Expensive Mango : ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣಿನ ಬಗ್ಗೆ ನಿಮಗೆ ಗೊತ್ತೇ?

ಮಾವಿನಲ್ಲಿ (Expensive Mango) ಹಲವಾರು ತಳಿಗಳಿವೆ. ಭಾರತದಲ್ಲಂತೂ ಲಂಗ್ಡಾ, ಆಲ್ಫಾನ್ಸೋ, ದುಸೇರಿ, ಬೇಂಗನಪಾಲಿ, ನೀಲಂ ಹೀಗೆ ಹಲವಾರು ಬಗೆಯ ಮಾವಿನ ಹಣ್ಣುಗಳನ್ನು ಬೆಳೆಯುತ್ತಾರೆ. ಆದರೆ ನೀವು ಎಂದಾದರೂ ಕೇಳಿದ್ದೀರಾ ಅತೀ ದುಬಾರಿಯ ಮಾವಿನ ತಳಿಯನ್ನು? ನೇರಳೆ ಅಥವಾ ಕಡು ಕೆಂಪು ಬಣ್ಣದ ಮಿಯಾಝಕಿ (Miyazki mango) ಮಾವಿನ ಹಣ್ಣು ಜಗತ್ತಿನ ಅತೀ ದುಬಾರಿ ಹಣ್ಣಾಗಿದೆ. ಈ ಮಾವಿನ ಹಣ್ಣಿನ ಮೂಲ ಜಪಾನ್‌ ಆಗಿದೆ. ಅಂತರ್‌ರಾಷ್ಟ್ರಿಯ ಮಾರುಕಟ್ಟೆಯಲ್ಲಿ ಈ ಹಣ್ಣಿನ ಬೆಲೆ ಕೆಜಿಗೆ ಸುಮಾರು 2.70 ಲಕ್ಷ ಎಂದರೆ ನಿಮಗೆ ಆಶ್ಚರ್ಯವಾಗುತ್ತದೆಯಲ್ಲವೇ?

ಮಿಯಾಝಾಕಿ ಮಾವಿನ ಹಣ್ಣಿನ ಮೂಲ :

ಮಿಯಾಝಾಕಿ ಮಾವು ಮೂಲತಃ ಜಪಾನಿನ ಬೆಳೆಯಾಗಿದೆ. ಮಿಯಾಝಾಕಿ ಮಾವುಗಳನ್ನು ಹೆಚ್ಚಾಗಿ ಜಪಾನಿನ ನಗರವಾದ ಮಿಯಾಝಾಕಿಯಲ್ಲಿ ಬೆಳೆಯಲಾಗುತ್ತದೆ, ಇದು ಕ್ಯುಶು ಪ್ರದೇಶದಲ್ಲಿದೆ. ಜಪಾನಿನ ಪತ್ರಿಕಾ ವರದಿಗಳ ಪ್ರಕಾರ, ಮಿಯಾಝಾಕಿ ಮಾವನ್ನು ಆರಂಭದಲ್ಲಿ 1970 ಮತ್ತು 1980 ರ ನಡುವೆ ಮಿಯಾಝಾಕಿಯಲ್ಲಿ ಬೆಳೆಸಲಾಯಿತು. ಅಲ್ಲಿಯ ಹವಾಮಾನವು ಈ ಮಾವು ಕೃಷಿಗೆ ಸೂಕ್ತವಾಗಿತ್ತು. ಸೌಮ್ಯವಾದ ಹವಾಮಾನ, ದೀರ್ಘ ಗಂಟೆಗಳ ಸೂರ್ಯನ ಬೆಳಕು ಮತ್ತು ಸಾಕಷ್ಟು ಮಳೆ ಇದಕ್ಕೆ ಅಗತ್ಯವಾಗಿದೆ.

ಇದನ್ನೂ ಓದಿ : Jamun Fruit : ನೇರಳೆ ಹಣ್ಣು : ಬೇಸಿಗೆಯ ಸೂಪರ್‌ ಹಣ್ಣಿನ ಪ್ರಯೋಜನಗಳು ನಿಮಗೆ ಗೊತ್ತಾ?

ಮಿಯಾಝಾಕಿ ಮಾವಿನ ಹಣ್ಣಿನ ಆಸಕ್ತಿದಾಯಕ ವಿಷಯಗಳು :

  • ಈ ತಳಿಯ ಪ್ರತಿ ಮಾವಿನ ಹಣ್ಣು 350 ಗ್ರಾಂ ತೂಕವಿರುತ್ತದೆ.
  • ಇದು ಕೆಂಪು ಬಣ್ಣದ ಹಣ್ಣಾಗಿದೆ.
  • ನೋಡಲು ಡೈನೋಸಾರಸ್‌ನ ಮೊಟ್ಟೆಯಂತೆ ಕಾಣಿಸುತ್ತದೆ.
  • ಇದರ ಬಣ್ಣವು ಉರಿಯುತ್ತಿರುವ ಕೆಂಪು ಬಣ್ಣದಂತೆ ಕಾಣಿಸುವುದರಿಂದ ಇದನ್ನು ಡ್ರ್ಯಾಗನ್‌ ಮೊಟ್ಟೆ ಎಂದೂ ಕರೆಯುತ್ತಾರೆ.

ಇದನ್ನೂ ಓದಿ : Dragon Fruit : ಡ್ರಾಗನ್‌ ಹಣ್ಣು! ಅದ್ಭುತ ಪ್ರಯೋಜನಗಳಿರುವ ಹಣ್ಣನ್ನು ಈ ಬೇಸಿಗೆ ಕಾಲದಲ್ಲಿ ತಿನ್ನಿ

(Expensive Mango all you need to know the world’s most expensive mango variety)

Comments are closed.