Sriramulu : ಸಿದ್ದರಾಮಯ್ಯ ಪರ ಬ್ಯಾಟ್​ ಬೀಸಿದ್ದ ಶ್ರೀರಾಮುಲುವಿಗೆ ಹೊಸ ಸಂಕಷ್ಟ : ಸ್ಪಷ್ಟನೆ ನೀಡುವಂತೆ ಹೈಕಮಾಂಡ್​ ಸೂಚನೆ

Sriramulu : 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಸಿದ್ದರಾಮಯ್ಯ ಹೇಗೆ ಗೆದ್ದರು ಗೊತ್ತಾ..? ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಿದ್ದರಾಮಯ್ಯ ಎಂದಿಗೂ ಕುರುಬ ಸಮಾಜದ ಪರವಾಗಿ ಇದ್ದಾರೆ. ಸಿದ್ದರಾಮಯ್ಯ ಮತ್ತೆ ನಮ್ಮ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ವಿಪಕ್ಷ ನಾಯಕನನ್ನು ಹಾಡಿಹೊಗಳಿರುವ ಸಚಿವ ಶ್ರೀರಾಮುಲುಗೆ ಇದೀಗ ಸಂಕಷ್ಟ ಎದುರಾಗಿದೆ. ಸಿದ್ದರಾಮಯ್ಯ ಹಾಗೂ ನನ್ನ ನಡುವಿನ ಸಂಬಂಧ ಚೆನ್ನಾಗಿದೆ ಎಂದು ಹೇಳಲು ಹೋಗಿ ಯಡವಟ್ಟು ಮಾಡಿಕೊಂಡಿರುವ ಶ್ರೀರಾಮುಲು ಈಗಾಗಲೇ ತಾವು ನೀಡಿರುವ ಹೇಳಿಕೆಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಬಳಿಯಲ್ಲಿ ಕ್ಷಮೆಯಾಚಿಸಿದ್ದಾರೆ. ಆದರೆ ಇದೀಗ ಹೈಕಮಾಂಡ್​ ಕೂಡ ಶ್ರೀರಾಮುಲು ಕಿವಿ ಹಿಂಡಿದೆ ಎನ್ನಲಾಗಿದೆ.


ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಶ್ರೀರಾಮುಲು ಹೇಳಿಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರುವುದು ಬಿಜೆಪಿ ವರಿಷ್ಠರ ಗಮನಕ್ಕೆ ಬಂದಿದೆ. ಈ ಸಂಬಂಧ ಶ್ರೀರಾಮುಲು ವಿರುದ್ಧ ಗರಂ ಆಗಿರುವ ಬಿಜೆಪಿ ಹೈಕಮಾಂಡ್​​ ಶ್ರೀರಾಮುವಿಗೆ ಈ ಸಂಬಂಧ ಸ್ಪಷ್ಟನೆ ಕೇಳಿ ನೋಟಿಸ್​ ಕಳುಹಿಸಿದ ಎನ್ನಲಾಗಿದೆ. ಸಿದ್ದರಾಮಯ್ಯ ಪರ ಏಕೆ ಮಾತನಾಡಿದಿರಿ..? ಬಾದಾಮಿ ಚುನಾವಣಾ ತಂತ್ರದ ವಿಚಾರ ಈಗ ಯಾಕೆ ಬಂದಿದೆ..? ಘಟನೆಯ ಬಗ್ಗೆ ಸಂಪೂರ್ಣ ವಿವರಣೆ ನೀಡುವಂತೆ ಆದೇಶಿಸಿ ಬಿಜೆಪಿ ಹೈಕಮಾಂಡ್​ ಶ್ರೀರಾಮುಲುವಿಗೆ ನೋಟಿಸ್​ ಕಳುಹಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಹೈಕಮಾಂಡ್​ನಿಂದ ನೋಟಿಸ್​ ಹಿನ್ನೆಲೆಯಲ್ಲಿ ಸಚಿವ ಶ್ರೀರಾಮುಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​​ಗೆ ಈ ಸಂಬಂಧ ಉತ್ತರ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ .ಅಂದು ಶ್ರೀರಾಮುಲುವನ್ನು ಬಾದಾಮಿಯನ್ನು ಗೆಲ್ಲಿಸಬೇಕೆಂದು ದೆಹಲಿಯಿಂದ ಅಮಿತ್​​ ಶಾ ಬಾದಾಮಿಗೆ ಆಗಮಿಸಿದ್ದರು. ಸಿದ್ದರಾಮಯ್ಯರನ್ನು ಹೇಗಾದರೂ ಮಾಡಿ ಬಾದಾಮಿಯಲ್ಲಿ ಸೋಲಿಸಬೇಕೆಂದು ಶತಾಯ ಗತಾಯ ಪ್ರಯತ್ನಿಸಿದ್ದರು. ರಾಜ್ಯ ಮಾತ್ರವಲ್ಲದೇ ರಾಷ್ಟ್ರೀಯ ಬಿಜೆಪಿ ನಾಯಕರೂ ಸಹ ಶ್ರೀರಾಮುಲು ಗೆಲುವಿಗಾಗಿ ಅಂದು ಶ್ರಮಿಸಿದ್ದರು .


ಆದರೆ ಇದೀಗ ಸಿದ್ದರಾಮಯ್ಯ ಗೆಲ್ಲಲ್ಲು ನನ್ನ ಹಾಗೂ ಸಿದ್ದರಾಮಯ್ಯ ನಡುವೆ ಏನೋ ಒಳ ಒಪ್ಪಂದ ನಡೆದಿತ್ತು ಎಂಬ ಅರ್ಥದಲ್ಲಿ ಶ್ರೀರಾಮುಲು ಮಾತನಾಡಿದ್ದಾರೆ. ಶ್ರೀರಾಮುಲು ಈ ಹೇಳಿಕೆ ಬಿಜೆಪಿಗೆ ರಾಜ್ಯ ಮಟ್ಟದಲ್ಲಿ ಭಾರೀ ಮುಜುಗರ ಉಂಟು ಮಾಡಿದೆ. ಹೀಗಾಗಿ ಘಟನೆ ಸಂಬಂಧ ಸಂಪೂರ್ಣ ವಿವರಣೆ ನೀಡುವಂತೆ ಸಚಿವ ಶ್ರೀರಾಮುಲುವಿಗೆ ಹೈಕಮಾಂಡ್​ ನೋಟಿಸ್​ ಕಳುಹಿಸಿದೆ.

ಇದನ್ನು ಓದಿ : Inauguration of Dussehra : ಯಾರ ಪಾಲಿಗೆ ದಸರಾ ಉದ್ಘಾಟನೆಯ ಸೌಭಾಗ್ಯ ? HD ದೇವೆಗೌಡ್ರು, ರಜನಿಕಾಂತ್, ಯೋಗಿ ಆದಿತ್ಯ ನಾಥ ಹೆಸರು ಮುನ್ನಲೆಗೆ

ಇದನ್ನೂ ಓದಿ :Janaki Sudhir photo viral : ಮೈಗೆ ಬಟ್ಟೆ ಬದಲು ಬಂಗಾರ ಸುತ್ತಿಕೊಂಡ ಸುಂದರಿ: ಜಾನಕಿ ಸುಧೀರ್ ಪೋಟೋ ವೈರಲ್

Sriramulu has received a notice from the high command asking him to clarify his statement in favor of Siddaramaiah.

Comments are closed.