Bulls completes 10th win : ಪ್ರೊ ಕಬಡ್ಡಿ ಲೀಗ್’ನಲ್ಲಿ ಕೆಂಪುಗೂಳಿಗಳ ದಶಾಶ್ವಮೇಧ ಕಂಪ್ಲೀಟ್

ಹೈದರಾಬಾದ್ : ಪ್ರೊ ಕಬಡ್ಡಿ ಲೀಗ್ (Pro Kabaddi League) 9ನೇ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ತೋರುತ್ತಿರುವ ಬೆಂಗಳೂರು ಬುಲ್ಸ್ (Bengaluru bulls) ತಂಡ (Bulls completes 10th win) ದಶಾಶ್ವಮೇಧ ಕಂಪ್ಲೀಟ್ ಮಾಡಿದೆ. ಅಂದರೆ ಪ್ರಸಕ್ತ ಟೂರ್ನಿಯಲ್ಲಿ 10 ಗೆಲುವುಗಳನ್ನು ದಾಖಲಿಸಿದ ಮೊದಲ ತಂಡವೆಂಬ ಹಿರಿಮೆಗೆ ಕೆಂಪುಗೂಳಿಗಳು ಖ್ಯಾತಿಯ ಬೆಂಗಳೂರು ಬುಲ್ಸ್ ಪಾತ್ರರಾಗಿದೆ.

ಹೈದರಾಬಾದ್’ನಲ್ಲಿರುವ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 3ನೇ ಪಂದ್ಯದಲ್ಲಿ (Bengaluru bulls) ಬೆಂಗಳೂರು ಬುಲ್ಸ್ ಬಳಗ, 2 ಬಾರಿಯ ಫೈನಲಿಸ್ಟ್ ಗುಜರಾತ್ ಜೈಂಟ್ಸ್ ವಿರುದ್ಧ 45-38ರ ಅಂತರದಲ್ಲಿ ಸುಲಭ ಗೆಲುವು ದಾಖಲಿಸಿತು. ಮತ್ತೆ ಭರ್ಜರಿ ದಾಳಿಗಳಿಂದ ಮಿಂಚಿದ ತಂಡದ ಸ್ಟಾರ್ ರೇಡರ್ ಭರತ್ ಹೂಡ 18 ರೇಡ್ ಪಾಯಿಂಟ್ಸ್ ಗಳಿಸಿ ಬುಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನೊಂದಿಗೆ ಆಡಿರುವ 15 ಪಂದ್ಯಗಳಲ್ಲಿ ಒಟ್ಟು 10 ಗೆಲುವುಗಳನ್ನು ಕಂಡಿರುವ ಬೆಂಗಳೂರು ಬುಲ್ಸ್ 4 ಸೋಲು ಹಾಗೂ ಒಂದು ಟೈ ಫಲಿತಾಂಶದೊಂದಿಗೆ 56 ಅಂಕ ಗಳಿಸಿದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

ಶುಕ್ರವಾರದ ಮೊದಲ ಪಂದ್ಯದಲ್ಲಿ ಇರಾನ್ ಆಟಗಾರ ಫಜಲ್ ಅತ್ರಾಚಲಿ ನಾಯಕತ್ವದ ಪಣೇರಿ ಪಲ್ಟನ್ ಪಡೆ, ಹರ್ಯಾಣ ಸ್ಟೀಲರ್ಸ್ ವಿರುದ್ಧ 41-28ರಲ್ಲಿ ಗೆದ್ದು 9ನೇ ಗೆಲುವು ತನ್ನದಾಗಿಸಿಕೊಂಡಿತು. ಆಡಿರುವ 15 ಪಂದ್ಯಗಳಿಂದ 9 ಗೆಲುವುಗಳ ಸಹಿತ 54 ಅಂಕ ಗಳಿಸಿರುವ ಪಲ್ಟನ್ ಪಡೆ, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟನ್ಸ್ ವಿರುದ್ಧ 36-28ರಲ್ಲಿ ಗೆದ್ದ ಬೆಂಗಾಲ್ ವಾರಿಯರ್ಸ್ 7ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿತು.

ಪ್ರೊ ಕಬಡ್ಡಿ ಲೀಗ್-9: ಶನಿವಾರದ ಪಂದ್ಯಗಳು

  1. ಯು.ಪಿ ಯೋಧಾ Vs ಜೈಪುರ ಪಿಂಕ್ ಪ್ಯಾಂಥರ್ಸ್
  2. ಯು ಮುಂಬಾ Vs ತೆಲುಗು ಟೈಟನ್ಸ್
  3. ದಬಾಂಗ್ ಡೆಲ್ಲಿ ಕೆ.ಸಿ Vs ಪಾಟ್ನಾ ಪೈರೇಟ್ಸ್

ಇದನ್ನೂ ಓದಿ : Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಇದನ್ನೂ ಓದಿ : Pro Kabaddi League: ಇಂದಿನಿಂದ ಮುತ್ತಿನ ನಗರಿಯಲ್ಲಿ ಕಬಡ್ಡಿ ಹಬ್ಬ, ಮೊದಲ ದಿನವೇ ತ್ರಿಪಲ್ ಪಂಗಾ

ಇದನ್ನೂ ಓದಿ : Pro Kabaddi League : ಬುಲ್ಸ್‌ಗೆ ಸ್ಟೀಲರ್ಸ್ ಸವಾಲ್, ಅಗ್ರಸ್ಥಾನದ ಮೇಲೆ ಕೆಂಪುಗೂಳಿಗಳ ಕಣ್ಣು

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Bulls completes 10th win: Red Bulls complete 10th win in Pro Kabaddi League

Comments are closed.