ರಾಮನಗರ : Siddaramautsava program : ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಸಮಾರಂಭಕ್ಕೆ ಲೆಕ್ಕಕ್ಕೂ ಮೀರಿದ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ಸದ್ಯದ ರಾಜಕೀಯ ಚರ್ಚೆಯ ಹಾಟ್ ಟಾಪಿಕ್ ಆಗಿ ಬದಲಾಗಿದೆ. ಕಾಂಗ್ರೆಸ್ಸಿಗರಿಗೆ ಇದೊಂದು ಸಾಧನೆ ಎನಿಸಿದರೆ ಬಿಜೆಪಿಗರಿಗೆ ಎಲ್ಲೊ ಒಂದು ಕಡೆ ಚುನಾವಣಾ ದೃಷ್ಟಿಯಿಂದ ಹಿನ್ನೆಡೆ ಎನಿಸಿದೆ. ಬಿಜೆಪಿಯ ಈ ಭಯದ ಲಾಭವನ್ನು ಪಡೆದ ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಸಿದ್ದರಾಮೋತ್ಸವ ಕಾರ್ಯಕ್ರಮ ದಿಂದ ಬಿಜೆಪಿಗರಿಗೆ ನಡುಕ ಶುರುವಾಗಿದೆ ಎಂದು ಟಾಂಗ್ ನೀಡಿದ್ದರು. ಸಿದ್ದರಾಮಯ್ಯರ ಈ ಹೇಳಿಕೆಗೆ ಇದೀಗ ಸಚಿವ ಡಾ.ಸಿ ಅಶ್ವತ್ಥ ನಾರಾಯಣ ಟಾಂಗ್ ನೀಡಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸಂಕೀಘಟ್ಟದಲ್ಲಿ ಈ ವಿಚಾರವಾಗಿ ಮಾತನಾಡಿದ ಸಚಿವ ಡಾ.ಸಿ ಅಶ್ವತ್ಥ ನಾರಾಯಣ, ಸಿದ್ದರಾಮೋತ್ಸವ ಕಾರ್ಯಕ್ರಮದ ಬಳಿಕ ಭಯ ಶುರುವಾಗಿರುವುದು ನಮಗಲ್ಲ, ಬದಲಾಗಿ ಕಾಂಗ್ರೆಸ್ನಲ್ಲಿರುವ ನಾಯಕರಿಗೆ ನಡುಕ ಶುರುವಾಗಿದೆ. ಕಾಂಗ್ರೆಸ್ನಲ್ಲಿರುವ ಕೆಲವು ನಾಯಕರಿಗೆ ಸಿಎಂ ಕುರ್ಚಿ ಯಾರಿಗೆ ಸಿಗುತ್ತೆ ಎಂಬ ನಡುಕ ಶುರುವಾಗಿದೆ. ಕಾಂಗ್ರೆಸ್ ಪಕ್ಷ ಅಂದರೆ ಅದು ಸಿದ್ದರಾಮಯ್ಯ ಎಂಬಂತೆ ಆಗಿದೆ. ಹೀಗಾಗಿ ಬೇರೆ ನಾಯಕರು ಯಾಕೆ ಆ ಪಕ್ಷದಲ್ಲಿ ಇರ್ತಾರೆ..? ಕಾಂಗ್ರೆಸ್ನಲ್ಲಿ ಭವಿಷ್ಯ ಇಲ್ಲ, ಬರೀ ಸಿದ್ದರಾಮಯ್ಯ ಅನ್ನೋದಾದ್ರೆ ಈ ಪಕ್ಷ ನಮಗೇಕೆ ಬೇಕು ಎಂದು ಯೋಚಿಸ್ತಾರೆ ಅಂತಾ ಹೇಳಿದ್ರು.
ಸಿದ್ದರಾಮಯ್ಯಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜೈಕಾರ ಹಾಕಿದ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಜೈ ಎಂದ ಕ್ಷಣವೇ ಡಿಕೆಶಿ ಕೂಡ ಜೈ ಆಗಿದ್ದಾರೆ . ಕಾಂಗ್ರೆಸ್ ಎಲ್ಲೋ ಒಂದು ಸಿದ್ದರಾಮಯ್ಯಗೆ ಸೀಮಿತಗೊಂಡಿದೆ. ಸಿದ್ದರಾಮಯ್ಯಗೂ ವಯಸ್ಸಾಗಿದೆ. ಪಾಪ ಅವರಿಗೂ 75 ವರ್ಷ ವಯಸ್ಸು. ಹೀಗಾಗಿ ಸಿದ್ದರಾಮಯ್ಯ ಕೂಡ ಸೂಕ್ತ ಸಿಎಂ ಅಭ್ಯರ್ಥಿಯಲ್ಲ ಎಂದು ಹೇಳಿದರು.
ಸಿದ್ದರಾಮೋತ್ಸವದ ಬಳಿಕ ವಿಶೇಷವಾಗಿ ಡಿ,ಕೆ ಶಿವಕುಮಾರ್ರಿಗೆ ನಡುಕ ಹುಟ್ಟಿದೆ. ಕಾಂಗ್ರೆಸ್ ಪಕ್ಷದ ಸ್ಥಿತಿ ಏನೂ ಅನ್ನೋದನ್ನ ಸಿದ್ದರಾಮೋತ್ಸವದಲ್ಲಿ ತೋರಿಸಿಕೊಂಡಿದ್ದಾರೆ.ಕಾಂಗ್ರೆಸ್ ಅವರಿಗೆ ಯಾವುದೇ ರೀತಿಯ ನೆಲೆ ಇಲ್ಲ, ಜನರ ಬೆಂಬಲವೂ ಇಲ್ಲ .ಬರೀ ಹಗಲು ಕನಸು ಕಾಣೋದೇ ಕಾಂಗ್ರೆಸ್ ಅವರ ಸ್ಥಿತಿ ಎಂದು ವ್ಯಂಗ್ಯವಾಡಿದರು .
ಇದನ್ನು ಓದಿ : JEE Main Result 2022 Session 2 : ಜೆಇಇ ಸೆಷನ್ 2 ಫಲಿತಾಂಶ ಬಿಡುಗಡೆ : ಕಟ್ಆಫ್ ಘೋಷಣೆ
ಇದನ್ನೂ ಓದಿ : orange alert : ವರುಣನ ಅಬ್ಬರ : ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಇನ್ನೂ 2 ದಿನ ಆರೆಂಜ್ ಅಲರ್ಟ್
Statement of Dr. CN Aswattha Narayan against the Siddaramautsava program