beat the heat : ಬೇಸಿಗೆಯಿಂದ ಪಾರಾಗಲು ಟ್ರೈಮಾಡಿ ನೋಡಿ ಈ ಆರ್ಯುವೇದಿಕ್​​ ಜ್ಯೂಸ್​​..!

ಬೇಸಿಗೆ ಕಾಲ(beat the heat) ಹತ್ತಿರ ಬಂತು ಅಂದರೆ ಸಾಕು ನಾವು ಕುರುಕಲು ತಿಂಡಿಗಳು, ಜಂಕ್​ಫುಡ್​ಗಳನ್ನು ಬದಿಗಿಟ್ಟು ಪಾನೀಯಗಳನ್ನು ಹೆಚ್ಚೆಚ್ಚು ಸೇವಿಸಲು ಆರಂಭಿಸುತ್ತೇವೆ. ಅಂಗಡಿಗಳಲ್ಲಿ ಸಿಗುವ ಪಾನೀಯಗಳಲ್ಲಿ ಅತಿಯಾದ ಸಕ್ಕರೆ ಇರುತ್ತದೆ. ಜ್ಯೂಸ್​ ಹಾಗೂ ಐಸ್​ಕ್ರೀಮ್​ಗಳ ಅತಿಯಾದ ಸೇವನೆ ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ಇದರಿಂದ ಬೊಜ್ಜು ಹಾಗೂ ಮಧುಮೇಹದಂತಹ ಕಾಯಿಲೆಗಳು ಬರಬಹುದು. ಇದರ ಜೊತೆಯಲ್ಲಿ ಕಾರ್ಬೋನೇಟೆಡ್​​ ಪಾನೀಯಗಳ ಸೇವನೆಯಿಂದ ಹಲ್ಲಿನ ಆರೋಗ್ಯ ಕೂಡ ಹಾಳಾಗುತ್ತದೆ. ಇದರ ಜೊತೆಯಲ್ಲಿ ಮೂತ್ರಪಿಂಡ ಕೂಡ ಹಾನಿಗೊಳಗಾಗುತ್ತದೆ.


ನೀವು ಇಂತಹ ಯಾವುದೇ ಆರೋಗ್ಯ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬೇಕು ಎಂದುಕೊಳ್ಳುತ್ತಿದ್ದರೆ ನೀವು ಮನೆಯಲ್ಲಿಯೇ ತಯಾರಿಸಿದ ನೈಸರ್ಗಿಕ ಪಾನೀಯಗಳನ್ನೇ ಸೇವಿಸಬಹುದು. ವಿವಿಧ ರೀತಿಯ ಹಣ್ಣುಗಳು, ಗಿಡ ಮೂಲಿಕೆಗಳು ಹಾಗೂ ಮಸಾಲೆ ಪದಾರ್ಥಗಳನ್ನು ಬಳಕೆ ಮಾಡಿ ನೀವು ಜ್ಯೂಸ್​ನ್ನು ತಯಾರಿಸುವ ಮೂಲಕ ಬೇಸಿಗೆಯ ಶಾಖದಿಂದ ಪಾರಾಗುವುದರ ಜೊತೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ನೀವು ಮನೆಯಲ್ಲಿ ಮಾಡಬಹುದಾದ ಪಾನೀಯಗಳು ಯಾವುದು ಎಂಬುದಕ್ಕೆ ಇಲ್ಲಿದೆ ಮಾಹಿತಿ :


ಪುದೀನಾ ಶರಬತ್​


2-3 ಲೋಟ ನೀರನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಮುಷ್ಟಿ ಪುದೀನಾ ಎಲೆಯನ್ನು ಹಾಕಿ , ರುಚಿಗೆ ಅನುಸಾರವಾಗಿ ರಾಕ್​ ಶುಗರ್​ನ್ನು ಸೇರಿಸಿ ರುಬ್ಬಿಕೊಳ್ಳೀ. ಇದಕ್ಕೆ ಅರ್ಧ ಹೋಳು ಲಿಂಬೆ ಹಾಗೂ ರುಚಿಗೆ ಅನುಸಾರ ರಾಕ್​ ಸಾಲ್ಟ್​ನ್ನು ಹಾಕಿ ಸೇವಿಸಿ.


ಗುಲ್ಕಂದ್​​ ಶಾಟ್ಸ್​


ಒಂದು ಲೋಟ ಹಾಲಿಗೆ 1 ಟೇಬಲ್​ ಸ್ಪೂನ್​ ಗುಲ್ಕಂದ್​ ಸೇರಿಸಿ . ಹ್ಯಾಂಡ್​ ಬ್ಲೆಂಡರ್​ನಿಂದ ಚೆನ್ನಾಗಿ ಮಿಶ್ರಣ ಮಾಡಿ ಬಳಿಕ ಸರ್ವ್​ ಮಾಡಿ.


ಪಾನ್​ ಶಾಟ್ಸ್​ :


4 ವೀಳ್ಯದ ಎಲೆಗಳನ್ನು ತೆಗೆದುಕೊಳ್ಳಿ. ಇದಕ್ಕೆ 4 ಚಮಚ ಗುಲ್ಕಂದ್​​, 1 ಚಮಚ ಚಿಯಾ ಬೀಜ, 1 ಚಮಚ ಕಾಯಿತುರಿ, 1 ಟೇಬಲ್​ ಸ್ಪೂನ್​ ಸಕ್ಕರೆ ಹಾಗೂ 1/4 ಕಪ್​​ ನೀರನ್ನು ಸೇರಿಸಿ ಜ್ಯೂಸ್​ ತಯಾರಿಸಿ.

ಇದನ್ನು ಓದಿ : April Fools Day 2022 : ಏಪ್ರಿಲ್‌ ಫೂಲ್ಸ್‌ ಡೇ ಏಕೆ ಈ ದಿನ ಅಷ್ಟು ಫೇಮಸ್‌! ಇದರ ಇತಿಹಾಸ ಮತ್ತು ಮೂಲ ನಿಮಗೆ ಗೊತ್ತೇ?

ಇದನ್ನೂ ಓದಿ : Watermelon : ಬೇಸಿಗೆಯ ಬಿಸಿಲಿಗೆ ತಂಪು ನೀಡುವ ಕಲ್ಲಂಗಡಿ ಹಣ್ಣಿನ ಪ್ರಯೋಜನಗಳೇನು ಎಂಬುದು ಗೊತ್ತೇ?

.Ayurveda expert suggests natural cooling drinks to beat the heat

Comments are closed.