Janotsava programme : ಜನೋತ್ಸವವೋ..? ಜನಸ್ಪಂದನವೋ..? ಗೊಂದಲ ಮೂಡಿಸಿದ ಬಿಜೆಪಿ ನಾಯಕರ ಹೇಳಿಕೆಗಳು

ಬೆಂಗಳೂರು : Janotsava programme : ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಒಂದು ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿ ಅನೇಕ ದಿನಗಳೇ ಕಳೆದಿದೆ. ಆದರೆ ಅದೇನೋ ಗೊತ್ತಿಲ್ಲ.. ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷಗಳ ಅಧಿಕಾರಾವಧಿಯ ಸಂಭ್ರಮವನ್ನು ಆಚರಿಸಿಕೊಳ್ಳೋಕೆ ಸಾಧ್ಯವಾಗ್ತಿಲ್ಲ. ಪ್ರವೀಣ್​ ನೆಟ್ಟಾರು ಹತ್ಯೆ, ಇದೀಗ ಸಚಿವ ಉಮೇಶ್​ ಕತ್ತಿ ನಿಧನ ಹೀಗೆ ಸಾಲು ಸಾಲು ವಿಘ್ನಗಳಿಂದಾಗಿ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆಯಾಗುತ್ತಲೇ ಇದೆ. ಈ ಎಲ್ಲದರ ನಡುವೆ ಜನೋತ್ಸವ ಕಾರ್ಯಕ್ರಮ ಆಚರಣೆ ಕುರಿತಂತೆ ಬಿಜೆಪಿ ನಾಯಕರ ಹೇಳಿಕೆಗಳು ಗೊಂದಲಕ್ಕೆ ಕಾರಣವಾಗುತ್ತಿದೆ.


ಎಲ್ಲವೂ ಅಂದುಕೊಂಡಂತೆ ಆಗುತ್ತಿದ್ದರೆ ಇಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಸರ್ಕಾರವು ಜನೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಬೇಕಿತ್ತು. ಆದರೆ ನಿನ್ನೆ ಬಸವರಾಜ ಬೊಮ್ಮಾಯಿ ಈ ಸಂಬಂಧ ಬೆಳಗಾವಿಯಲ್ಲಿ ಸ್ಪಷ್ಟನೆ ನೀಡಿದ್ದರು. ಸಚಿವ ಉಮೇಶ್​ ಕತ್ತಿ ನಿಧನರಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಇರಲಿದೆ. ಈ ಸಮಯದಲ್ಲಿ ನೆರೆ ಪರಿಹಾರ ಕಾರ್ಯಕ್ರಮಗಳನ್ನು ಹೊರತುಪಡಿಸಿ ಸರ್ಕಾರದ ವತಿಯಿಂದ ಇನ್ಯಾವುದೇ ಕಾರ್ಯಕ್ರಮಗಳು ನಡೆಯುವುದಿಲ್ಲ. ಅಲ್ಲದೇ ಜನೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್​ 11ರಂದು ಮಾಡುತ್ತೇವೆ ಎಂದು ಹೇಳಿದ್ದರು.


ಆದರೆ ಜನೋತ್ಸವ ಕಾರ್ಯಕ್ರಮ ಸಂಬಂಧ ಆರೋಗ್ಯ ಸಚಿವ ಡಾ.ಕೆ ಸುಧಾಕರ್​ ಟ್ವೀಟ್​ ಮಾಡಿದ್ದು ಜನೋತ್ಸವ ಕಾರ್ಯಕ್ರಮ ಸೆಪ್ಟೆಂಬರ್​ 10ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನೂ ಒಂದು ಟ್ವಿಸ್ಟ್​ ಏನೆಂದರೆ ಜನೋತ್ಸವ ಕಾರ್ಯಕ್ರಮವನ್ನು ಜನಸ್ಪಂದನ ಕಾರ್ಯಕ್ರಮವೆಂದು ಮರುನಾಮಕರಣ ಕೂಡ ಮಾಡಲಾಗಿದೆ.


ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಕೂಡ ಜನೋತ್ಸವ ಕಾರ್ಯಕ್ರಮವನ್ನು ಜನಸ್ಪಂದನ ಕಾರ್ಯಕ್ರಮವೆಂದು ಕರೆದಿದ್ದಾರೆ. ನಳೀನ್​ ಕುಮಾರ್​ ಕಟೀಲ್​ ಜನಸ್ಪಂದನ ಕಾರ್ಯಕ್ರಮ ಭಾನುವಾರ ನಡೆಯಲಿದೆ ಎಂದು ಟ್ವೀಟಾಯಿಸಿದ್ದಾರೆ. ಬಿಜೆಪಿಯಿಂದ ಟ್ವೀಟ್​ ಮಾಡಲಾಗಿದ್ದ ಜನಸ್ಪಂದ ಆಹ್ವಾನ ಪತ್ರಿಕೆಯಲ್ಲಿ ಶನಿವಾರ ಕಾರ್ಯಕ್ರಮ ಎಂದು ನಮೂದಿಸಲಾಗಿತ್ತು. ಬಳಿಕ ಇದನ್ನು ಭಾನುವಾರ ಎಂದು ಬದಲಾಯಿಸಲಾಗಿದೆ.


ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಜುಲೈ 28ರಂದು ಜನೋತ್ಸವ ಕಾರ್ಯಕ್ರಮವನ್ನು ಆಚರಿಸಬೇಕಿತ್ತು. ಆದರೆ ಹಿಂದೂ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಕೊಲೆಯಾದ ಬಳಿಕ ಈ ಕಾರ್ಯಕ್ರಮವನ್ನು ಸೆಪ್ಟೆಂಬರ್​ 8ನೇ ತಾರೀಖು ಅಂದರೆ ಇಂದಿನ ದಿನಾಂಕಕ್ಕೆ ನಿಗದಿ ಮಾಡಲಾಗಿತ್ತು.


ಉಮೇಶ್​ ಕತ್ತಿ ನಿಧನದ ಬಳಿಕ ಮೊದಲು ರಾಜ್ಯ ಸರ್ಕಾರ ಕೇವಲ 1ದಿನ ಶೋಕಾಚರಣೆ ಎಂದು ಘೋಷಿಸಿತ್ತು. ಆದರೆ ವಿಪಕ್ಷಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶೋಕಾಚರಣೆಯನ್ನು ಮೂರು ದಿನಗಳಿಗೆ ವಿಸ್ತರಿಸಲಾಗಿದೆ. ಹೀಗಾಗಿ ಇಂದು ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮ ಕೂಡ ಮುಂದೂಡಿಕೆಯಾಗಿದೆ .

ಇದನ್ನು ಓದಿ : SBI Recruitment 2022 : ಎಸ್‌ಬಿಐ ನೇಮಕಾತಿ 2022 : 5008 ಹುದ್ದೆ, 47,000 ರೂ. ವೇತನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : Onam in Kerala : ಓಣಂ ಹಬ್ಬ ನೋಡಲು ಭೇಟಿ ನೀಡಬಹುದಾದ ಕೇರಳದ 5 ಪ್ರಸಿದ್ಧ ಸ್ಥಳಗಳು

Unresolved confusion about Janotsava programme

Comments are closed.