Gudimallam Lingam : ಭಾರತದ ಪುರಾತನ ಹಾಗೂ ವಿಶೇಷವಾದ ಶಿವಲಿಂಗ ಎಲ್ಲಿದೆ ಗೊತ್ತಾ

Gudimallam Lingam : ಭಾರತದಲ್ಲಿರುವ ಪುರಾತನ ಹಿಂದೂ ದೇವಾಲಯಗಳನ್ನು ನಮ್ಮ ಹಿರಿಯರು ಬರೀ ದೇವರ ಮೇಲಿನ ಭಕ್ತಿಯಿಂದ ನಿರ್ಮಿಸಿಲ್ಲ. ಪುರಾತನ ಹಿಂದೂ ದೇವಾಲಯದಲ್ಲಿ ಭಕ್ತಿಗಿಂತ ಹೆಚ್ಚು ಇತಿಹಾಸ ಸಂರಕ್ಷಣ ಹಾಗೂ ಜ್ಞಾನ ಸಂಗ್ರಹಣಾ ಕೇಂದ್ರಗಳಾಗಿದ್ದವು. ನಮ್ಮ ಹಿರಿಯರಿಗೆ ತಿಳಿದಿದ್ದ ಅದ್ಬುತ ಮಾಹಿತಿ ಯನ್ನು ಮುಂದಿನ ತಲೆನಾರಿಗೆ ತಲುಪಿಸುವ ಸಲುವಾಗಿಯೇ ನಿರ್ಮಾಣಕೊಂಡ ಜ್ಞಾನದ ಸಂಗ್ರಹಾಲಯ ವಾಗಿದ್ದವು.

Do you know where the ancient and special Shivalinga of India is

ಗುಡಿ ಮಲ್ಲಾದಲ್ಲಿರುವ (Gudimallam Lingam) ಪುರಾತನ ಶೀವಾಲಯವನ್ನು ಪರಶುರಾಮೇಶ್ವರ (Parasurameswara Swamy Temple ) ಎಂದು ಕರೆಯಲಾಗುತ್ತದೆ. ಹಲವರು ಹೇಳುವ ಪ್ರಕಾರ ಇದು ಭಾರತದ ಪುರಾತನ ಶಿವಾಲಯ. ಈ ದೇವಸ್ಥಾನವನ್ನು ಸುಮಾರು 2300 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಹೆಳಲಾಗುತ್ತಿದೆ. ಇಲ್ಲಿರುವ ರೀತಿಯ ಶಿವ ಲಿಂಗವನ್ನು (Oldest Shivalinga ) ಬೇರೆಲ್ಲೂ ನೋಡಲು ಸಿಗುವುದಿಲ್ಲಾ. ಈ ದೇವಾಲಯದಲ್ಲಿ ಸೃಷ್ಟಿ ರಹಸ್ಯ ಅಡಗಿದೆ ಎಂಬುದು ಹಲವರ ಅಭಿಪ್ರಾಯ.

Do you know where the ancient and special Shivalinga of India is

ಇಲ್ಲಿನ ವಿಗ್ರಹ ಯಾವ ರೀತಿ ವಿಶೇಷ ಎಂದರೆ ಇಲ್ಲನ ವಿಗ್ರಹದ ಕೆಳಭಾಗದಲ್ಲಿ ಮನುಷ್ಯನೊಬ್ಬ ಮಂಡಿಯೂರಿ ಕುಳಿತಿದ್ದಾನೆ. ಅವನ ಹೆಗಲ ಮೇಲೆ ಮನುಷ್ಯನೊಬ್ಬ ನಿಂತಿದ್ದಾನೆ. ನಿಂತಿರುವ ಮನುಷ್ಯನ ಎಡ ಬುಜದ ಮೇಲೆ ಕೊಡಲಿ, ಹಾಗೂ ಕಟಿ ಬಂದ, ಸುಂದರ ಕೇಶ ವಿನ್ಯಾಸ ಹಾಗೂ ಕಿವಿಯಲ್ಲಿ ಆಭರಣ. ಅದರಿಂದ ಮೇಲೆ ನಿಮಗೆ ಕಾಣ ಸಿಗೋದು ಪುರುಷಾಂಗವನ್ನು ಹೋಲುವ ಲಿಂಗದ ಆಕೃತಿ. ಅಂದರೆ ಅದು ಲಿಂಗದ ಮೂಲ ಕಲ್ಪನೆ ಅಥವಾ ಸೃಷ್ಟಿಯ ಬಗ್ಗೆ ತಿಳಿಸುವ ವಿಗ್ರಹ ರೂಪ. ಈ ವಿಗ್ರಹದ ಇನ್ನೊಂದು ವಿಶೇಷ ಎಂದರೆ ಈ ವಿಗ್ರವನ್ನು ಕಲ್ಲಿನಿಂದ ನಿರ್ಮಿಸಿದ್ದಲ್ಲಾ. ಇದನ್ನು ನವಪಾಷಾಣಾವನ್ನು ಉಪಯೋಗಿಸಿ ಸಿರ್ಮಿಸಲಾಗಿದೆ. ಇದನ್ನು ನವಪಾಷಾಣಾ ವಿಗ್ರಹ ಅಥವಾ ನವ ಪಾಷಾಣ ಲಿಂಗ ಅಂತ ಕರಿಯೂತ್ತಾರೆ. ಈ ಲಿಂಗವನ್ನು ಪರಶುರಾಮರೇ ಪ್ರತಿಷ್ಟಾಪಿಸಿದರು ಎಂದು ಹೇಳುತ್ತಾರೆ. ಇದರಿಂದಲೇ ಈ ಸ್ಥಳವನ್ನು ಪರಶುರಾಮೇಶ್ವರ ಎಂದು ಕರೆಯುತ್ತಾರೆ.

ಇದನ್ನೂ ಓದಿ: ಈ ಮಾತೆಗೆ ಇಲಿಗಳೇ ಮಕ್ಕಳು : ಮೂಷಿಕನನ್ನು ಪೂಜಿಸಿದ್ರೆ ಇಷ್ಟಾರ್ಥ ಸಿದ್ಧಿ

Do you know where the ancient and special Shivalinga of India is

ಇಲ್ಲಿನ ಸ್ಥಳ ಮುರಾಣದ ಪ್ರಕಾರ ತಂದೆ ಜಮದಗ್ನಿಯ ಆದೇಶದಂತೆ ತಾಯಿ ರೇಣುಕಾ ದೇವಿಯ ಶಿರಚ್ಛೇದನ ಮಾಡಿದ ಪರಶುರಾಮರು ನಂತರ ತಮ್ಮ ತಾಯಿಯನ್ನು ಬದುಕಿಸಿ ಕೊಳ್ಳುತ್ತಾರೆ, ಮಾತೃ ಹತ್ಯಾ ದೋಷದ ಪಶ್ಚಾತಾಪದಿಂದ ಹೊರಬರಲು ಗುಡಿಮಲ್ಲಾ ಪ್ರದೇಶಕ್ಕೆ ಬಂದು ಇಲ್ಲಿ ತಪಸ್ಸಿಗೆ ಕೂತು ನಂತರ ಕ್ಷತ್ರೀಯ ವಿನಾಶದ ಶಪತ ಮಾಡಿ ಭಾರತದಾದ್ಯಂತ ಸಂಚರಿಸಿ ಕ್ಷತ್ರಿಯರನ್ನು ಸಂಹಾರ ಮಾಡುತ್ತಾ ಬಂದರು. ನಂತರ ಆ ಎಲ್ಲಾ ರಕ್ತಪಾತದ ಪ್ರಾಯಚಿತಕಾಗಿ ಗುಡಿಮಲ್ಲಾದಲ್ಲಿ ಸೃಷ್ಟಿ ಲಿಂಗದ ಪ್ರತಿಷ್ಟಾಪನೆ ಮಾಡಿದರು ಅಂತ ಹೇಳಲಾಗುತ್ತೆ. ಗುಡಿಮಲ್ಲಾ ದೇವಾಲಯದಲ್ಲಿ ಇನ್ನೊಂದು ವಿಸ್ಮಯ ಎಂದರೆ ಅಲ್ಲಿನ ವಾಸ್ತು ಶಿಲ್ಪ. ಈ ದೇವಾಲಯ ಗೋಪುರ ಗಜಪುಷ್ಠಕಾರದಲ್ಲಿದೆ. ಶಾತವಾಹನ ಅರಸರು ಈ ದೇವಾಲಯನ್ನು ಕಟ್ಟಿರಬಹುದು ಎಂದು ಪುರಾತತ್ವ ಇಲಾಖೆಯವರು ಹೇಳುತ್ತಾರೆ.

Do you know where the ancient and special Shivalinga of India is

ಈ ದೇವಾಲಯದ ಅಂಗಳದಲ್ಲಿರುವ ಶಾಸನಗಳಲ್ಲಿ ಕ್ರಿ.ಶಕ 800 ರಿಂದ ಹಿಡಿದು ಕ್ರಿ, ಶಕ 1346 ರ ವರೆಗೆ ಯಾವೆಲ್ಲಾ ರಾಜರುಗಳು ಈ ಮಂದಿರದ ಅಭಿವೃದ್ಧಿಗೆ ಕೆಲಸ ಮಾಡಿದರು ಎನ್ನುವ ಬಗ್ಗೆ ಉಲ್ಲೇಖ ಇದೆ. ಶಾಸನಗಳ ಉಲ್ಲೇಖಗಳ ಪ್ರಕಾರ ಇದು ವಿಪ್ರಪೀಠ ಅಂದರೆ ಬ್ರಾಹ್ಮಣರ ಅಗ್ರಹಾರ. ಪ್ರತಿ ವರ್ಷ ಸೂರ್ಯ ತನ್ನ ಪತ ಬದಲಾಯಿಸಿದಾಗ ಸಾಮಾನ್ಯವಾಗಿ ಡಿಸೆಂಬರ್‌ 15 ರಿಂದ 22ರ ವರೆಗೆ ಮುಂಜಾನೆಯ ಸೂರ್ಯನ ಕಿರಣಗಳು ಈ ವಿಪ್ರಪೀಠದ ಶಿವನ ಪಾದ ಸ್ಪರ್ಶ ಮಾಡುತ್ತವೆ. ಈ ಮಂದಿರದ ಪ್ರವೇಶ ದ್ವಾರ ಪೂರ್ವ ದಿಕ್ಕಿನಲ್ಲಿ ಇದ್ದರೂ ಈ ಮಂದಿರದ ವಿಗ್ರಮ ಮುಖಮಾಡಿ ನಿಂತಿದ್ದು ಮಾತ್ರ ದಕ್ಷಿಣದ ದಿಕ್ಕಿಗೆ. ದಕ್ಷಿಣದ ಕಿಟಕಿಗಳ ಮೂಲಕ ಒಳಪ್ರವೇಶಿಸುವ ಸೂರ್ಯ ರಶ್ಮಿಗಳು ನೇರವಾಗಿ ಈ ವಿಗ್ರದ ಪಾದ ಸ್ಪರ್ಷಮಾಡುತ್ತವೆ.

ಇದನ್ನೂ ಓದಿ: volcano Ganesh : ಜ್ವಾಲಾಮುಖಿಯ ತುದಿಯಲ್ಲಿ ನೆಲೆಸಿದ್ದಾನೆ ಗಣಪ

Do you know where the ancient and special Shivalinga of India is

ಸಾವಿರಾರು ವರ್ಷಗಳ ಹಿಂದೆ ಗಣಿತ ಹಾಗೂ ವಾಸ್ತು ವಿಜ್ಞಾನ ಸೂತ್ರಗಳನ್ನು ಬಳಸಿ ಇಂತ ಅಭ್ಧುತವನ್ನು ಸೃಷ್ಟಿಮಾಡಿದ ನಮ್ಮ ಪೂರ್ವಜರ ಬಗ್ಗೆ ನಾವು ಹೆಮ್ಮೆ ಪಡಬೇಕು. ಈ ವಿಗ್ರಹದ ಸುತ್ತ ಆಯತಾಕಾರದ ತೊಟ್ಟಿಯಲ್ಲಿ ಪ್ರತೀ 60 ವರ್ಷಗಳಿಗೊಮ್ಮೆ ಜಲಾವೃತವಾಗುತ್ತದೆ. ತೊಟ್ಟಿಯ ತಳಭಾಗದಲ್ಲಿ ನಿರ್ಮಿಸಿರೋ ಸಣ್ಣ ರಂದ್ರದ ಮೂಲಕ ತಾನಾಗಿಯೇ ಒಳಗೆ ಬರೋ ನೀರು ಈ ಪರಶುರಾಮೇಶ್ವರ ಪಾದವನ್ನುತೊಳೆಯ ತೊಡಗುತ್ತೆ. ಇಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಗಂಗೆ ತಪ್ಪದೇ 60 ವರ್ಷಗಳಿಗೊಮ್ಮೆ ತಪ್ಪದೇ ಗರ್ಭಗುಡಿ ಯನ್ನು ಪ್ರವೇಶಿಸುತ್ತಾಳೆ. 1945 ರಲ್ಲಿ ಹಾಗೂ 2005ರಲ್ಲಿ ಗುಡಿಯಲ್ಲಿ ಈ ಜಲಾವೃತ ನೀರಿನ ವಿಸ್ಮಯ ನಡೆದಿದೆಯಂತೆ. ಮುಂದೆ 2065 ರಲ್ಲಿ ಕೂಡ ಇಂತ ವಿಸ್ಮಯ ನಡೆಯುತ್ತದೆ ಎನ್ನುತ್ತಾರೆ ಸ್ಥಳೀಯರು. ಈ ಗುಡಿಮಲ್ಲಾ ನಮ್ಮಕರ್ನಾಟದಿಂದ ತೀರ ದೂರ ಏನಿಲ್ಲಾ. ತಿರುಪತಿಗೆ ಸಮೀಪ ರೇಣಿಗುಂಟ ರೈವೆ ನಿಲ್ಧಾಣದಿಂದ ಕೇವಲ 24 ಕಿ. ಮೀ ಅಷ್ಟೆ. ಒಮ್ಮೆ ಭೇಟಿ ನೀಡಿ ಅಲ್ಲಿನ ವಿಶೇಷತೆಯನ್ನು ಗಮನಿಸಿ.

ಇದನ್ನೂ ಓದಿ : volcano Ganesh : ಜ್ವಾಲಾಮುಖಿಯ ತುದಿಯಲ್ಲಿ ನೆಲೆಸಿದ್ದಾನೆ ಗಣಪ

ಇದನ್ನೂ ಓದಿ : Temple inspired Parliament House : ಪಾರ್ಲಿಮೆಂಟ್ ಭವನದ ವಿನ್ಯಾಸಕ್ಕೆ ಸ್ಪೂರ್ತಿಯಾದ ದೇಗುಲ

( Gudimallam Lingam special Shivalinga in Parasurameswara Swamy Temple)

Comments are closed.