Diet In Dengue : ಡೆಂಗ್ಯೂ ದಿಂದ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತವೆ ಈ ಆಹಾರ ಕ್ರಮಗಳು

ಡೆಂಗ್ಯೂ (Dengue) ಇಡೀಸ್‌ ಎಂಬ ಸೊಳ್ಳೆ (Mosquito) ಗಳಿಂದ ಹರಡುವ ಜ್ವರ. ಮಳೆಯ ನಂತರ ಸೊಳ್ಳೆಗಳಿಂದ ಡೆಂಗ್ಯೂ ವೇಗವಾಗಿ ಹರಡುತ್ತದೆ. ಇದರಲ್ಲಿ ಪ್ಲೇಟ್‌ಲೆಟ್‌ಗಳು ಒಂದೇ ಸಮನೆ ಕಡಿಮೆಯಾಗುತ್ತಾ ಹೋಗಿ, ರೋಗಿಗೆ ತೀವ್ರ ಆಯಾಸ, ನಿಶ್ಯಕ್ತಿ ಕಾಣಿಸಿಕೊಳ್ಳುತ್ತದೆ. ಸಮಯಕ್ಕೆ ಸರಿಯಾಗಿ ಕ್ರಮ ವಹಿಸದಿದ್ದರೆ ಇದರಿಂದ ಜೀವಹಾನಿಯೂ ಆಗಬಹುದು. ಆಗ ಆಹಾರ ಕ್ರಮದಲ್ಲಿ (Diet In Dengue) ಬಹಳಷ್ಟು ಕಾಳಜಿಯ ಅವಶ್ಯಕತೆ ಇರುತ್ತದೆ. ಪ್ಲೇಟ್‌ಲೆಟ್‌ಗಳನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ.

ಪ್ಲೇಟ್‌ಲೆಟ್‌ಗಳ ಸಂಖ್ಯೆ ವೇಗವಾಗಿ ಕಡಿಮೆಯಾಗುವುದೇ ಜೀವಹಾನಿಗೆ ಮುಖ್ಯಕಾರಣ. ಡೆಂಗ್ಯೂ ನ ಪ್ರಾರಂಭದಲ್ಲೇ ರೋಗಿಗೆ ಉತ್ತಮ ಕಾಳಜಿ, ಉಪಚಾರದೊರೆತರೆ ಬೇಗನೆ ಗುಣಮುಖವಾಗಬಹುದು. ಉತ್ತಮ ಆಹಾರ ಕ್ರಮಗಳು ಇದಕ್ಕೆ ಸಹಾಯ ಮಾಡುತ್ತದೆ. ಡೆಂಗ್ಯೂ ಕಡಿಮೆಯಾದರು ಶರೀರದಲ್ಲಿ ಬಹಳ ನಿಶ್ಯಕ್ತಿ ಇರುತ್ತದೆ. ಅದಕ್ಕಾಗಿ ಊಟ–ತಿಂಡಿಯಲ್ಲಿ ಕಾಳಜಿ ವಹಿಸುವುದು ಅಗತ್ಯ. ನಿಶ್ಯಕ್ತಿ ದೂರವಾಗಿಸಿ, ಪ್ಲೇಟ್‌ಲೆಟ್‌ಗಳ ಸಂಖ್ಯೆ ಹೆಚ್ಚಿಸುವ ಆಹಾರಗಳ ಮಾಹಿತಿ ಇಲ್ಲಿದೆ.

ಹಸಿರು ತರಕಾರಿಗಳನ್ನು ತಿನ್ನಿ:
ಡೆಂಗ್ಯೂ ಜ್ವರದ ಸಮಯದಲ್ಲಿ ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ಸೊಪ್ಪು ಮತ್ತು ಹಸಿರು ತರಕಾರಿಗಳು ಜ್ವರದಿಂದ ಬಳಲಿದ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ಹಸಿರು ತರಕಾರಿಗಳನ್ನು ಸಲಾಡ್‌, ಸೂಪ್‌ ಮುಂತಾದವುಗಳ ರೂಪದಲ್ಲಿ ಸೇವಿಸಿಬಹುದು.

ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಿ :
ಜ್ವರದಿಂದ ಬಳಲಿದ ದೇಹಕ್ಕೆ ನೀರನ್ನು ಹೆಚ್ಚಾಗಿ ಸೇವಿಸುವುದು ಅಗತ್ಯವಾಗಿದೆ. ಅದರ ಜೊತೆಗೆ ದ್ರವಾಹರವನ್ನು ಸೇವಿಸುವುದರಿಂದ ದೇಹಕ್ಕೆ ನೀರಿನ ಮರು ಪೂರೈಕೆಯಾಗಿ ನಿಶ್ಯಕ್ತಿ, ಡೀಹೈಡ್ರೇಶನ್‌ ಕಡಿಮೆಯಾಗುತ್ತದೆ. ನೀರಿನ ಕೊರತೆ ನೀಗಿಸಲು ಹಣ್ಣುಗಳಿಂದ ತಯಾರಿಸಿದ ಜ್ಯೂಸ್‌, ಎಳನೀರು, ಸೂಪ್‌ ಗಳನ್ನು ಆಗಾಗ ಸೇವಿಸುತ್ತಿರಿ.

ಹೊರಗಿನ ತಿಂಡಿಗಳಿಂದ ದೂರವಿರಿ :
ನೀವು ಯಾವುದಾದರೂ ರೋಗದಿಂದ ಬಳಲುತ್ತಿದ್ದರೆ ಹೊರಗಿನ ತಿಂಡಿಗಳನ್ನು ಸೇವಿಸದೇ ಇರುವುದೇ ಒಳ್ಳೆಯದು. ಡಂಗ್ಯೂದಲ್ಲಿ ಪಿಜ್ಹಾ, ಬರ್ಗರ್‌, ಕೋಲ್ಡ್‌ ಡ್ರಿಂಕ್ಸ್‌ ಮುಂತಾದವುದಗಳಿಂದ ದೂರವಿರಿ. ಮಾರುಕಟ್ಟೆಯಲ್ಲಿ ಸಿಗುವ ರೆಡಿ–ಟು–ಈಟ್‌ ಆಹಾರಗಳಿಂದ ದೂರವಿರುವುದೇ ಉತ್ತಮ.

ಪೌಷ್ಠಿಕ ಆಹಾರಗಳನ್ನು ಸೇವಿಸಿ :
ನಿಶ್ಯಕ್ತಿಯನ್ನು ದೂರಮಾಡುವುದರಲ್ಲಿ ಡಯಟ್‌ ಮಹತ್ವಪೂರ್ಣ ಪಾತ್ರವಹಿಸುತ್ತದೆ. ರೋಗಿಗಳಿಗೆ ಹಸಿವು ಕಡಿಮೆಯಾಗಿರುತ್ತದೆ. ಇದರಿಂದ ಆಯಾಸ, ದಣಿವು ಆಗುತ್ತದೆ. ಅದಕ್ಕಾಗಿಯೇ ಪೌಷ್ಠಿಕ ಆಹಾರಗಳಿಂದ ಕೂಡಿದ ಡಯಟ್‌ ಬಹಳ ಪ್ರಯೋಜನಕಾರಿಯಾಗಿರುತ್ತದೆ. ಅವುಗಳು ಬೇಗನೆ ಜೀರ್ಣವಾಗಿ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತವೆ. ಬೆಳ್ಳುಳ್ಳಿ, ಶುಂಠಿ ಮತ್ತು ನಿಂಬೂ ರಸ ಇವುಗಳನ್ನು ಸೇರಿಸಿ ತಯಾರಿಸಿದ ಬೇಳೆಸಾರು ಉತ್ತಮ.

ಇದನ್ನೂ ಓದಿ : Dates Fruit : ಖರ್ಜೂರ ತಿನ್ನುವಾಗ ನೀವು ಈ ತಪ್ಪುಗಳನ್ನು ಮಾಡ್ಲೇಬೇಡಿ

ಇದನ್ನೂ ಓದಿ : Health Benefits of Papaya Leaves : ಪಪ್ಪಾಯ ಎಲೆ ಆರೋಗ್ಯಕ್ಕೆ ದಿವ್ಯೌಷದ

Diet In Dengue these foods and diet plan helps for fast recovery from dengue

Comments are closed.