ಕುಟುಂಬ ಸದಸ್ಯರ ಪ್ರಗತಿಯನ್ನು ನಿರ್ಧರಿಸುತ್ತೆ ಮನೆಯಲ್ಲಿರುವ ಕಿಟಕಿಗಳ ಸಂಖ್ಯೆ

ಮನೆಯು ವಾಸ್ತು ಶಾಸ್ತ್ರಕ್ಕೆ ಅನುಸಾರವಾಗಿ ಇದ್ದಾಗ ಮಾತ್ರ ಅಲ್ಲಿ ಶುಭ ಹಾಗೂ ಪ್ರಗತಿ ಇರಲು ಸಾಧ್ಯ. ಅಂತಹ ಮನೆಯಲ್ಲಿ ವಾಸಿಸುವ ಜನರು ಸಂತೋಷ, ಆರೋಗ್ಯ ಹಾಗೂ ಪ್ರಗತಿಯನ್ನು ಕಾಣುತ್ತಾರೆ. ಆದರೆ ಮನೆಯಲ್ಲಿ ವಾಸ್ತು ದೋಷ ಇದ್ದಾಗ ಮಾತ್ರ ಅಂತಹ ಮನೆಗಳಲ್ಲಿ ಆರೋಗ್ಯ , ಕುಟುಂಬಸ್ಥರ ಉದ್ಯೋಗ, ಸಂಬಂಧ , ವ್ಯಾಪಾರಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಮನೆಯಲ್ಲಿರುವ ಮುಖ ಬಾಗಿಲು, ಕಿಟಕಿ, ಅಡುಗೆ ಕೋಣೆ, ಸ್ನಾನಗೃಹ, ಮಲಗುವ ಕೋಣೆ ಬಾಲ್ಕನಿಗೆ ಸಂಬಂಧಿಸಿದಂತೆಗೆ ಹೇಗೆ ವಾಸ್ತುಶಾಸ್ತ್ರ ಇದೆಯೋ ಅದೇ ರೀತಿ ಕಿಟಕಿಗಳಿಗೂ ಕೂಡ ವಾಸ್ತು ನಿಯಮಗಳು ಇವೆ. ಹಾಗಾದರೆ ಏನಿದು ಕಿಟಕಿಗೆ (important things for windows) ಸಂಬಂಧಿಸಿದ ವಾಸ್ತು ನಿಯಮ ಅನ್ನೋದನ್ನು ತಿಳಿದುಕೊಳ್ಳೋಣ

ಮನೆಯ ಕಿಟಕಿಗಳನ್ನು ಸಕಾರಾತ್ಮಕತೆಯ ಮೂಲವೆಂದು ಪರಿಗಣಿಸಲಾಗುತ್ತದೆ, ಇದು ಮನೆಯ ಪ್ರಗತಿಗೆ ಕಾರಣವಾಗುತ್ತದೆ. ಮನೆಯನ್ನು ನಿರ್ಮಿಸಿದಾಗ, ಅದರಲ್ಲಿ ಸಮ ಸಂಖ್ಯೆಯ ಕಿಟಕಿಗಳನ್ನು ಸ್ಥಾಪಿಸಿ. ಮನೆಯಲ್ಲಿರುವ ಕಿಟಕಿಗಳ ಸಂಖ್ಯೆಯು 4, 6, 8, 10 ರಂತೆ ಸಮ ಸಂಖ್ಯೆಯಾಗಿರಬೇಕು.

ಕಿಟಕಿಗಳ ಬಾಗಿಲುಗಳು ಒಳಮುಖವಾಗಿ ತೆರೆದುಕೊಳ್ಳುತ್ತಿರಬೇಕು. ಇದನ್ನು ಅದೃಷ್ಟವೆಂದು ಪರಿಗಣಿಸಲಾಗಿದೆ. ಇದರರ್ಥ ನಿಮ್ಮ ಮನೆಯೊಳಗಿನ ಶಕ್ತಿಯ ಹರಿವು ಹೊರಗಿನಿಂದ ಒಳಕ್ಕೆ ಹೋಗುತ್ತದೆ. ಕಿಟಕಿಗಳು ದ್ವಿಮುಖವಾಗಿರಬೇಕು.ಮನೆಯ ಕಿಟಕಿಗಳಿಗೆ ಪೂರ್ವ ಮತ್ತು ಈಶಾನ್ಯ ದಿಕ್ಕನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಸೂರ್ಯೋದಯದ ಸಮಯದಲ್ಲಿ ಮನೆಯೊಳಗೆ ಸೂರ್ಯನ ಮೊದಲ ಕಿರಣಗಳ ಆಗಮನವು ಧನಾತ್ಮಕ ಶಕ್ತಿಯ ಸಂಕೇತವಾಗಿದೆ.

ಮನೆಯ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿ ಚಿಕ್ಕ ಕಿಟಕಿಗಳನ್ನು ಇಡಬಹುದು. ಆದರೆ, ಆ ಭಾಗದಲ್ಲಿ ಸಾಕಷ್ಟು ತೆರೆದ ಸ್ಥಳವಿದ್ದರೆ, ಅಲ್ಲಿ ಕಿಟಕಿ ಹಾಕದಿರುವುದು ಉತ್ತಮ.ನೀವು ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಕಿಟಕಿಯನ್ನು ಇರಿಸಿದರೆ, ಅದು ದೊಡ್ಡದಾಗಿದ್ದರೆ ಅದು ತುಂಬಾ ಒಳ್ಳೆಯದು. ಅಲ್ಲಿಂದ ನೀವು ಸಾಕಷ್ಟು ತಾಜಾ ಗಾಳಿ ಮತ್ತು ಸೂರ್ಯನ ಕಿರಣಗಳನ್ನು ಪಡೆಯುತ್ತೀರಿ.

ಇದನ್ನು ಓದಿ : ಮನೆಯಲ್ಲಿ ಧನಾತ್ಮಕ ಅಂಶ ಹೆಚ್ಚಿಸಲು ತನ್ನಿ ಈ ವಿಶೇಷವಾದ ವಸ್ತು

ಇದನ್ನೂ ಓದಿ : Vastu Tips For Marriage : ಮದುವೆಯ ವಯಸ್ಸು ಮೀರಿದರೂ ಸಂಗಾತಿಯು ಸಿಗುತ್ತಿಲ್ಲವೇ..? ಹಾಗಾದರೆ ಅನುಸರಿಸಿ ಈ ವಾಸ್ತುಟಿಪ್ಸ್​

home vastu tips 9 important things for windows

Comments are closed.