ಗಜಕೇಸರಿ ರಾಜಯೋಗ 2026: ಈ ರಾಶಿಯವರಿಗೆ ಅದೃಷ್ಟದ ಹೊಳೆ ಹರಿಯುವ ಕಾಲ..!

ಮಿಥುನ ರಾಶಿಯಲ್ಲಿ ಉಂಟಾಗುವ ಗಜಕೇಸರಿ ಯೋಗವು ಅನೇಕ ರಾಶಿಗಳ ಅದೃಷ್ಟದ ಬಾಗಿಲುಗಳನ್ನು ತೆರೆಯುತ್ತದೆ. ಇದೇ ವೇಳೆ ಕೆಲವು ರಾಶಿಯವರು ವಿಶೇಷ ಎಚ್ಚರ ವಹಿಸಬೇಕಾಗಿದೆ.

Gajakesari Rajyog 2026: ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಜಯೋಗಗಳಿಗೆ ಬಹಳ ಮಹತ್ವ ಕೊಡಲಾಗಿದೆ. ರಾಜಯೋಗಗಳಿಂದ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ ಎಂಬ ನಂಬಿಕೆಯಿದೆ. ಜ್ಯೋತಿಷ್ಯದಲ್ಲಿ ಗಜಕೇಸರಿ ಯೋಗವನ್ನು ಅತ್ಯಂತ ಶುಭ ಹಾಗೂ ಫಲದಾಯಕ ರಾಜಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಜಾತಕದಲ್ಲಿ ದೇವಗುರು ಬೃಹಸ್ಪತಿ ಮತ್ತು ಚಂದ್ರನ ಸಂಯೋಗವುಂಟಾದಾಗ ಅತ್ಯಂತ ಶುಭವಾದ ಗಜಕೇಸರಿ ಯೋಗ ರೂಪುಗೊಳ್ಳುತ್ತದೆ. ಈ ಯೋಗವು ಇದೇ ಮಾರ್ಚ್‌ 26 ರಂದು ಮತ್ತೊಮ್ಮೆ ರೂಪುಗೊಳ್ಳಲಿದೆ. ಈಗಾಗಲೇ ಗುರು ಗ್ರಹ ಸಂಚರಿಸುತ್ತಿರುವ ಮಿಥುನ ರಾಶಿಗೆ ಚಂದ್ರನು ಮಾರ್ಚ್‌ 26 ರಂದು ಪ್ರವೇಶಿಸುತ್ತಾನೆ. ಮಿಥುನ ರಾಶಿಯಲ್ಲಿ ಉಂಟಾಗುವ ಗಜಕೇಸರಿ ಯೋಗವು ಅನೇಕ ರಾಶಿಗಳ ಅದೃಷ್ಟದ ಬಾಗಿಲುಗಳನ್ನು ತೆರೆಯುತ್ತದೆ. ಇದೇ ವೇಳೆ ಕೆಲವು ರಾಶಿಯವರು ವಿಶೇಷ ಎಚ್ಚರ ವಹಿಸಬೇಕಾಗಿದೆ. ಹಾಗಾದರೆ ಯಾವ ರಾಶಿಯವರಿಗೆ ಲಾಭ, ಯಾರಿಗೆ ನಷ್ಟ ಎಂದು ನೋಡೋಣ.

ಏನಿದು ಗಜಕೇಸರಿ ಯೋಗ?

ಗಜ ಎಂದರೆ ಆನೆ ಮತ್ತು ಕೇಸರಿ ಎಂದರೆ ಸಿಂಹ. ಆನೆಗಳು ಮತ್ತು ಸಿಂಹಗಳು ತಮ್ಮ ಶಕ್ತಿ ಮತ್ತು ಧೈರ್ಯಕ್ಕೆ ಹೆಸರುವಾಸಿಯಾಗಿರುವಂತೆ, ಜಾತಕದಲ್ಲಿ ಈ ಸಂಯೋಜನೆಯನ್ನು ಹೊಂದಿರುವ ವ್ಯಕ್ತಿಗೆ ಅಪಾರ ಸಂಪತ್ತು, ಗೌರವ, ಉತ್ತಮ ಆರೋಗ್ಯ ಮತ್ತು ಉನ್ನತ ಸ್ಥಾನಮಾನ ಪಡೆಯುವಂತೆ ಗ್ರಹಗಳು ಆಶೀರ್ವದಿಸುತ್ತವೆ.

ಗಜಕೇಸರಿ ರಾಜಯೋಗ ಯಾರಿಗೆ ಅದೃಷ್ಟ?

ಮಿಥುನ ರಾಶಿ

ಈ ಯೋಗದಿಂದ ಮಿಥುನ ರಾಶಿವರಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಹೊಸ ಜವಾಬ್ದಾರಿಗಳು ಹುಡುಕಿ ಬರಲಿವೆ.

ಕನ್ಯಾ ರಾಶಿ

ಗಜಕೇಸರಿ ರಾಜಯೋಗದಿಂದ ಕನ್ಯಾ ರಾಶಿಯವರಿಗೆ ಆರ್ಥಿಕ ಪ್ರಗತಿಯಾಗುತ್ತದೆ. ಹೂಡಿಕೆಗಳು ಲಾಭವನ್ನು ತರುತ್ತವೆ. ಮನೆಯಲ್ಲಿ ಶಾಂತಿ, ಸಂತೋಷ ನೆಲೆಸುತ್ತದೆ.

ಇದನ್ನೂ ಓದಿ: ಮಹಾಲಕ್ಷ್ಮಿ ರಾಜಯೋಗ ಎಂದರೇನು? ಯಾವ ರಾಶಿಯವರಿಗಿದೆ ರಾತ್ರೋರಾತ್ರಿ ಶ್ರೀಮಂತರಾಗುವ ಭಾಗ್ಯ?

ಯಾವ ರಾಶಿಯವರು ಎಚ್ಚರದಿಂದಿರಬೇಕು?

ಗಜಕೇಸರಿ ರಾಜಯೋಗ ಶುಭ ಫಲಗಳನ್ನು ನೀಡುವ ಯೋಗವು ಆಗಿದ್ದರೂ ಕೂಡಾ ವೃಷಭ, ವೃಶ್ಚಿಕ ಮತ್ತು ಕುಂಭ ರಾಶಿಯವರು ಬಹಳ ಜಾಗರೂಕರಾಗಿರಬೇಕಾದ ಸಮಯವಾಗಿದೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಸಣ್ಣ ತಪ್ಪು ಕೂಡಾ ಭಾರಿ ನಷ್ಟ ಅನುಭವಿಸುವಂತೆ ಮಾಡುತ್ತದೆ.

ವೃಷಭ ರಾಶಿ

ಈ ಸಮಯದಲ್ಲಿ ನಿಮ್ಮ ಮಾತಿನ ಮೇಲೆ ನಿಮಗೆ ನಿಯಂತ್ರಣವಿರಲಿ. ನಿಮ್ಮ ಹತ್ತಿರ ಸಂಬಂಧಗಳು ಮಾತಿನಿಂದಲೇ ಹದಗೆಡಬಹುದು. ಆರ್ಥಿಕ ವ್ಯವಹಾರದಲ್ಲಿ ಬಹಳ ಜಾಗ್ರತೆವಹಿಸಿ.

ವೃಶ್ಚಿಕ ರಾಶಿ

ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಿಕೊಳ್ಳಲು ನಿಮಗೆ ತೊಂದರೆಗಳು ಎದುರಾಗಬಹುದು. ಈ ಸಮಯದಲ್ಲಿ ಯಾರನ್ನಾದರೂ ಕುರುಡಾಗಿ ನಂಬುವ ದೊಡ್ಡ ತಪ್ಪಾಗಬಹುದು. ಹಿತ ಶತ್ರುಗಳ ಬಗ್ಗೆ ಎಚ್ಚರದಿಂದಿರಿ.

ಕುಂಭ ರಾಶಿ

ಕುಂಭ ರಾಶಿಯವರು ತಮ್ಮ ಆರೋಗ್ಯ ಮತ್ತು ಖರ್ಚು ವೆಚ್ಚಗಳ ಬಗ್ಗೆ ವಿಶೇಷ ಕಾಳಜಿವಹಿಸಬೇಕು. ಅನಗತ್ಯ ಪ್ರಯಾಣ ಮತ್ತು ವ್ಯರ್ಥ ಖರ್ಚು ನಿಮ್ಮ ಆರ್ಥಿಕ ಸ್ಥಿತಿಯನ್ನು ಹಾಳುಮಾಡಬಹುದು. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದಿದ್ದರೆ ಬಹಳ ಎಚ್ಚರಿಕೆವಹಿಸಿ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories