Akshaya Tritiya 2023 : ಅಕ್ಷಯ ತೃತಿಯ 2023; ಮಹತ್ವ ಮತ್ತು ಚಿನ್ನ ಖರೀದಿಗೆ ಶುಭ ಮುಹೂರ್ತ

ಅಕ್ಷಯ ತೃತಿಯದಂದು ಚಿನ್ನವನ್ನು ಖರೀದಿಸಿದರೆ ಅದು ಶುಭವನ್ನು ತರುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ ಈ ದಿನವನ್ನು(Akshaya Tritiya 2023) ಶುಭದಿನ ಎಂದೂ ಹೇಳುತ್ತಾರೆ. ಈ ದಿನ ಗೃಹಪ್ರವೇಶ, ಮದುವೆ, ನಿಶ್ಚಿತಾರ್ಥ ಮುಂತಾದ ಒಳ್ಳೆಯ ಕಾರ್ಯಗಳನ್ನು ಮಾಡುವವರಿದ್ದಾರೆ. ಈ ದಿನ ಲಕ್ಷೀ ದೇವಿಯ ಪೂಜೆಯ ಜೊತೆಗೆ ಚಿನ್ನ, ಬೆಳ್ಳಿಯಂಥ ಬೆಲೆಬಾಳುವ ವಸ್ತುಗಳ ಖರೀದಿ ಮಾಡುವುದರಿಂದ ಸಂಪತ್ತು ವೃದ್ಧಿಸುತ್ತದೆ ಮತ್ತು ಆರ್ಥಿಕ ಸಂಕಷ್ಟಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಈ ವರ್ಷ ಏಪ್ರಿಲ್‌ 22, ಶನಿವಾರವು ಅಕ್ಷಯ ತೃತಿಯವಾಗಿದೆ. ಅಕ್ಷಯ ತೃತಿಯದಂದು ಯಾವ ವಸ್ತುಗಳನ್ನು ಖರೀದಿಸಬಹುದು ಮತ್ತು ಖರೀದಿಗೆ ಶುಭ ಮುಹೂರ್ತ ಯಾವುದು ಇಲ್ಲಿದೆ ಓದಿ.

ಖರೀದಿಗೆ ಶುಭ ಮುಹೂರ್ತ:
ಏಪ್ರಿಲ್‌ 22, ಶನಿವಾರ 2023 ರ ಬೆಳಿಗ್ಗೆ 07:49 ರಿಂದ 23 ಏಪ್ರಿಲ್‌ ರವಿವಾರ 2023 ರ ಬೆಳಿಗ್ಗೆ 07:47 ರ ವರೆಗೆ ಖರೀದಿಗೆ ಶುಭ ಮುಹೂರ್ತವಾಗಿದೆ.

ಅಕ್ಷಯ ತೃತಿಯದಂದು ಚಿನ್ನವನ್ನು ಖರೀದಿಸಲು ಕಾರಣವೇನು?
ಪುರಾಣಗಳ ಪ್ರಕಾರ, ವೈಶಾಖ ಶುಕ್ಲ ತೃತೀಯ ತಿಥಿಯಂದು ಬ್ರಹ್ಮ ದೇವನ ಮಗ ಅಕ್ಷಯ್ ಕುಮಾರ್ ಜನಿಸಿದನು. ಅದಕ್ಕಾಗಿಯೇ ಈ ತಿಥಿಯನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಅಕ್ಷಯ ತೃತೀಯ ತಿಥಿಯಂದು ನೀವು ಯಾವುದೇ ಶುಭ ಕಾರ್ಯವನ್ನು ಮಾಡಿದರೂ ಅದರ ಸಂಪೂರ್ಣ ಫಲವು ಶಾಶ್ವತವಾಗಿರುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಚಿನ್ನವು ಲಕ್ಷ್ಮಿ ದೇವಿಯ ಭೌತಿಕ ರೂಪವಾಗಿರುವುದರಿಂದ, ಅಕ್ಷಯ ತೃತೀಯ ದಿನವು ಶುಭವಾಗಿದೆ. ಆದ್ದರಿಂದಲೇ ತಾಯಿ ಲಕ್ಷ್ಮೀಯು ದ್ಯೋತಕವಾಗಿ ಈ ದಿನದಂದು ಚಿನ್ನವನ್ನು ಖರೀದಿಸಿದರೆ ಅವಳು ಬಹಳ ಸಂತೋಷಪಡುತ್ತಾಳೆ ಮತ್ತು ಸಾಧಕರಿಗೆ ಒಳ್ಳೆಯ ದಾರಿ ತೋರುತ್ತಾಳೆ ಮತ್ತು ಈ ದಿನದಂದು ನಡೆಸುವ ಯಾವುದೇ ಕಾರ್ಯಗಳಿಗೆ ಉತ್ತಮ ಫಲವನ್ನು ನೀಡುತ್ತಾಳೆ ಎಂದು ನಂಬಲಾಗಿದೆ.

ಯಾವ ವಸ್ತುಗಳ ಖರೀದಿ ಶುಭವನ್ನು ತರುತ್ತದೆ?
ಅಕ್ಷಯ ತೃತಿಯದಂದು ಚಿನ್ನ ಅಥವಾ ಬೆಳ್ಳಿಯಿಂದ ಮಾಡಿದ ಆಭರಣಗಳನ್ನು ಖರೀದಿಸಬಹುದು. ಜೊತೆಗೆ ಭೂಮಿ, ಮನೆ, ವಾಹನಗಳು, ಪಾತ್ರೆ, ಮಶಿನರಿ ವಸ್ತುಗಳು, ಫರ್ನೀಚರ್‌, ಬಟ್ಟೆ ಮುಂತಾದವುಗಳನ್ನು ಸಹ ಖರೀದಿಸಬಹುದು. ಈ ದಿನ ಹೊಸ ಕಾರ್ಯಗಳನ್ನು ಅಂದರೆ ಕಛೇರಿಯ ಉದ್ಘಾಟನೆ, ಅಂಗಡಿ ಪ್ರಾರಂಭ, ಮುಂತಾದವುಗಳನ್ನು ಸಹ ಆರಂಭಿಸಿಬಹುದು. ಬೆಲೆ ಬಾಳುವ ವಸ್ತುಗಳ ಖರೀದಿಯು ಬಹಳ ಸಮಯದವರೆಗೆ ಶುಭ ಫಲವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : Horoscope Today April 22 : ಹೇಗಿದೆ ಇಂದಿನ ಜಾತಕಫಲ

ಇದನ್ನೂ ಓದಿ : Milk Cream Benefits : ಮುಖದ ಕಾಂತಿ ಹೆಚ್ಚಿಸಲು ಬಳಸಿ ಹಾಲಿನ ಕೆನೆ

(Akshaya Tritiya 2023. Why gold is bought on this day. Know the Shubh muhurta and other Details)

Comments are closed.