Hemachala Lakshmi Narasimha Swamy Temple : ದೇವರು ನಮ್ಮ ನಿಲುವಿಗೆ ನಿಲುಕದ ಶಕ್ತಿ. ಆ ಪರಮಾತ್ಮನನ್ನು ನಾವು ಹಲವು ರೂಪದಲ್ಲಿ ಪೂಜಿಸುತ್ತೀವೆ . ಕಲ್ಲಿನ, ಮರ ಹಾಗೂ ಲೋಹದಲ್ಲಿ ದೇವರ ರೂಪವನ್ನು ಕಂಡು ಪೂಜಿಸಿ ಪುನೀತರಾಗುವ ಸಂಪ್ರದಾಯ ನಮ್ಮ ದೇಶದಲ್ಲಿದೆ. ಆದ್ರೆ ಹಿಮಾಚಲ ನರಸಿಂಹ ಸ್ವಾಮಿ ದೇವಾಲಯದಲ್ಲಿ ಮಾತ್ರ ದೇವರು ಮನುಷ್ಯನ ದೇಹದ್ದೇ ರೀತಿಯ ದೇಹವನ್ನು ಧರಿಸಿ ಇಲ್ಲಿ ನೆಲೆನಿಂತು ಭಕ್ತರನ್ನು ಕಾಯುತ್ತಾನೆ.
ಹೌದು ನಿಮಗೆ ಆಶ್ಚರ್ಯವಾದರೂ ಸತ್ಯ .ಇಲ್ಲಿ ದೇವರ ದೇಹ ಮನುಷ್ಯನಂತೆ ಮೆತ್ತಗಾಗಿದೆ. ದೇಹದ ತುಂಬಾ ಮನುಷ್ಯರಂತೆ ಕೂದಲುಗಳಿವೆ. ಗುಹೆ ಯೊಂದರಲ್ಲಿ ಕುಳಿತು ಭಕ್ತರಿಗೆ ದರ್ಶನ ಕೊಡುತ್ತಾನೆ ಪರಮಾತ್ಮ. ಇಲ್ಲಿ ನರಸಿಂಹ ಸ್ವಾಮಿ ಮನುಷ್ಯ ದೇಹ ಪ್ರಕೃತಿಯನ್ನು ಹೊಂದಿ ನೆಲೆಸಿರೋದು ನೋಡಿದ್ರೆ ದೇವರ ಲೀಲೆಯ ಕುರಿತು ಅಚ್ಚರಿ ಅನಿಸದೇ ಇರದು. ಇಲ್ಲಿ ಕಾಡಿನ ಗುಹೆಯೊಂದರಲ್ಲಿ ನೆಲೆಸಿರೋ ಈ ಸ್ವಾಮಿಯನ್ನು ನೋಡೋಕೆ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಇಲ್ಲಿ ನರಸಿಂಹ ಸ್ವಾಮಿಯ ದೇಹ ಎಷ್ಟು ಮೃದು ಆಗಿದೆ ಅಂದ್ರೆ, ದೇವರ ದೇಹವನ್ನು ಬೆರಳಿನಿಂದ ಒತ್ತಿದ್ರೆ ಅದು ಒಳಗೆ ಹೋಗುತ್ತೆ . ಬೆರಳನ್ನು ಸರಿಸಿದ ತಕ್ಷಣ ಅದು ಸಾಮಾನ್ಯ ಸ್ಥಿತಿಗೆ ಬಂದು ತಲುಪುತ್ತೆ ಅನ್ನೋದು ಅರ್ಚಕರ ಮಾತು. ಈ ವಿಗ್ರಹವು 10 ಫೀಟ್ ಉದ್ದವಿದ್ದು, ಇದೊಂದು ಉದ್ಬವ ನರಸಿಂಹ ಮೂರ್ತಿ. ಗುಹೆಯ ಗೋಡೆಗೆ ತಾಗಿದಂತಿರುವ ಈ ದೇವರ ನಾಭಿಯಿಂದ ರಕ್ತದಂತಹ ವಸ್ತುವು ಹೊರಗೆ ಬರುತ್ತಂತೆ.
ಇದನ್ನೂ ಓದಿ : ಶ್ರೀ ಕೃಷ್ಣನೇ ನೀಡಿದ್ದ ತನ್ನ ವಿಗ್ರಹ – ಇವನನ್ನು ಭಕ್ತಿಯಿಂದ ಪೂಜಿಸಿದ್ರೆ ಕಷ್ಟಗಳು ಪರಿಹಾರ
ಹೀಗಾಗಿ ನಾಭಿಯ ಗೆ ನಿತ್ಯವೂ ಚಂದನ ಲೇಪನವನ್ನು ಮಾಡಲಾಗುತ್ತೆ. ಹಾಗೂ ಭಕ್ತರಿಗೆ ಇದೇ ಪ್ರಸಾದ ಅಂತ ನೀಡಲಾಗುತ್ತೆ. ಇದನ್ನು ಸೇವನೆ ಮಾಡೋದ್ರಿಂದ ಸಂತಾನಭಾಗ್ಯ ಹಾಗೂ ಗ್ರಹದೋಷಗಳು ನಿವಾರಣೆ ಆಗುತ್ತೆ ಅನ್ನೋ ನಂಬಿಕೆ ಇದೆ. ಮತ್ತೊಂದೆಡೆ ದೇವರ ಪಾದದಿಂದ ಧಾರೆಯೊಂದು ಹರಿಯುತ್ತೆ. ಅದನ್ನು ಚಿಂತಾಮಣಿ ಧಾರೆ ಅಂತಾನೆ ಕರೀತಾರೆ . ಅದರಲ್ಲಿ ಮಿಂದು ಸೇವನೆ ಮಾಡಿದ್ರೆ ಆನಾರೋಗ್ಯ ದೂರವಾಗುತ್ತೆ ಅನ್ನೋ ನಂಬಿಕೆ ಇದೆಯಂತೆ. ಇಲ್ಲಿನ ತೀರ್ಥ ಅಂತಾನೆ ನಂಬಲಾಗೋ ಈ ಧಾರೆಯನ್ನು ಸೇವಿಸೋಕೆ ನೂರಾರು ಮಂದಿ ಇಲ್ಲಿಗೆ ಆಗಮಿಸುತ್ತಾರೆ.

ಇನ್ನು ಇಲ್ಲಿನ ಸ್ಥಳಪುರಾಣಕ್ಕೆ ಬರೋದಾದ್ರೆ ಈ ಜಾಗಕ್ಕೆ ತ್ರೇತಾಯುಗದ ನಂಟು ಕೂಡಾ ಇದೆ. ಇಲ್ಲೇ ರಾಮ ಖರದೂಷಣನ ಸಹಿತ ಸಾವಿರಾರು ರಾಕ್ಷಸರನ್ನು ಸಂಹಾರ ಮಾಡಿದ್ದ ಅಂತ ನಂಬಲಾಗುತ್ತೆ. ಅದಕ್ಕೆ ಈ ಜಾಗಕ್ಕೆ ಹೇಮಾಚಲ ಅನ್ನೋ ಹೆಸರು ಬಂತು ಅಂತ ಹೇಳಲಾಗುತ್ತೆ .ಇನ್ನು ನರಸಿಂಹ ಸ್ವಾಮಿ ಕುರಿತು ಹೇಳೋದಾದ್ರೆ, ಶತವಾಹನ ದೊರೆ ದಿಲೀಪಕರ್ಣಿ ಅನ್ನೋ ರಾಜ ನರಸಿಂಹ ದೇವರ ಜೊತೆ ಹೋರಾಡಿದ್ದನಂತೆ.
ಇದನ್ನೂ ಓದಿ : ಭಕ್ತರನ್ನು ಕಾಯುತ್ತಾಳೆ ಪರಶುರಾಮರ ತಾಯಿ – ಬೇವಿನ ಸೇವೆಯೇ ಈಕೆಗೆ ಅತಿಪ್ರಿಯ
ನಿಜಸ್ವರೂಪ ತಿಳಿದ ರಾಜನು ಮತ್ತೆ ಹಲವು ಪೂಜೆ ಮಾಡಿ ದೇವರನ್ನು ತಣ್ಣಗಾಗಿಸಲು ಲಕ್ಷ್ಮೀ ದೇವರನ್ನು ಸ್ಥಾಪಿಸಿದ ಅನ್ನೋ ಮಾತಿದೆ. ಆಗ ನರಸಿಂಹ ಮೂರ್ತಿಯು ರಾಜನಿಗೆ ಅನುಗ್ರಹಿಸಿದ ಅನ್ನೋದು ನಂಬಿಕೆ. ಇನ್ನು ಈ ದೇವಾಲಯ ಕಾಡಿನ ನಡುವೆ ಇದ್ದು , ಕಾಲುದಾರಿಯ ಮೂಲಕ ಸ್ವಾಮಿಯಿರುವ ಬೆಟ್ಟಕ್ಕೆ ಹೋಗಬೇಕು. ಈ ದೇವಾಲಯ ತೆಲಂಗಾಣದ ಭದ್ರಾಚಲಂ ಪಟ್ಟಣದಿಂದ ಕೆಲವೇ ಮೈಲುಗಷ್ಟು ದೂರ ಇದೆ.

ಇಲ್ಲಿಗೆ ಹೋಗೋಕೆ 150 ಮೆಟ್ಟಿಲನ್ನು ಹತ್ತುವುದು ಅನಿವಾರ್ಯ . ಸಾಮಾನ್ಯವಾಗಿ ಈ ದೇವಾಲಯವು ಬೆಳಗ್ಗೆ 8.30 ರಿಂದ 1 ಗಂಟೆಯ ವರೆಗೆ ಹಾಗೂ ಸಂಜೆ 3.30 ರಿಂದ 5 ಗಂಟೆಯ ವರೆಗೆ ತೆರೆದಿರುತ್ತೆ. ಇಲ್ಲಿ ಸಾಮಾನ್ಯವಾಗಿ ಎಪ್ರಿಲ್ ಹಾಗೂ ಮೇ ಯಲ್ಲಿ ಬ್ರಹ್ಮರಥೋತ್ಸವ ನಡೆಯುವ ರೂಢಿ ಇದ್ದು ಇದಕ್ಕೆ ಲಕ್ಷಾಂತರ ಮಂದಿ ಭಕ್ತರು ಭಾಗವಹಿಸುತ್ತಾರೆ. ಒಟ್ಟಾರೆ ಪ್ರಕೃತಿ ಸೌಂದರ್ಯದ ನಡುವೆ ನೆಲೆ ನಿಂತಿರೋ ಈ ಭವ್ಯ ಮೂರ್ತಿಯನ್ನು ನೋಡೋಕಾದ್ರು ಒಮ್ಮೆ ಭೇಟಿ ನೀಡಿ.
Hemachala Lakshmi Narasimha Swamy Temple Mangapet Warangal Telangana