ಇಡಗುಂಜಿ : ಬಾಲರೂಪದಲ್ಲಿ ನೆಲೆ ನಿಂತಿದ್ದಾನೆ ಗಣೇಶ : ಕಡ್ಲೇಕಾಳಿನ ಪ್ರಸಾದವೇ ಈತನಿಗೆ ಪ್ರಿಯ

  • ವಂದನಾ ಕೊಮ್ಮುಂಜೆ

ಗಣೇಶ ಮಕ್ಕಳಿಂದ ಹಿರಿಯರವರೆಗೆ ತುಂಬ ಇಷ್ಟವಾಗುವ ದೇವರು. ಆತನ ಕಥೆ ಕೇಳದವರೇ ಇರಲಿಕ್ಕಿಲ್ಲ. ಆನೆ ತಲೆ, ತುಂಡಾದ ಹಲ್ಲು ಹೊಟ್ಟೆಗೆ ಕಟ್ಟಿದ ಹಾವು ಇದು ಗಣೇಶನ ಗುರುತು. ಆದರೆ ಈ ದೇವಾಲಯದಲ್ಲಿ (Idagunji Mahaganapathi Temple ) ಮಾತ್ರ ಸ್ವಲ್ಪ ಭಿನ್ನವಾಗಿ ನೆಲೆ ನಿಂತಿದ್ದಾನೆ. ಇಲ್ಲಿ ಗಣೇಶನಿಗೆ ಎರಡು ಹಲ್ಲು ಇದೆ. ಅನ್ನೋದು ವಿಶೇಷ.

ಈ ದೇವಾಲಯ ಗಣೇಶನ ಪ್ರಸಿದ್ದ ದೇವಾಲಯದಲ್ಲಿ ಒಂದು. ಪ್ರಶಾಂತ ವಾತಾವರಣದಲ್ಲಿ ನಿರ್ಮಿಸಲಾಗಿರು ಈ ದೇವಾಲಯದಲ್ಲಿ ಈ ವಿಘ್ನವಿನಾಷಕ ನೆಲೆಸಿದ್ದಾನೆ. ಇದು ಉಳಿದ ಗಣೇಶನ ದೇವಾಲಯಕ್ಕಿಂತ ಭಿನ್ನ. ಯಾಕಂದ್ರೆ ಇಲ್ಲಿ ವಿನಾಯಕ ನೆಲೆಸಿರೋದು ಇದು ಬಾಲ ಗಣೇಶನ ರೂಪದಲ್ಲಿ. ಆದರಲ್ಲೂ ಅವನು ಬೆರಳ ತುದಿಯಲ್ಲಿ ನೆಲೆ ನಿಂತು ಭಕ್ತರ ಸಂಕಷ್ಟವನ್ನು ಪರಿಹರಿಸುತ್ತಾನೆ. ಹೌದು, ಇದು ಬಾಲಗಣೇಶನ ಮಂದಿರ. ಇಲ್ಲಿ ಗಣೇಶ ಏಕದಂತನಾಗಿ ನೆಲೆಸಿಲ್ಲ. ಬದಲಾಗಿ ಇಲ್ಲಿನ ಗಣೇಶನಿಗೆ ಎರಡೂ ಹಲ್ಲೂ ಇದೆ. ಜೊತೆಗೆ ಹೊಟ್ಟೆಗೆ ಹಾವು ಕೂಡಾ ಕಟ್ಟಲಾಗಿಲ್ಲ. ಇನ್ನೊಂದು ವಿಶೇಷವೆಂದರೆ ಈ ದೇವಾಲಯದಲ್ಲಿ ಗಣೇಶ ನಿಂತ ರೀತಿಯಲ್ಲಿರೋದು. ಅದರಲ್ಲೂ ಬೆರಳತುದಿಯಲ್ಲಿ ನಿಂತ ರೀತಿಯಲ್ಲಿರೋದು.

ಗರ್ಭಗುಡಿಯಲ್ಲಿ ಸುಂದರವಾದ ಕಪ್ಪು ಶಿಲೆಯಲ್ಲಿ ನಿಂತಿದ್ದಾನೆ ಗಣೇಶ. ಆಭರಣ ಭೂಷಿತನಾದ ಗಣಪನಿಗೆ ಎರಡು ಇದ್ದು, ಬಲಗೈಯಲ್ಲಿ ಪದ್ಮವನ್ನು ಹಿಡಿದಿದ್ದಾನೆ. ಎಡಗೈಯಲ್ಲಿ ಮೋದಕ ತುಂಬಿದ ಪಾತ್ರೆಯಿದ್ದು ತನ್ನ ಸೊಂಡಿಲಿನಿಂದ ಮೊದಕವನ್ನು ಸವಿಯುತ್ತಿದ್ದಾನೆ ಗಣೇಶ. ಇನ್ನು ಗಣೇಶನವಾಹನ ಆಂದ್ರೆ ಇಲಿಯೂ ಇಲ್ಲಿಲ್ಲ.

ಇದರ ಪೌರಾಣಿಕ ಹಿನ್ನೆಲೆಯನ್ನು ನೋಡೋದಾದ್ರೆ ಇದಕ್ಕೆ 1500 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಇಲ್ಲಿನ ಸ್ಥಳಪುರಾಣದ ಪ್ರಕಾರ ದ್ವಾಪರ ಯುಗದ ಅಂತ್ಯದಲ್ಲಿ ಅಂದರೆ ಕಲಿಯುಗದ ಆರಂಭದಲ್ಲಿ ಭೂಮಿಯ ಮೇಲಿರುವ ರಾಕ್ಷಸರನ್ನು ಸಂಹಾರ ಮಾಡಲೆಂದು ತ್ರಿಮೂರ್ತಿ ಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಈ ಅರಣ್ಯಕ್ಕೆ ಬಂದರು. ನಂತರ ಸಾಧು ಸಂತರಿಗೆ ಸಹಾಯವಾಗಲೆಂದು ಚಕ್ರತೀರ್ಥ ಮತ್ತು ಬ್ರಹ್ಮತೀರ್ಥ ಎಂಬ ಎರಡು ಹೊಂಡಗಳನ್ನು ನಿರ್ಮಿಸಿದ್ದರು. ಕೆಲ ಕಾಲದ ನಂತರ ರಾಕ್ಷಸರ ತೊಂದರೆ ಹೆಚ್ಚಾದಾಗ ವಾಲಖೀಲ್ಯ ಮುನಿಗಳು ನಾರದರನ್ನು ಪ್ರಾರ್ಥಿಸಿ ತಮ್ಮ ತಪಸ್ಸಿಗೆ ಆದ ವಿಘ್ನಗಳನ್ನು ನಿವಾರಣೆ ಮಾಡುವುದಕ್ಕೋಸ್ಕರ ಬೇಡಿಕೊಂಡಾಗ ನಾರದರು ಗಣೇಶನ ತಾಯಿ ಪಾರ್ವತಿಯ ಬಳಿ ಹೋಗಿ ಬಾಲ ಗಣೇಶನನ್ನು ಭೂಲೋಕಕ್ಕೆ ಕಳುಹಿಸಿ ಕೊಡುವಂತೆ ಬೇಡಿಕೊಂಡರು. ಅಂದಿನಿಂದ ಗಣೇಶ ಇಲ್ಲಿ ನೆಲೆ ನಿಂತ ಭಕ್ತರನ್ನು ಕಾಯುತ್ತಾನೆ ಆನ್ನೋ ನಂಬಿಕೆ ಭಕ್ತರದು ನಂತರ ೫-೬ ನೇ ಶತಮಾನದಲ್ಲಿ ದೇವಾಲಯವನ್ನು ನಿರ್ಮಿಸಲಾಯಿತು ಎನ್ನಲಾಗುತ್ತೆ.

ದೇವಾಲಯದ ಮತ್ತೊಂದು ವಿಶೇಷವೆಂದರೆ ಇಲ್ಲಿ ಸಿಗುವ ಕಡಲೇ ಕಾಳಿನ ಪಂಚಕಜ್ಜಾಯ. ಇಲ್ಲಿನ ಭಕ್ತರಿಗೆ ಕಡಲೇ ಕಾಳಿನ ಪಂಚ ಕಜ್ಜಾಯವೇ ನೇವೇದ್ಯ. ಇಲ್ಲಿ ಭಕ್ತಿಯಿಂದ ಬೇಡಿಕೊಂಡು ಗಣೇಶನ ಈ ಪಂಚಕಜ್ಜಾಯ ಸೇವಿದ್ರೆ ಅಭೀಷ್ಟವೂ ಈಡೇರುತ್ತೆ ಅನ್ನೋ ನಂಬಿಕೆ ಭಕ್ತರದು. ಇದಕ್ಕೂ ಅಲ್ಲೋದು ಕಥೆ ಇದೆ. ನಾರದ ಮುನಿಗಳು ಇಲ್ಲಿ ನೆಲೆಸುವಂತೆ ಕೇಳಿದಾಗ ಗಣೇಶ ಕಡಲೇಕಾಳಿ ಪಂಚ ಕಜ್ಜಾಯ ಮಾಡುವುದಿಲ್ಲವೋ ಅಂದು ನಾನು ಇಲ್ಲಿ ಇರೋದಿಲ್ಲ ಅಂದನಂತೆ ಅಂದಿನಿಂದ ಇಲ್ಲಿ ಕಡಲೇಕಾಳಿ ಪಂಚಕಜ್ಜಾಯ ತಪ್ಪಿಲ್ಲ ಅಂತಾರೆ ಭಕ್ತರು.

ಅಂದ ಹಾಗೆ ಈ ದೇವಾಲಯವಿರೋದು ಇದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಇಡಗುಂಜಿಯಲ್ಲಿ. ಇಡಗುಂಜಿ ಮಹಾತೋಭಾರ ವಿನಾಯಕ ಎಂಬ ರೂಪದಲ್ಲಿ ಇಲ್ಲಿ ನೆಲೆಸಿದ್ದಾನೆ ರಾ.ಹೆ. 66 (ರಾ.ಹೆ. 17)ರಿಂದ 7 ಕೀ.ಮಿ. ದೂರದಲ್ಲಿರುವ ಈ ದೇವಸ್ಥಾನವನ್ನು “ಇಡಗುಂಜಿ ದೇವಸ್ಥಾನ” ಎಂದು ಕರೆಯುತ್ತಾರೆ. ಇಲ್ಲಿಗೆ ಪ್ರತಿ ದಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇಲ್ಲಿಗೆ ಹೋಗಲು ಭಟ್ಕಳ ಮತ್ತು ಹೊನ್ನಾವರ ದಿಂದ ಬಸ್ ಸೌಲಭ್ಯವಿದೆ.

ಇದನ್ನೂ ಓದಿ : ಗೌರಿಕುಂಡದಲ್ಲಿರುವ ಬಿಸಿನೀರಿಗೂ, ಗೌರಿ ಹಬ್ಬಕ್ಕೂ ಇರುವ ನಂಟು ನಿಮಗೆ ಗೊತ್ತಾ ?

ಒದನ್ನೂ ಓದಿ : Halu Rameshwara Temple : ಪುರಾಣ ಪ್ರಸಿದ್ಧ ತಾಣ ಹಾಲು ರಾಮೇಶ್ವರ

(Idagunji Mahaganapathi Temple )

Comments are closed.