VVS Laxman Coach : ದ್ರಾವಿಡ್ ಸ್ಥಾನಕ್ಕೆ ಲಕ್ಷ್ಮಣ್.. ಭಾರತ ಕ್ರಿಕೆಟ್ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಕೋಚ್ !

ಬೆಂಗಳೂರು: (VVS Laxman coach) ಟೀಮ್ ಇಂಡಿಯಾಗೆ ಸದ್ಯ ರಾಹುಲ್ ದ್ರಾವಿಡ್ ಕೋಚ್. ಕಳೆದ ವರ್ಷವೇ ದ್ರಾವಿಡ್ ಭಾರತ ತಂಡದ ಕೋಚ್ ಆಗಿ ನೇಮಕ ಗೊಂಡಿದ್ದರು. ದ್ರಾವಿಡ್ ಮುಂದಾಳತ್ವದಲ್ಲಿ ಭಾರತ ತಂಡ ಏಕದಿನ ಹಾಗೂ ಟಿ20 ಕ್ರಿಕೆಟ್’ನಲ್ಲಿ ದಿಗ್ವಿಜಯ ಸಾಧಿಸ್ತಾ ಮುನ್ನುಗ್ಗುತ್ತಿದ್ದು, ಸದ್ಯ ತಂಡದ ಗುರಿ ಏಷ್ಯಾ ಕಪ್ ಗೆಲ್ಲುವುದು. ಆದರೆ ಟೀಮ್ ಇಂಡಿಯಾ ಕೋಚ್ ಇದ್ದಕ್ಕಿದ್ದಂತೆ ಬದಲಾಗಿದ್ದಾರೆ. ಭಾರತ ತಂಡದ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ನೇಮಕವಾಗಿದ್ದಾರೆ. ಹಾಗಾದ್ರೆ ದ್ರಾವಿಡ್ ಅವರಿಗೆ ಏನಾಯ್ತು?

ಸಡನ್ ಆಗಿ ಟೀಮ್ ಇಂಡಿಯಾ ಕೋಚ್ ಚೇಂಜ್ ಆಗಿದ್ದೇಕೆ? ಈ ಸುದ್ದಿ ಓದಿ ಅಚ್ಚರಿಯಾಗ್ಬಹ್ದು. ಆದರೆ ಅಸಲಿ ವಿಷಯ ಏನಂದ್ರೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿರುವುದು ಮುಂಬರುವ ಜಿಂಬಾಬ್ವೆ ಪ್ರವಾಸಕ್ಕೆ ಮಾತ್ರ (India Tour of Zimbabwe). ಏಷ್ಯಾ ಕಪ್ ಹಿನ್ನೆಲೆಯಲ್ಲಿ ರಾಹುಲ್ ದ್ರಾವಿಡ್ ಜಿಂಬಾಬ್ವೆ ಪ್ರವಾಸಕ್ಕೆ ಲಭ್ಯರಿಲ್ಲ. ಹೀಗಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (National Cricket Academy NCA) ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರನ್ನು ಭಾರತ ತಂಡದ ಹಂಗಾಮಿ ಕೋಚ್ ಆಗಿ ಜಿಂಬಾಬ್ವೆ ಪ್ರವಾಸಕ್ಕೆ ಕಳುಹಿಸಲು ಬಿಸಿಸಿಐ (BCCI) ನಿರ್ಧರಿಸಿದೆ. ಕಳೆದ ಐರ್ಲೆಂಡ್ ಪ್ರವಾಸದಲ್ಲೂ ಲಕ್ಷ್ಮಣ್ ಭಾರತ ತಂಡದ ಕೋಚ್ ಆಗಿದ್ದರು.

ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಆಗಸ್ಟ್ 18, 20 ಮತ್ತು 22ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್ (Harare Sports Club) ಮೈದಾನದಲ್ಲಿ ನಡೆಯಲಿದ್ದು ಭಾರತ ತಂಡವನ್ನು ಕನ್ನಡಿಗ ಕೆ.ಎಲ್ ರಾಹುಲ್ ಮುನ್ನಡೆಸಲಿದ್ದಾರೆ. ಏಷ್ಯಾ ಕಪ್ ಟೂರ್ನಿ ಆಗಸ್ಟ್ 28ರಿಂದ ಯುಎಇನಲ್ಲಿ ಆರಂಭವಾಗಲಿದ್ದು, ಭಾರತ ತಂಡ ಆಗಸ್ಟ್ 23ರಂದು ದುಬೈಗೆ ಪ್ರಯಾಣ ಬೆಳೆಸಲಿದೆ. ಏಷ್ಯಾ ಕಪ್ (Asian Cup 2022) ತಂಡದಲ್ಲಿರುವ ಕೆ.ಎಲ್ ರಾಹುಲ್ ಸಹಿತ ಇತರ ಆಟಗಾರರು, ಜಿಂಬಾಬ್ವೆಯಿಂದ ನೇರವಾಗಿ ದುಬೈಗೆ ತೆರಳಲಿದ್ದಾರೆ.

ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡ:
ಕೆ.ಎಲ್ ರಾಹುಲ್ (ನಾಯಕ), ಶಿಖರ್ ಧವನ್ (ಉಪನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ದೀಪಕ್ ಹೂಡ, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹರ್.

ಇದನ್ನೂ ಓದಿ : Mayank Agarwal Cooking : ಕ್ರಿಕೆಟ್ ಬಿಟ್ಟು ಅಡುಗೆ ಭಟ್ಟನಾದ ಮಯಾಂಕ್… ಅಗರ್ವಾಲ್ ಕೈಯಿಂದ ರೆಡಿಯಾಯ್ತು ಘಮ ಘಮ ಬಿರಿಯಾನಿ

ಇದನ್ನೂ ಓದಿ : Ganguly and Morgan : ಭಾರತದ 75ನೇ ಸ್ವಾತಂತ್ರ್ಯೋತ್ಸವ: ಸೆಪ್ಟೆಂಬರ್ 16ರಂದು ಕೋಲ್ಕತಾದಲ್ಲಿ ಭಾರತ Vs ವಿಶ್ವ ಇಲೆವೆನ್ ಕ್ರಿಕೆಟ್ ಮ್ಯಾಚ್

Laxman to replace Rahul Dravid. VVS Laxman coach for Indian cricket team

Comments are closed.