ಶಿವಲಿಂಗವನ್ನು ಪೂಜಿಸಿದ್ರೆ 3 ತಿಂಗಳಲ್ಲಿ ಕಂಕಣ ಭಾಗ್ಯ ; ಉಮಾಮಹೇಶ್ವರನಿಂದ ಕಲಹಗಳು ಇತ್ಯರ್ಥ

Umamaheshwara Temple Majalmaaru : ಶಿವ, ಜನರ ಕಷ್ಟಕ್ಕೆ ಸುಲಭವಾಗಿ ಒಲೀಯೋ ದೇವರು ಮಾತಿದೆ. ಅದಕ್ಕಾಗಿಯೇ ಉತ್ತರಭಾರತದಿಂದ ಹಿಡಿದು ದಕ್ಷಿಣದ ವರೆಗೆ ವಿವಿಧ ರೂಪದಲ್ಲಿ ಅವನನ್ನು ಆರಾಧಿಸುತ್ತಾರೆ. ಅದರಲ್ಲೂ ಶಿವನನ್ನು ಪಾರ್ವತಿ ಜೊತೆಯಾಗಿ ಆರಾಧಿಸಿದ್ರೆ, ಸಂಸಾರದ ಇಷ್ಟಾರ್ಥಗಳು ಈಡೇರುತ್ತೆ ಅನ್ನೋದು ನಂಬಿಕೆ ಇದೆ . ಇಂತಹದೇ ಪಾರ್ವತಿ ಶಂಕರ ಶಕ್ತಿ ಸಂಮಿಳಿತವಾದ ದೇವಾಲಯ ಇಲ್ಲಿದೆ . ಇಲ್ಲಿನ ಶಿವನನ್ನು ಪೂಜಿಸಿದ್ರೆ ೩ ತಿಂಗಳಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಯಾಗುತ್ತಂತೆ.

ಹೌದು, ಈ ದೇವಾಲಯ ಶಿವ – ಶಕ್ತಿ ಜೊತೆಯಾಗಿ ಪೂಜೆಗೊಳ್ಳುವ ಪುಣ್ಯ ಕ್ಷೇತ್ರ. ಇಲ್ಲಿ ಶಿವ ನ ಅರ್ಧಾಂಗಿಯಾಗಿ ಪಾರ್ವತಿ ಶಿವಲಿಂಗದಲ್ಲಿ ನೆಲೆ ನಿಂತಿದ್ದಾಳೆ. ಶಿವಲಿಂಗದ ಸರಿಯಾದ ಅರ್ಧ ಭಾಗವನ್ನು ಶಿವನಾಗಿ ಇನ್ನೊಂದರ್ಧ ಭಾಗವನ್ನು ಪಾರ್ವತಿ/ ಉಮೆಯಾಗಿ ಇಲ್ಲಿ ಪೂಜಿಸಲಾಗುತ್ತೆ . ಹೀಗಾಗಿ ಇಲ್ಲಿನ ದೇವರನ್ನು ಉಮಾ ಮಹೇಶ್ವರ ಎಂದು ಕರೆಯಲಾಗುತ್ತೆ .ಹೀಗಾಗಿ ಇಲ್ಲಿ ಸಂಸಾರದ ಕುರಿತಂತೆ ಯಾವುದೇ ಸಮಸ್ಯೆ ಇಲ್ಲಿ ನಿವಾರಣೆ ಆಗುತ್ತೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ.

ಇನ್ನು ಇಲ್ಲಿ ಹರಕೆಯನ್ನು ಕಟ್ಟಿಕೊಂಡ್ರೆ ೩ ತಿಂಗಳ ಒಳಗಾಗಿ ಕಂಕಣ ಭಾಗ್ಯ ಕೂಡಿಬರುತ್ತಂತೆ . ಇದಕ್ಕಾಗಿ ಉಮಾ ಮಹೇಶ್ವರ ಪೂಜೆ ಅನ್ನು ಇಲ್ಲಿ ನಡೆಸಿಕೊಂಡು ಬರಲಾಗಿದೆ. ಇನ್ನು ಸಂತಾನ, ದಾಯಾದಿ ಕಲಹ ಮುಂತಾದ ಸಮಸ್ಯೆಗೂ ಇಲ್ಲಿ ಬಂದ್ರೆ ಪರಿಹಾರ ಸಿಗುತ್ತೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆ . ಇಲ್ಲಿ ಕಲಹದಿಂದ ಯಾರಾದ್ರೂ ಮಾತುಬಿಟ್ರೆ ಅದೂ ಕೂಡಾ ಇಲ್ಲಿ ಇಥ್ಯರ್ಥ ಆಗುತ್ತೆ ಅನ್ನೂ ಇಲ್ಲಿನ ಜನರ ನಂಬಿಕೆ.

ಈ ದೇವಾಲಯಕ್ಕೆ 800 ವರ್ಷಗಳಷ್ಟು ಇತಿಹಾಸವಿದೆ. ಖರಾಸುರ ಎಂಬ ರಾಕ್ಷಸನಿಂದ ಇದು ನಿರ್ಮಾಣಾಯಿತು ಎಂದು ಹೇಳಲಾಗುತ್ತೆ. ಕಳೆದ ವರ್ಷವಷ್ಟೆ ಇಲ್ಲಿ ಬ್ರಹ್ಮ ಕಳಶ ವಾಗಿದೆ. ಇಲ್ಲಿ ನಾಗ ಆರಾಧನೆಗೂ ಮಹತ್ವವಿದ್ದು ನಾಗ ವಾಸಸ್ಥಾನ ಇತ್ತು ಅಂತ ಹೇಳಲಾಗುತ್ತೆ. ಪುತ್ತೂರು ಮಹಾಲಿಂಗೇಶ್ವರನಿಗೂ ಇಲ್ಲಿಗೂ ಒಂದು ಕೊಂಡಿ ಇದೆ. ಮಹಾಲಿಂಗೇಶ್ವರ ದೇವರು ಅವಭೃತ ಸ್ನಾನಕ್ಕೆ ತೆರಳುವುಗಾಗ ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿಂದ ಮುಂದೆ ದೇವರನ್ನು ಹೊರುವ ತಂತ್ರಿಗಳು ಬದಲಾಗುತ್ತಾರೆ . ಹೀಗಾಗಿ ದೇವರು ಸ್ವಲ್ಪಕಾಲ ಇಲ್ಲಿನ ಕಟ್ಟೆಯಲ್ಲಿ ಕುಳಿತುಕೊಳ್ಳುತ್ತಾರೆ. ಇದನ್ನೂ ಓದಿ : Kolhapur Ganagatte Mayamma : ಕೊಲ್ಲಾಪುರದಿಂದ ಬಂದು ನೆಲೆಸಿದ್ದಾಳೆ ಮಾಯಮ್ಮ: ದುಡ್ಡಿನ ಹರಕೆಯೇ ಈಕೆಗೆ ಪ್ರಿಯ

ಇನ್ನು ಇಲ್ಲಿ ದೇವ ನಂದಿಯೊಂದನ್ನು ಕೂಡಾ ಕಾಣಬಹುದು. ಅಜಾನುಬಾಹು ರೂಪವಿರುವ ನಂದಿ ಇಲ್ಲಿ ಬಂದವರ ಮನವನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ.ಇದರ ಜೊತೆಯಲ್ಲಿ ರಕ್ತೇಶ್ವರಿ ಗುಡಿಯೂ ಕೂಡಾ ಇಲ್ಲಿದ್ದು ಅದರ ಆಚರಣೆ ಕೂಡಾ ಇಲ್ಲಿ ಮಾಡಲಾಗುತ್ತೆ. ಇಂತಹ ಸುಂದರವಾದ ದೇವಾಲಯ ವಿರೋದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ 8 ಕಿಲೋಮೀಟರ್ ದೂರದಲ್ಲಿನ ಮುಕ್ವೆಯಲ ಮಜಲು ಮಾರು ಎಂಬಲ್ಲಿ. ಶಿವಲಿಂಗ ಅರ್ಥನಾರೀಶ್ವರನ ರೂಪದಲ್ಲಿದ್ದದರಿಂದ ಉಮಾಮಹೇಶ್ವರ ಎಂಬ ಎಂಬ ಹೆಸರಿನಿಂದ ಪೂಜಿಸಲಾಗುತ್ತೆ. ಇಲ್ಲಿಗೆ ತೆರಳಬೇಕಾದ್ರೆ ಪುತ್ತೂರಿನಿಂದ ಕಾಣಿಯೂರಿಗೆ ತೆರಳುವ ಬಸ್ ಸಿಗುತ್ತೆ. ಇನ್ನು ಪುತ್ತೂರು ಬಸ್ ನಿಲ್ಥಾಣದಿಂದ ಸರ್ವಿಸ್ ಆಟೋಗಳು ಸಿಗುತ್ತೆ. ಇದನ್ನೂ ಓದಿ : Akshaya Tritiya 2023 : ಅಕ್ಷಯ ತೃತಿಯ 2023; ಮಹತ್ವ ಮತ್ತು ಚಿನ್ನ ಖರೀದಿಗೆ ಶುಭ ಮುಹೂರ್ತ

Comments are closed.