Chetan Kantara : ಭೂತಕೋಲ ಹಿಂದೂ ಸಂಸ್ಕೃತಿಯಲ್ಲ ಎಂದ ನಟ ಚೇತನ್ ವಿರುದ್ಧ ದೂರು ದಾಖಲು

Chetan Kantara : ಕಾಂತಾರ ಸಿನಿಮಾದಲ್ಲಿರುವಂತೆ ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರಿದ ಆಚರಣೆ ಅಲ್ಲಾ. ಇದು ಮೂಲ ನಿವಾಸಿಗಳಾದ ಆದಿವಾಸಿಗಳ ಹಬ್ಬ ಎಂದು ಹೇಳಿಕೆ ನೀಡುವ ಮೂಲಕ ಮೂಲಕ ನಟ ಚೇತನ್ ಹೊಸ ವಿವಾದವನ್ನು ಹುಟ್ಟು ಹಾಕಿದ್ದರು. ಇದರ ಬೆನ್ನಲ್ಲೇ ಚೇತನ್ ಹೇಳಿಕೆಯಿಂದ ಹಿಂದೂ ಧರ್ಮದ ನಂಬಿಕೆಗಳಿಗೆ ಧಕ್ಕೆಯಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಚೇತನ್ ವಿರುದ್ದ ದೂರು ದಾಖಲಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ನಟ ಚೇತನ್ ಹೇಳಿಕೆಯ ಕುರಿತು ಕರಾವಳಿ ಭಾಗದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಭೂತ ಕೋಲ ಹಿಂದೂ ಸಂಸ್ಕೃತಿಕ ಒಂದು ಭಾಗ ಎಂದು ಹಲವು ನಾಯಕರು ಅಭಿಪ್ರಾಯ ಪಟ್ಟಿದ್ದಾರೆ. ದೈವಾರಾಧನೆಯನ್ನೇ ಮುಖ್ಯ ಕಥೆಯನ್ನಾಗಿಟ್ಟುಕೊಂಡು ಕಾಂತಾರ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸಿನಿಮಾ ದಿನೇ ದಿನೇ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಈ ನಡುವಲ್ಲೇ ಚೇತನ್ ಸಿನಿಮಾದ ಕುರಿತು ನೀಡಿರುವ ಹೇಳಿಕೆ ಇದೀಗ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ನಡುವಲ್ಲೇ ಇದೀಗ ಹಿಂದೂ ಜಾಗರಣಾ ವೇದಿಕೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸರಿಗೆ ದೂರು ನೀಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.

ಕೆಎಂಎಫ್ ನಿರ್ದೇಶಕ ನರಸಿಂಹ ಕಾಮತ್, ಹಿಂದೂ ಜಾಗರಣ ವೇದಿಕೆಯ ಕಾರ್ಕಳ ನಗರ ಸಂಯೋಜಕ ಸಂದೀಪ್ ಕಾರ್ಲ, ದೀಪಕ್ ಬೈಲೂರು, ಸುಭಾಶ್ಚಂದ್ರ, ಸಹಕಾರಿ ದುರೀಣ ಬೋಳ ಸದಾಶಿವ ಶೆಟ್ಟಿ, ನಲ್ಕೆ ಸಮುದಾಯದ ದೀಪಕ್ ಕಿರಣ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ನಟ ಚೇತನ್ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಿರುವ ಕಾಂತಾರ ಹೊರ ರಾಜ್ಯ ಮಾತ್ರವಲ್ಲ, ವಿಶ್ವದಾದ್ಯಂತ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ. ಕರಾವಳಿ ಭಾಗದಲ್ಲಿ ಭೂತ ಕೋಲ ಸಾಂಪ್ರದಾಯಿಕ ಆಚರಣೆಯನ್ನಾಗಿ ಇಂದಿಗೂ ಆಚರಿಸಲಾಗುತ್ತಿದೆ. ಕಾಂತಾರ ಸಿನಿಮಾದಲ್ಲಿಯೂ ಕರಾವಳಿ ಭಾಗದ ಆಚರಣೆಗಳನ್ನು ತೋರಿಸುವ ಪ್ರಯತ್ನವನ್ನು ಮಾಡಲಾಗಿದೆ. ನಟ ಚೇತನ್ ವಿವಾದ ಸೃಷ್ಟಿಯಾದ ನಂತರವೂ ಕೂಡ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಕಾರ್ಯವನ್ನು ಮಾಡಿದ್ದಾರೆ. ಭೂತಾರಾಧನೆ ಹಿಂದೂಗಳ ಆಚರಣೆ ಅಲ್ಲಾ ಎಂದು ಪುನರುಚ್ಚರಿಸಿದ್ದಾರೆ.

ಈ ಎಲ್ಲಾ ಗೊಂದಲಗಳ ನಡುವಲ್ಲೇ ರಾಜ್ಯ ಸರಕಾರ ದೈವ ನರ್ತಕರಿಗೆ ಮಾಶಾಸನವನ್ನು ಘೋಷಣೆ ಮಾಡಿದೆ. ೬೦ ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ಜಾನಪದ ಅಕಾಡೆಮಿಯ ಮೂಲಕ ಮಾಸಿಕ ಎರಡು ಸಾವಿರ ರೂಪಾಯಿಗಳನ್ನು ನೀಡುವುದಾಗಿ ಸಚಿವ ಸುನೀಲ್ ಕುಮಾರ್‌ ಅವರು ಘೋಷಣೆ ಮಾಡಿದ್ದಾರೆ. ಮಾಶಾಸನ ಸಿಗದೆ ಹಲವು ವರ್ಷಗಳಿಂದ ತತ್ತರಿಸಿದ್ದ ದೈವ ನರ್ತಕರಿಗೆ ವರದಾನವಾಗಿ ಪರಿಣಮಿಸಿದೆ.

ಇದನ್ನೂ ಓದಿ : ಹೋಟೆಲ್ ಕೆಲಸ, ಬಿಸ್ಲೆರಿ ಮಾರಾಟ, ಕೈ ಕೊಟ್ಟ ಸಿನಿಮಾ : ಇದು ಕಾಂತಾರ ರಿಷಬ್ ಶೆಟ್ಟಿ ಜೀವನ ಸಾಧನೆ

ಇದನ್ನೂ ಓದಿ : Kantara Effect : ಕಾಂತಾರ ಸಕ್ಸಸ್, ದೈವನರ್ತಕರಿಗೆ 2 ಸಾವಿರ ರೂ. ಮಾಶಾಸನ

Kantara Bhootha Kola is not Hindu culture Statement: Complaint file against actor Chetan

Comments are closed.