Bharat jodo Yatra : ರಾಹುಲ್ ಭಾರತ್ ಜೋಡೋ ಯಾತ್ರೆ

ಕನ್ಯಾಕುಮಾರಿ: Bharat jodo Yatra ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಯೋಜಿಸಿರೋ ಭಾರತ್ ಜೋಡೋ ಯಾತ್ರೆ ಎರಡನೇ ದಿನಕ್ಕೆ ಕಾಲಟ್ಟಿದೆ. ಕನ್ಯಾಕುಮಾರಿಯಿಂದ ಆರಂಭವಾಗಿರೋ ಇಂದಿನ ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಅನೇಕ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಸಾಥ್ ನೀಡಿದ್ದಾರೆ.

ನಿನ್ನೆ ತಮಿಳುನಾಡಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡೋದಕ್ಕೂ ಮೊದಲು ಶ್ರೀಪೆರಂಬದರೂರಿನಲ್ಲಿರುವ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ನಮನಸಲ್ಲಿಸಿದ್ರು.

ರಾಜೀವ್ ಗಾಂಧಿ ಸ್ಮಾರಕ ಭೇಟಿ ಬಳಿಕ ಕನ್ಯಾಕುಮಾರಿಗೆ ಆಗಮಿಸಿದ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಗೆ ಚಾಲನೆ ನೀಡಿದ್ರು. ಇಂದು ಈ ಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಕನ್ಯಾಕುಮಾರಿಯಿಂದ ಅಧಿಕೃತವಾಗಿ ಯಾತ್ರೆ ಹೊರಟಿದೆ. ರಾಹುಲ್ ಗಾಂಧಿಗೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ಛತ್ತೀಸ್ ಗಢ ಸಿಎಂ ಭೂಪೇಂದ್ರ ಸಿಂಗ್ ಭಗೇಲಾ ಸೇರಿದಂತೆ ಹಲವು ಸಾಥ್ ನೀಡಿದ್ದಾರೆ.

ಯಾತ್ರೆಯ ವಿಶೇಷತೆ : 2023ರ ಲೋಕಸಭೆ ಚುನಾವಣೆಗೆ ಮೋದಿ ಸರ್ಕಾರವನ್ನ ಎದುರಿಸೋದಕ್ಕಾಗಿಯೇ ರಾಹುಲ್ ಗಾಂಧಿ ಈ ಯಾತ್ರೆ ಕೈಗೊಂಡಿದ್ದಾರೆ ಅನ್ನೋದು ಈಗ ಬಹಿರಂಗ ಸತ್ಯ. ಹೀಗಿದ್ದರೂ ರಾಹುಲ್ ಅವರ  ಈ ಯಾತ್ರೆ ಹಲವು ವಿಶೇಷತೆಗಳಿಂದ ಕೂಡಿದೆ. ಕನ್ಯಾಕುಮಾರಿಯಿಂದ ಆರಂಭವಾಗಿರೋ ಭಾರತ್ ಜೋಡೋಯಾತ್ರೆ ಜಮ್ಮು ಕಾಶ್ಮೀರದವರೆಗೂ ನಡೆಯಲಿದೆ. ಒಟ್ಟು 150ದಿನ, 3500 ಕಿಲೋ ಮೀಟರ್ ಯಾತ್ರೆ ಇದಾಗಿದ್ದು, ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೂ ಒಟ್ಟು 12 ರಾಜ್ಯಗಳನ್ನ ಹಾದು ಹೋಗಲಿದೆ.ಕರ್ನಾಟಕದಲ್ಲೂ ಈಯಾತ್ರೆ ನಡೆಯಲಿದೆ. ಹೀಗಾಗಿ ಈ ಯಾತ್ರೆಯ ಲಾಭ ಮುಂದಿನ ವರ್ಷ ನಡೆಯಲಿರುವ  ವಿಧಾನಸಭೆ ಎಲೆಕ್ಷನ್ ಗೆ ರಾಜ್ಯ ಕಾಂಗ್ರೆಸ್ ಗೆ ಮತ್ತಷ್ಟು ಬಲ ನೀಡಲಿದೆ.

ಕಂಟೇನರ್ ನಲ್ಲೇ ವಾಸ : ಹತ್ತಿರ ಹತ್ತಿರ ಅರ್ಧ ವರ್ಷ ನಡೆಯೋ ಈಯಾತ್ರೆಯುದ್ಧಕ್ಕೂ ರಾಹುಲ್ ಗಾಂಧಿ ಹೋಟೆಲ್ ನಲ್ಲಾಗಲಿ, ಐಶಾರಾಮಿ ಬಂಗಲೆಗಳಲ್ಲಾಗಲಿ, ಲಾಡ್ಜ್ ಗಳಲ್ಲಾಗಲಿ ಉಳಿದುಕೊಳ್ಳುತ್ತಿಲ್ಲ. ಬದಲಿಗೆ ಕಂಟೇನರ್ ಗಳನ್ನೇ ಬದಲಾಯಿಸಿ ಕೋಣೆಗಳನ್ನಾಗಿ ಮಾಡಲಾಗಿದೆ. ಅದ್ರಲ್ಲೇ ರಾಹುಲ್ ಗಾಂಧಿ ವಾಸ್ತವ್ಯ ಹೂಡಲಿದ್ದಾರೆ. ಒಟ್ಟು 60 ಕಂಟೇನರ್ ನಗಳನ್ನ ನಾಯಕರ ವಾಸ್ತವ್ಯವಕ್ಕಾಗಿ ಬಳಸಲಾಗ್ತಿದೆ.

bharat jodo yatra congress leaders rahul gandhi begin the second day of partys yatra

Comments are closed.