ಅಧಿಕ ಮಾಸದ ಮೊದಲ ಗುರು ಪ್ರದೋಷ ವ್ರತ 2026 : ಪೂಜಾ ಸಮಯ, ವ್ರತಾಚರಣೆ ತಿಳಿಯಿರಿ
ಪ್ರತಿ ಮಾಸದಲ್ಲಿ ಬರುವ ಎರಡು ಪಕ್ಷಗಳಾದ ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದ ಹದಿಮೂರನೇ ದಿನದಂದು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಈ ವರ್ಷ ಜ್ಯೇಷ್ಠ ಮಾಸವು ಅಧಿಕ ಮಾಸವಾಗಿದೆ. ಆದ್ದರಿಂದ ಭಕ್ತರು ಎರಡು ಪ್ರದೋಷ ಉಪವಾಸದ ಬದಲಿಗೆ ನಾಲ್ಕು ಪ್ರದೋಷ ಉಪವಾಸವನ್ನು ಆಚರಿಸಿ ಪುಣ್ಯ ಗಳಿಸುವ ಭಾಗ್ಯವನ್ನು ಪಡೆದಿರುತ್ತಾರೆ.
ಶಿವ ಮತ್ತು ಪಾರ್ವತಿ ದೇವಿಗೆ ಅರ್ಪಿತವಾದ ಪ್ರದೋಷ ವ್ರತಕ್ಕೆ ಹಿಂದೂ ಧರ್ಮದಲ್ಲಿ ಬಹಳ ಮಹತ್ವವಿದೆ. ಈ ಪ್ಸದೋಷದ ಹೆಸರನ್ನು ತ್ರಯೋದಶಿ ತಿಥಿ ಬರುವ ದಿನಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ. ಪ್ರತಿ ಮಾಸದಲ್ಲಿ ಬರುವ ಎರಡು ಪಕ್ಷಗಳಾದ ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದ ಹದಿಮೂರನೇ ದಿನದಂದು ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ. ಈ ವರ್ಷ ಜ್ಯೇಷ್ಠ ಮಾಸವು ಅಧಿಕ ಮಾಸವಾಗಿದೆ. ಆದ್ದರಿಂದ ಭಕ್ತರು ಎರಡು ಪ್ರದೇಷ ಉಪವಾಸದ ಬದಲಿಗೆ ನಾಲ್ಕು ಪ್ರದೋಷ ಉಪವಾಸವನ್ನು ಆಚರಿಸಿ ಪುಣ್ಯ ಗಳಿಸುವ ಭಾಗ್ಯವನ್ನು ಪಡೆದಿರುತ್ತಾರೆ. ಈ ವರ್ಷ ಅಧಿಕ ಜ್ಯೇಷ್ಠ ಮಾಸವು ಮೇ17 ರಿಂದ ಪ್ರಾರಂಭವಾಗಿದ್ದು ಜೂನ್ 15 ರವರೆಗೆ ಇರಲಿದೆ. ಈ ಅಧಿಕ ಮಾಸದ ಮೊದಲ ಪ್ರದೋಷ ಉಪವಾಸವನ್ನು ಗುರುವಾರ ಮೇ 28, ರಂದು ಆಚರಿಸಲಾಗುತ್ತದೆ. ಈ ಉಪವಾಸವು ಗುರುವಾರ ಬಂದಿರುವುದರಿಂದ ಇದನ್ನು ಗುರು ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಪುರುಷೋತ್ತಮ ಮಾಸದಲ್ಲಿನ ಪ್ರದೋಷ ಉಪವಾಸಗಳು ಇತರ ತಿಂಗಳುಗಳಿಗಿಂತ ಹೆಚ್ಚು ಫಲಪ್ರದವೆಂದು ಪರಿಗಣಿಸಲಾಗಿದೆ.
ಅಧಿಕ ಮಾಸ ಪ್ರದೋಷ ಉಪವಾಸ ದಿನಾಂಕ ಮತ್ತು ವ್ರತ ಸಮಯ
ತ್ರಯೋದಶಿ ತಿಥಿ ಆರಂಭ: ಮೇ 28, 2026, ಬೆಳಗ್ಗೆ 07:56ಕ್ಕೆ
ತ್ರಯೋದಶಿ ತಿಥಿಯ ಅಂತ್ಯ: ಮೇ 29, 2026 ಬೆಳಿಗ್ಗೆ 09:50 ಕ್ಕೆ
ಉದಯತಿಥಿ ಮತ್ತು ಉಪವಾಸ ದಿನಾಂಕ: 28 ಮೇ 2026 (ಗುರುವಾರ)
ಪ್ರದೋಷ ಕಾಲ ಪೂಜೆ ಮುಹೂರ್ತ: ಸಂಜೆ ಗುರುವಾರ 07:12 ರಿಂದ 09:15 (ಕಾಲ: 2 ಗಂಟೆ 2 ನಿಮಿಷಗಳು)
ಇದನ್ನೂ ಓದಿ: ಸ್ವರಾಶಿ ಮಿಥುನಕ್ಕೆ ಬುಧ ಗ್ರಹದ ಸಂಚಾರ : ಭದ್ರ ರಾಜಯೋಗ ಸೃಷ್ಟಿಯಿಂದ ಈ 5 ರಾಶಿಯವರ ಬಾಳಲ್ಲಿ ಬೆಳಕು
ಜ್ಯೇಷ್ಠ ಅಧಿಕ ಮಾಸ ಪ್ರದೋಷ ವ್ರತ ಪರಿಹಾರ
ಅಧಿಕ ಮಾಸದ ಈ ಮೊದಲ ಪ್ರದೋಷ ಉಪವಾಸದಂದು ಶಿವನಿಗೆ ವಿಶೇಷ ಪೂಜೆ ಮಾಡುವುದರಿಂದ ಅನೇಕ ರೀತಿಯ ಗ್ರಹ ದೋಷಗಳಿಂದ ಪರಿಹಾರ ಸಿಗುತ್ತದೆ.
- ಚಂದ್ರ ದೋಷಕ್ಕೆ ಪರಿಹಾರ
ಪ್ರದೋಷದ ಸಮಯದಲ್ಲಿ ಸಂಜೆ, ಹಸಿ ಹಾಲಿನಲ್ಲಿ ಗಂಗಾ ಜಲವನ್ನು ಬೆರೆಸಿ ಶಿವಲಿಂಗಕ್ಕೆ ಅಭಿಷೇಕ ಮಾಡಿ.
- ಶನಿ ದೋಷದಿಂದ ಮುಕ್ತಿಗೆ
ಶಿವನನ್ನು ಪೂಜಿಸುವಾಗ, ಶಿವಲಿಂಗಕ್ಕೆ ಕಪ್ಪು ಎಳ್ಳನ್ನು ಅರ್ಪಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ.
- ಸಂತೋಷ ಮತ್ತು ಸಮೃದ್ಧಿಗಾಗಿ
ಗುರು ಪ್ರದೋಷವಾದ್ದರಿಂದ, ಈ ದಿನದಂದು ಶಿವ ಪಂಚಾಕ್ಷರಿ ಮಂತ್ರ (ಓಂ ನಮಃ ಶಿವಾಯ) ಅಥವಾ ರುದ್ರ ಮಂತ್ರವನ್ನು ಪಠಿಸುವುದರಿಂದ ಜೀವನದ ತೊಂದರೆಗಳು ದೂರವಾಗುತ್ತವೆ ಮತ್ತು ಮಾನಸಿಕ ಶಾಂತಿ ದೊರೆಯುತ್ತದೆ.
ಜ್ಯೇಷ್ಠ ಅಧಿಕ ಮಾಸ ಪ್ರದೋಷ ವ್ರತದ ಮಹತ್ವ
- ಗುರು ಪ್ರದೋಷ ವ್ರತವನ್ನು ಆಚರಿಸುವುದರಿಂದ ಶಿವ ಮತ್ತು ವಿಷ್ಣು ಇಬ್ಬರ ಆಶೀರ್ವಾದವೂ ದೊರಕುತ್ತದೆ.
- ಉಪವಾಸ ಆಚರಿಸುವುದರಿಂದ ಜ್ಞಾನ, ಶಿಕ್ಷಣ, ಸಂಪತ್ತು, ಧರ್ಮ ಮತ್ತು ಸಂತೋಷ ಮತ್ತು ಸಮೃದ್ಧಿ ಸಿಗುತ್ತದೆ.
- ಜೀವನದ ತೊಂದರೆಗಳು ದೂರವಾಗುತ್ತವೆ ಮತ್ತು ಆಧ್ಯಾತ್ಮಿಕ ಪ್ರಗತಿ ನಡೆಯುತ್ತದೆ.



