯ ಸಿದ್ಧತೆ

ಬೆಂಗಳೂರು : Bharat Jodo Yatra Siddaramaiah : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿದೆ. ಹೀಗಾಗಿ ಎಲ್ಲಾ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಜನರ ಮತವನ್ನು ಸೆಳೆಯುವ ಕೆಲಸದಲ್ಲಿ ನಿರತವಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ 75ನೇ ವರ್ಷದ ಜನ್ಮದಿನದ ಪ್ರಯುಕ್ತ ಸಿದ್ದರಾಮೋತ್ಸವ ಕಾರ್ಯಕ್ರಮವನ್ನು ಆಚರಿಸಿ ಅದರಲ್ಲಿ ಯಶಸ್ವಿ ಕೂಡ ಆಗಿದ್ದಾರೆ. ಈ ಬೆನ್ನಲ್ಲೇ ಬಿಜೆಪಿ ಕೂಡ ದೊಡ್ಡ ಬಳ್ಳಾಪುರದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಸಿ ಶಕ್ತಿಪ್ರದರ್ಶನ ಮಾಡಿದೆ .

ಈ ಎಲ್ಲದರ ನಡುವೆ ಸಂಸದ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ದೇಶಾದ್ಯಂತ ಭಾರತ್​ ಜೋಡೋ ಯಾತ್ರೆಯಲ್ಲಿ ನಿರತರಾಗಿದ್ದಾರೆ. ರಾಜ್ಯದಲ್ಲಿ ಇದರ ನೇತೃತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಭಾರತ್​ ಜೋಡೋ ಯಾತ್ರೆಯ ಪೂರ್ವ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಈ ಎಲ್ಲದರ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ರಾಜ್ಯಾದ್ಯಂತ ರಥಯಾತ್ರೆ ನೆರವೇರಿಸಲು ಸೈಲೆಂಟ್​ ಆಗಿ ಸಿದ್ಧತೆ ನಡೆಸ್ತಿದ್ದಾರೆ.

ಸಿದ್ದರಾಮಯ್ಯ ಅವರ ರಥಯಾತ್ರೆಗೆ ವಿಶೇಷ ವಾಹನ ಕೂಡ ಸಿದ್ಧಪಡಿಸಲಾಗಿದೆ. ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಆಪ್ತ ಮೂಲಗಳು ಮಾಹಿತಿ ನೀಡಿವೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಪಾದಯಾತ್ರೆ ಇದೇ ಸೆಪ್ಟೆಂಬರ್​ 30ರಂದು ಭಾರತ್​ ಜೊಡೋ ಯಾತ್ರೆಯ ಭಾಗವಾಗಿ ಕರ್ನಾಟಕಕ್ಕೆ ಎಂಟ್ರಿ ನೀಡಲಿದ್ದಾರೆ. ಈ ಯಾತ್ರೆಯಲ್ಲಿ ಡಿ.ಕೆ ಶಿವಕುಮಾರ್​ ಹೈಲೈಟ್​ ಆಗುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮದೇ ಪ್ರತ್ಯೇಕ ರಥಯಾತ್ರೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ನವೆಂಬರ್​ ತಿಂಗಳಲ್ಲಿ ಸಿದ್ದರಾಮಯ್ಯ ರಥಯಾತ್ರೆ ಆರಂಭಗೊಳ್ಳುವ ಸಾಧ್ಯತೆಯಿದೆ .

ಸಿದ್ದರಾಮಯ್ಯರಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ ಎಂಬ ಮಾತಿನಲ್ಲಿ ಯಾವುದೇ ಸಂದೇಹವಿಲ್ಲ. ಮುಂದಿನ ಸಿಎಂ ಅಭ್ಯರ್ಥಿ ಕೂಡ ತಾನೇ ಎಂದು ಹೇಳಿಕೊಳ್ತಿರುವ ಸಿದ್ದರಾಮಯ್ಯ ಪಕ್ಷದ ಪ್ರಚಾರದ ಜೊತೆಯಲ್ಲಿ ರಾಜ್ಯದಲ್ಲಿ ತನ್ನ ವರ್ಚಸ್ಸನ್ನೂ ಹೆಚ್ಚಿಸಿಕೊಳ್ಳುವ ಸಲುವಾಗಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದ್ದಾರೆ ಎನ್ನಲಾಗಿದೆ. ಆದರೆ ಈ ರಥಯಾತ್ರೆಯಲ್ಲಿ ಡಿ.ಕೆ ಶಿವಕುಮಾರ್ ಭಾಗಿಯಾಗುತ್ತಾರಾ ಇಲ್ಲವಾ ಎಂಬುದಕ್ಕೆ ಉತ್ತರ ಕಾಲವೇ ನೀಡಬೇಕಿದೆ.

ಇದನ್ನು ಓದಿ : Chandigarh: ವಿದ್ಯಾರ್ಥಿನಿಯರ ಸ್ನಾನದ ವಿಡಿಯೋ ಲೀಕ್ ಕೇಸ್.. ಮೂವರು ಅರೆಸ್ಟ್

ಇದನ್ನೂ ಓದಿ : Mohammed Shami Covid Positive : ಮೊಹಮ್ಮದ್ ಶಮಿಗೆ ಕೋವಿಡ್ ಪಾಸಿಟಿವ್.. ಕಂಬ್ಯಾಕ್‌ಗೆ ಮೊದಲೇ ಶಾಕ್, ಆಸೀಸ್ ಸರಣಿಯಿಂದ ಔಟ್

Siddaramaiah is preparing for a separate Rath Yatra after the Bharat Jodo Yatra

Comments are closed.