Sugar price level hike : ಚುನಾವಣೆ ಸಮಯದಲ್ಲಿ ಜನತೆಗೆ ಬೆಲೆ ಏರಿಕೆಯ ಬರೆ: ಗಗನಕ್ಕೆ ಏರಿದ ಸಕ್ಕರೆ ಬೆಲೆ

ಬೆಂಗಳೂರು : (Sugar price level hike) ಕಳೆದ ಎರಡು ವಾರಗಳಲ್ಲಿ ಸಕ್ಕರೆ ದರ ಶೇ ಆರರಷ್ಟು ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗಬಹುದು ಎಂಬುದಾಗಿ ಉದ್ಯಮಗಳ ಮೂಲಗಳು ಹೇಳಿವೆ. ಬೆಲೆ ಏರಿಕೆಯ ಪರ್ವಕ್ಕೆ ಸಕ್ಕರೆಯೂ ಸೇರ್ಪಡೆಗೊಂಡಿದ್ದು, ಇದೀಗ ಇದನ್ನೇ ಇನ್ನೊಂದು ಅಸ್ತ್ರವಾಗಿಸಿಕೊಂಡ ಕಾಂಗ್ರೆಸ್‌ ಬಿಜೆಪಿಯನ್ನು ಮತ್ತೆ ಟೀಕಿಸಲು ಪ್ರಾರಂಭಿಸಿದೆ.

ಜನರ ಬದುಕಿಗೆ ಎಲ್ಲಾ ಅತ್ಯಗತ್ಯ ವಸ್ತುಗಳ ಬೆಲೆಯನ್ನೂ ಏರಿಸಿ ಧೂರ್ತತನದ ಪರಮಾವಧಿಗೆ ತಲುಪಿದೆ ಬಿಜೆಪಿ. ಬೆಲೆ ಏರಿಕೆಗೆ ಸಕ್ಕರೆ ತಿನ್ನಬೇಡಿ ಶುಗರ್‌ ಬರುತ್ತದೆ ಎಂಬ ಬಿಟ್ಟಿ ಸಲಹೆ ಬೊಮ್ಮಾಯಿ ಹಾಗೂ ಸೀತರಾಮನ್‌ ಕಡೆಯಿಂದ ಬಂದರೂ ಆಶ್ಚರ್ಯವಿಲ್ಲ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. ಈ ಮೂಲಕವೂ ಕಾಂಗ್ರೆಸ್‌ ಬಿಜೆಪಿ ವಿರುದ್ದ ವಾಗ್ಧಾಳಿ ನಡೆಸುತ್ತಿದ್ದು, ನಂದಿನಿ ಅಮುಲ್‌ ನಂತರದಲ್ಲಿ ಸಕ್ಕರೆ ಬೆಲೆ ಏರಿಕೆಯನ್ನೂ ಕೂಡ ಅಸ್ತ್ರವಾಗಿಸಿಕೊಂಡಿದೆ.

ಈ ವರ್ಷ ಕಬ್ಬು ಉತ್ಪಾದನೆಯಲ್ಲಿ ಇಳಿಕೆಯಾಗಿದ್ದು, ಸಗಟು ಮಾರುಕಟ್ಟೆಯಲ್ಲಿ ಸಕ್ಕರೆಗೆ ಬೇಡಿಕೆ ಹೆಚ್ಚಾಗಿದೆ. ಇತ್ತ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಸಕ್ಕರೆ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ದೇಶದಲ್ಲಿ ಅತಿದೊಡ್ಡ ಕಬ್ಬು ಉತ್ಪಾದಿಸುವ ರಾಜ್ಯವಾದ ಮಹಾರಾಷ್ಟ್ರದಲ್ಲಿ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಈ ಬಾರಿ ಉತ್ಪಾದನೆ ಕುಸಿದಿದೆ. ಇದು ನೇರವಾಗಿ ದೇಶದ ಸಕ್ಕರೆ ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ಹೆಚ್ಚಿದ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಇಲ್ಲದಿರುವುದು ದರ ಹೆಚ್ಚಳಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಕರ್ನಾಟಕದ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಬಿಜೆಪಿಗೆ ರಾಜೀನಾಮೆ ಘೋಷಣೆ !

ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಒಕ್ಕೂಟದ ಪ್ರಕಾರ, ಮಹಾರಾಷ್ಟ್ರದಲ್ಲಿ 190 ಮತ್ತು ಕರ್ನಾಟಕದಲ್ಲಿ 71 ಕಾರ್ಖಾನೆಗಳು ಕಬ್ಬು ಅರೆಯುವುದನ್ನು ನಿಲ್ಲಿಸಿವೆ. ಎರಡು ರಾಜ್ಯಗಳಲ್ಲಿನ ಗಿರಣಿಗಳು ಕ್ರಮವಾಗಿ 31 ಮಾರ್ಚ್ 2023 ರವರೆಗೆ ಸುಮಾರು 104 ಮತ್ತು ಸುಮಾರು 53 ಮೀಟರ್ ಕಬ್ಬನ್ನು ಪುಡಿಮಾಡಿವೆ ಎಂದು ಅದು ಹೇಳಿದೆ. ಕ್ರಷಿಂಗ್ ಕಾರ್ಯಾಚರಣೆಗಳ ಈ ಆರಂಭಿಕ ಮುಚ್ಚುವಿಕೆಯು ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಕಡಿಮೆ ಸಕ್ಕರೆಯನ್ನು ಉತ್ಪಾದಿಸುವ ಸುಳಿವು ನೀಡುತ್ತದೆ. ವರದಿಗಳ ಪ್ರಕಾರ, ಸಕ್ಕರೆ ಉತ್ಪಾದನೆಯು ಮಹಾರಾಷ್ಟ್ರದಲ್ಲಿ 13.8 ಮೀಟರ್‌ನಿಂದ 10.5 ಮೀಟರ್‌ಗೆ ಮತ್ತು ಕರ್ನಾಟಕದಲ್ಲಿ 6.3 ಮೀಟರ್‌ನಿಂದ 5.6 ಮೀಟರ್‌ ಗೆ ಇಳಿಯಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ದೇಶದಲ್ಲಿ ಸಕ್ಕರೆ ಬೆಲೆ ಏರಿಕೆಯಾಗಿದ್ದು, ಇದನ್ನೂ ಕೂಡ ಕರ್ನಾಟಕ ಕಾಂಗ್ರೆಸ್‌ ತನ್ನ ಅಸ್ತ್ರವಾಗಿಸಿಕೊಂಡಿದೆ.

Sugar price level hike: Price hike for people during elections: Sugar price has skyrocketed

Comments are closed.