Sarvakar’s portrait : ದೇಶಪ್ರೇಮಿಗಳ ಸಾಲಿನಲ್ಲಿ ಸಾರ್ವಕರ್​ ಫೋಟೋವಿಟ್ಟಿದ್ದಕ್ಕೆ ಎಸ್​ಡಿಪಿಐ ವಿರೋಧ : ​ ಫೋಟೋ ತೆಗೆಯದಂತೆ ಬಿಜೆಪಿ ಪಟ್ಟು

ಶಿವಮೊಗ್ಗ : Sarvakars portrait : ದೇಶದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಇನ್ನೆರಡು ದಿನಗಳು ಬಾಕಿ ಇರುವಾಗಲೇ ಇಂದಿನಿಂದಲೇ ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಇಂದಿನಿಂದಲೇ ಪ್ರತಿಯೊಂದು ಮನೆಯಲ್ಲಿಯೂ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಈ ನಡುವೆ ಶಿವಮೊಗ್ಗದ ಸಿಟಿ ಸೆಂಟರ್​​ನಲ್ಲಿ ಸ್ವಾತಂತ್ರ್ಯ ಸಂಭ್ರಮಾಚರಣೆಯ ನಿಮಿತ್ತ ಹಾಕಲಾದ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳು ಗೊಂದಲಕ್ಕೆ ಕಾರಣವಾಗಿದ್ದು ಕೆಲ ಕಾಲ ಪ್ರತಿಕೂಲ ವಾತಾವರಣ ನಿರ್ಮಾಣವಾಗಿತ್ತು.

ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳ ನಡುವೆಯೇ ಸಾರ್ವಕರ್​ ಫೋಟೋವನ್ನು ಅಳವಡಿಸಿದ ಮಾಲ್​ನ ಆಡಳಿತ ಮಂಡಳಿಯ ನಡೆ ವಿರುದ್ಧ ಎಸ್​ಡಿಪಿಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಕರ್​ ಒಬ್ಬ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ. ಅಂತವರ ಫೋಟೋವನ್ನು ಸ್ವಾತಂತ್ರ್ಯ ಹೋರಾಟಗಾರರ ಫೋಟೋದ ನಡುವೆ ಏಕೆ ಇಟ್ಟಿದ್ದೀರಿ ಎಂದು ಮಾಲ್​ನ ಸಿಬ್ಬಂದಿಯನ್ನು ಎಸ್​ಡಿಪಿಐ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ.

ಬ್ರಿಟೀಷರಿಗೆ ಕ್ಷಮಾಪಣಾ ಪತ್ರವನ್ನು ಬರೆದುಕೊಟ್ಟ ಸಾರ್ವಕರ್​ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂದು ಎನಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಆಕ್ಷೇಪ ವ್ಯಕ್ತಪಡಿಸಿದ ಎಸ್​ಡಿಪಿಐ ಕಾರ್ಯಕರ್ತರು ಸಾರ್ವಕರ್​ ಭಾವಚಿತ್ರವನ್ನು ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳ ಸಾಲಿನಿಂದ ತೆಗೆಯಬೇಕು ಎಂದು ಆಗ್ರಹಿಸಿದ್ದಾರೆ. ಎಸ್​ಡಿಪಿಐ ಆಕ್ರೋಶಕ್ಕೆ ಬಗ್ಗಿದ ಮಾಲ್​ನ ಸಿಬ್ಬಂದಿ ಸಾರ್ವಕರ್ ಫೊಟೋದ ಜಾಗದಲ್ಲಿ ಅಬ್ದುಲ್​ ಕಲಾಂರ ಫೋಟೋವನ್ನು ಹಾಕುತ್ತೇವೆ ಎಂದು ಹೇಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಎಸ್​ಡಿಪಿಐ ಕಾರ್ಯಕರ್ತರು ಸಾರ್ವಕರ್​ ಫೋಟೋಗೆ ತಗಾದೆ ತೆಗೆದ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಶಿವಮೊಗ್ಗದ ಸಿಟಿ ಸೆಂಟರ್​ ಮಾಲ್​ ಎದುರು ಪ್ರತಿಭಟನೆಗೆ ಕುಳಿತಿದ್ದಾರೆ. ಶಿವಮೊಗ್ಗದ ಮಹಾನಗರ ಪಾಲಿಕೆಯಿಂದಲೇ ಸಿಟಿ ಸೆಂಟರ್​ ಮಾಲ್​ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಆದರೆ ಎಸ್​ಡಿಪಿಐ ಕಾರ್ಯಕರ್ತರು ಸಾರ್ವಕರ್​ ಫೋಟೋವನ್ನು ತೆಗೆಯಬೇಕೆಂದು ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದಾರೆ. ಎಸ್​ಡಿಪಿಐ ಕಾರ್ಯಕರ್ತರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ಅವರನ್ನು ಗಡಿಪಾರು ಮಾಡುವಂತೆ ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಇದನ್ನು ಓದಿ : KS Eshwarappa : ತ್ರಿವರ್ಣ ಧ್ವಜದಲ್ಲಿ ಕೆಂಪು ಬಣ್ಣವಿದೆ ಎಂಬ ಕಾಂಗ್ರೆಸ್ಸಿಗರಿಂದ ನಾವು ರಾಷ್ಟ್ರಭಕ್ತಿ ಕಲಿಯಬೇಕೆ : ಈಶ್ವರಪ್ಪ ವ್ಯಂಗ್ಯ

ಇದನ್ನೂ ಓದಿ : there is no change of CM : ಮುಂದಿನ ವಿಧಾನಸಭಾ ಚುನಾವಣೆಯವರೆಗೂ ಬೊಮ್ಮಾಯಿಯೇ ನಮ್ಮ ಸಿಎಂ : ಯಡಿಯೂರಪ್ಪ ಸ್ಪಷ್ಟನೆ

BJP-SDPI clash in Shivamogga mall over Sarvakars portrait

Comments are closed.