ಹತ್ತೂರ ಒಡೆಯನಿಗೆ ಅವಭೃತ ಸ್ನಾನ – ಭಕ್ತರಿಂದ ದೇವರಿಗೆ ಭಕ್ತಿಯ ಸೇವೆ

ಪುತ್ತೂರು : (avabrutha snana) : ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರ ಜಾತ್ರೆ ನಿನ್ನೆ ಅಂತ್ಯವಾಗಿದೆ. . ಜಾತ್ರೆ ಯ ಕೊನೆದಿನವಾದ ನಿನ್ನೆ ಲಕ್ಷಾಂತರ ಮಂದಿ ದೇವರ ದರ್ಶನ ಪಡೆದ್ರು . ರಾತ್ರಿ ನಡೆದ ರಥೋತ್ಸವದಲ್ಲಿ ಸಾಪ್ರದಾಯಿಕವಾಗಿ ಪಂಚೆ ಧರಿಸಿದವರಿಗೆ ಮಾತ್ರ ಅವಕಾಶ ನೀಡಿದ್ದು ವಿಶೇಷವಾಗಿತ್ತು . ಆಗ ಅದಕ್ಕಿಂತ ಮುನ್ನ ನಡೆಯುವ ಸಿಡಿ ಮದ್ದು ಪ್ರದರ್ಶನ ನೋಡುಗರ ಕಣ್ಮನ ಸೆಳೆದಿತ್ತು.

ಜಾತ್ರೆಯ ಮಾರನೇ ದಿನವಾದ ಇಂದು ದಿನ ನಡೆಯುವ ಅವಭ್ರತ ಸ್ನಾನ ಇಲ್ಲಿನ ಮತ್ತೊಂದು ವಿಶೇಷ . ಮಧ್ಯಾಹ್ನ 3 ಗಂಟೆಗೆ ಆರಂಭವಾದ ದೇವರ ಮೆರವಣಿಗೆ 54 ಕಟ್ಟೆಗಳಲ್ಲಿ ಪೂಜೆ ಗೊಳಗೊಂಡು 14 ಕಿಮೀಟರ್ ದೂರದಲ್ಲಿರುವ ಕುಮಾರ ಧಾರ ನದಿಯಲ್ಲಿ ಅಂತ್ಯವಾಗುತ್ತೆ. ಇಲ್ಲಿ ಪ್ರತಿಯೊಂದು ಕಡೆಯೂ ಸ್ವತಹ ತಂತ್ರಿಗಳು ದೇವರನ್ನು ಹೊತ್ತು ತೆರಳುತ್ತಾರೆ ಅನ್ನೋದು ವಿಶೇಷ .. ನಂತರ ವೀರ ಮಂಗಲದಲ್ಲಿ ದೇವರ ಅವಭೃತ ಸ್ನಾನ (avabrutha snana) ಕೈಗೊಂಡು ತಂತ್ರಿಗಳು ಕಾಲ್ನಡಿಗೆಯ ಮೂಲಕವೇ ಮತ್ತೆ ದೇವಾಲಯಕ್ಕೆ ದೇವರ ಉತ್ಸವ ಮೂರ್ತಿಯನ್ನು ಕರೆತರುತ್ತಾರೆ . ಈ ಮೆರವಣಿಗೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಭಕ್ತರು ಸೇರೋದು ವಿಶೇಷ.

ಇನ್ನು ಅವಭೃತ ಸ್ನಾನಕ್ಕೆ ಮತ್ತೊಂದು ಹಿನ್ನೆಲೆ ಇದೆ. ಅದೇನಂದ್ರೆ ಮೊದಲು ಅವಭೃತ ಸ್ನಾನಕ್ಕಾಗಿ ದೇವರನ್ನು ಉಪ್ಪಿನಂಗಡಿಯ ಕುಮಾರಧಾರ ನದಿಯ ಬಳಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತಂತೆ . ಆದರೆ ಒಂದು ಬಾರಿ ವೀರ ಮಂಗಲದ ಬಳಿಯ ಗರ್ಭಿಣಿ ಸ್ತ್ರೀಯೊಬ್ಬರಿಗೆ ದೇವರಿಗೆ ನೋಡುವ ಆಸೆಯಾಯಿತಂತೆ. ಆಗ ಆಕೆ ದೇವರು ವೀರ ಮಂಗಲದಲ್ಲಿ ಸ್ನಾನ ಮಾಡಿದ್ದರೆ ತಾನೂ ದರ್ಶನ ಮಾಡಬಹುದು ಎಂದು ದೇವರಿಗೆ ಬೇಡಿಕೊಂಡರಂತೆ. ಆಕೆಯ ಬೇಡಿಕೆಯನ್ನು ಆಲಿಸಿದ ಮಹಾಲಿಂಗೇಶ್ವರ ಅಂದು ವೀರಮಂಗದಲ್ಲಿ ಅವಭೃತ ಸ್ನಾನ ಮಾಡಿದ ಎಂಬ ನಂಬಿಕೆ ಇದೆ. ಇದನ್ನೂ ಓದಿ : ಹಸಿವೇ ತಡೆಯೋದಿಲ್ಲ ಶೀಕೃಷ್ಣ: ಬಾರಿ, ಬಾರಿ ನಡೆಯುತ್ತೆ ನೈವೇದ್ಯ ಸೇವೆ, ಕೈ ಮುಗಿದ್ರೆ ಬರೋದಿಲ್ಲ ಊಟಕ್ಕೆ ಕುತ್ತು

ಇಂದಿಗೂ ಅವರ ಕುಟುಂಬ ವೀರ ಮಂಗಲದಲ್ಲಿ ಮೊಸರು ಅವಲಕ್ಕಿ ಸೇವೆಯನ್ನು ಅರ್ಪಿಸುತ್ತಾರೆ. ಇನ್ನು ಸ್ನಾನಕ್ಕೆ ತೆರಳುವ ಮುನ್ನ ದೇವಾಲಯದ ದೈವಗಳಿಗೆ ದೇವಸ್ಥಾನವನ್ನು ಒಪ್ಪಿಸಲಾಯಿತು. ಇನ್ನು ಇದೇ ವೇಳೆ ದೈವಗಳ ಹಾಗೂ ದೇವರ ನಡುವೆ ಮಾತುಕತೆ ನಡೆಯುವುದು ವಿಶೇಷ. ಇದನ್ನೂ ಓದಿ : ಇಡಗುಂಜಿ : ಬಾಲರೂಪದಲ್ಲಿ ನೆಲೆ ನಿಂತಿದ್ದಾನೆ ಗಣೇಶ : ಕಡ್ಲೇಕಾಳಿನ ಪ್ರಸಾದವೇ ಈತನಿಗೆ ಪ್ರಿಯ

Comments are closed.