Complaint against city college: ವಿದ್ಯಾರ್ಥಿಗಳಿಗೆ ಕಲುಷಿತ ಆಹಾರ ಪೂರೈಕೆ : ಮಂಗಳೂರಿನ ಸಿಟಿ ಕಾಲೇಜು ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು

ಮಂಗಳೂರು: (Complaint against city college) ಸಿಟಿ ಕಾಲೇಜು ಹಾಸ್ಟೆಲ್ನಲ್ಲಿ ಕಲುಷಿತ ಆಹಾರ ಪೂರೈಕೆಯಿಂದ 100ಕ್ಕೂ ಹೆಚ್ಚು ಮಕ್ಕಳು ಅಸ್ವಸ್ತಗೊಂಡಿದ್ದು, ಕರ್ನಾಟಕ ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ಸಂಘ ಖಂಡಿಸಿದೆ. ಈ ಮಧ್ಯೆ ಆಸ್ಪತ್ರೆಗೆ ಭೇಟಿ ನೀಡಿದ ನಿಯೋಗ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದೆ.

ಮಂಗಳೂರು ಸಿಟಿ ಹಾಸ್ಪಿಟಲ್ ಅಧೀನದಲ್ಲಿರುವ ಖಾಸಗಿ ಕಾಲೇಜು ಸಿಟಿ ಕಾಲೇಜಿನ ಹಾಸ್ಟೆಲ್ ನಲ್ಲಿ ವಿಷಾಹಾರ ಸೇವಿಸಿ 130 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ನಡೆದಿದ್ದು, ಇದನ್ನು ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ತಂಡವು ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುವ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದು, ಇದೇ ವೇಳೆ ನಿಯೋಗವು ಜಿಲ್ಲಾಧಿಕಾರಿಯನ್ನು ಭೇಡಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.

ನಿಯೋಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್‌ ಸಿದ್ದೀಕ್‌, ದಕ್ಷಿಣ ಕನ್ನಡ ಜಿಲ್ಲಾ ಸಮೀತಿ ಮಾಜಿ ಅಧ್ಯಕ್ಷ ವಿಕ್ಯಾತ್‌ ಉಳ್ಳಾಲ್‌, ಜಿಲ್ಲಾ ಉಸ್ತುವಾರಿ ನೂರ್‌ ಮುಹಮ್ಮದ್‌, ಉಪಾಧ್ಯಕ್ಷ ಅಂಕುಶ್‌ ಶರ್ಮಾ, ಪ್ರಧಾನ ಕಾರ್ಯದರ್ಶಿ ರಾಹೀಲ್‌, ಸಂಘಟನಾ ಕಾರ್ಯದರ್ಶಿ ಶಿರಾನ್‌ ಹಾಗೂ ಕಾರ್ಯದರ್ಶಿ ಅಬ್ದುಲ್‌ ಸಮದ್‌ ಉಪಸ್ಥಿತರಿದ್ದರು.

ಕಳೆದ ಎರಡು ದಿನಗಳಿಂದ ಕಲುಷಿತ ಆಹಾರ ಸೇವನೆಯಿಂದ ವಿದ್ಯಾರ್ಥಿಗಳಲ್ಲಿ ಆರೋಗ್ಯದ ಸಮಸ್ಯೆ ಕಾಡಿದ್ದು, ಇದಕ್ಕೂ ಮೊದಲು ಈ ಕಾಲೇಜಿನ ಹಾಸ್ಟೆಲ್‌ ವಿದ್ಯಾರ್ಥಿಗಳಿಂದ ಸರಿಯಾದ ಪರಿಶುದ್ದ ಆಹಾರ ಪೂರೈಸುವುದಿಲ್ಲ ಎಂಬ ದೂರುಗಳು ಕೇಳಿಬಂದಿತ್ತು. ಇದ್ಯಾವುದನ್ನು ಲೆಕ್ಕಿಸದೇ ಕಾಲೇಜು ಆಡಳಿತ ಮಂಡಳಿಯು ಇದರ ಬಗ್ಗೆ ನಿರ್ಲಕ್ಷಿಸಿದ್ದು, ಉನ್ನತ ಶಿಕ್ಷಣಕ್ಕಾಗಿ ಬೇರೆ ರಾಜ್ಯಗಳು ಹಾಗೂ ಜಿಲ್ಲೆಗಳಿಂದ ಬರುವ ವಿದ್ಯಾರ್ಥಿಗಳಿಗೆ ಕ್ಯಾಟರಿಂಗ್‌ನವರು ಸರಿಯಾಗಿ ಆಹಾರ ವಿತರಿಸದೇ ಕಲುಷಿತ ಆಹಾರ ಪೂರೈಸುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ : Constable committed suicide: ಕುಂದಾಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ

ಇದರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ದಕ್ಷಿಣ ಕನ್ನಡ ಜಿಲ್ಲಾ ಸರ್ವ ಕಾಲೇಜು ವಿದ್ಯಾರ್ಥಿ ಸಂಘವು ವಿವಿಧ ಬೇಡಿಕೆಯನ್ನಿಟ್ಟಿದ್ದು, ಅವುಗಳನ್ನು ಶೀಘ್ರವೇ ಪರಿಶೀಲಿಸಿ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.

Complaint against city college: Contaminated food supply to students: Complaint against city college, Mangalore to district collector

Comments are closed.