Chanakya Niti: ನಿಮ್ಮ ಜೀವನಕ್ಕೆ ಈ ಗುಣಗಳಿರುವ ಸ್ತ್ರೀ ಕಾಲಿಟ್ಟರೆ ಸಾಕು, ಪ್ರತಿ ಹಂತದಲ್ಲಿ ಯಶಸ್ಸು ಗ್ಯಾರಂಟಿ
Chanakya Niti: ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಜೀವನದ ವಿವಿಧ ಅಂಶಗಳನ್ನು ವಿವರಿಸಿದ್ದಾರೆ. ಚಾಣಕ್ಯ ನೀತಿ ನಮ್ಮ ಯಶಸ್ಸಿಗೆ ದಾರಿದೀಪವಾಗಿದೆ.
ಆಚಾರ್ಯ ಕೇವಲ ಚಾಣಾಕ್ಷ ರಾಜತಂತ್ರದ ಬಗ್ಗೆ ಮಾತ್ರವಲ್ಲದೆ, ಕುಟುಂಬ, ಜೀವನ, ಪುರುಷ ಮತ್ತು ಮಹಿಳೆಯರ ಗುಣಗಳ ಬಗ್ಗೆಯೂ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ.
ಅವರು ಬರೆದ ನೀತಿಶಾಸ್ತ್ರದಲ್ಲಿ ಪುರುಷ ಮತ್ತು ಮಹಿಳೆಗೆ ಇರಬೇಕಾದ ಜವಾಬ್ದಾರಿಗಳೇನು ಎಂಬುದನ್ನು ವಿವರಿಸುತ್ತದೆ. ಅವರ ಪ್ರಕಾರ ಬುದ್ಧಿವಂತ ಮತ್ತು ಸದ್ಗುಣಶೀಲ ಮಹಿಳೆಯೇ ಮನೆಯ ಮಹಾಲಕ್ಷ್ಮಿಯಾಗಿರುತ್ತಾಳೆ.
ಹಾಗಾದರೆ ಚಾಣಕ್ಯರ ಪ್ರಕಾರ ಬುದ್ಧಿವಂತ ಮಹಿಳೆ ಎಂದರೆ ಹೇಗಿರುತ್ತಾಳೆ? ಇಲ್ಲಿದೆ ಓದಿ.
ಸಾ ಭಾರ್ಯಾ ಯಾ ಶುಚಿ ದಕ್ಷಾ ಸಾ ಭಾರ್ಯಾ ಯಾ ಪತಿವ್ರತಾ |
ಸಾ ಭಾರ್ಯಾ ಯಾ ಪತಿಪ್ರೀತಾ ಸಾ ಭಾರ್ಯಾ ಸತ್ಯವಾದಿನಿ ||
ಆಚಾರ್ಯ ಚಾಣಕ್ಯರು ಈ ಶ್ಲೋಕದ ಮೂಲಕ ಒಬ್ಬ ಶ್ರೇಷ್ಠ ಹಾಗೂ ಬುದ್ಧಿವಂತ ಸ್ತ್ರೀಯ ಗುಣಗಳನ್ನು ಹೇಳಿದ್ದಾರೆ. ಇದರ ಪ್ರಕಾರ:
ಯಾವುದೇ ಪರಿಸ್ಥಿತಿಯಲ್ಲೂ ಭಯಪಡುವುದಿಲ್ಲ
ಬುದ್ಧಿವಂತ ಮಹಿಳೆಯ ಗುಣಗಳನ್ನು ವಿವರಿಸುವ ಆಚಾರ್ಯ ಚಾಣಕ್ಯರು, ಸತ್ಯ ಹಾಗೂ ನೀತಿಯ ಮಾರ್ಗವನ್ನು ಅನುಸರಿಸುವ ಮತ್ತು ತನ್ನ ಮೌಲ್ಯಗಳನ್ನು ಗೌರವಿಸುವ ಮಹಿಳೆ ಬುದ್ಧಿವಂತ ಮಹಿಳೆಯಾಗಿರುತ್ತಾಳೆ ಎಂದು ಹೇಳಿದರು.
ಕಷ್ಟದ ಸಮಯದಲ್ಲೂ ವಿಚಲಿತವಾಗದೇ ಮತ್ತು ಯಾವುದೇ ಸಂದರ್ಭಗಳನ್ನು ನಿಭಾಯಿಸುವ ಮಹಿಳೆ ಕೂಡ ಬುದ್ಧಿವಂತ ಮಹಿಳೆಯರ ವರ್ಗಕ್ಕೆ ಸೇರುತ್ತಾರೆ ಎಂದು ಅವರು ಹೇಳುತ್ತಾರೆ.
ಇದೇ ಮಹಿಳೆಯ ಶಕ್ತಿ
ಆಚಾರ್ಯ ಚಾಣಕ್ಯರು ಈ ಶ್ಲೋಕದಲ್ಲಿ ಮಹಿಳೆಯ ಮೃದು ಮಾತು ಮತ್ತು ಸತ್ಯವಾದ ಮಾತು ಅವಳ ದೊಡ್ಡ ಶಕ್ತಿ ಎಂದು ಹೇಳುತ್ತಾರೆ. ಬುದ್ಧಿವಂತ ಮಹಿಳೆ ತನ್ನ ಮಾತಿನಿಂದ ತನ್ನ ಶತ್ರುಗಳನ್ನು ಸಹ ಸೋಲಿಸುತ್ತಾಳೆ. ಇದಲ್ಲದೆ, ಸಂತೋಷ ಮತ್ತು ದುಃಖ ಎರಡೂ ಸಂದರ್ಭಗಳಲ್ಲಿ ಶಾಂತಚಿತ್ತಳಾಗಿ ವರ್ತಿಸುವ ಮಹಿಳೆ ಅತ್ಯಂತ ಬುದ್ಧಿವಂತ ಮಹಿಳೆ.
ಇದನ್ನೂ ಓದಿ: Chanakya Niti: ನಿರಂತರ ವೈಫಲ್ಯಕ್ಕೆ ಹೆದರಬೇಡಿ, ಆಚಾರ್ಯ ಚಾಣಕ್ಯರ ಈ ಸಲಹೆಗಳನ್ನು ನೆನಪಿಟ್ಟುಕೊಳ್ಳಿ
ಮನೆಯ ಮಹಾಲಕ್ಷ್ಮಿ
ಚಾಣಕ್ಯರ ಪ್ರಕಾರ ಮನೆಯ ಆರ್ಥಿಕ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸುವ, ವ್ಯರ್ಥ ಖರ್ಚುಗಳನ್ನು ತಪ್ಪಿಸುವ ಹಾಗೂ ಭವಿಷ್ಯಕ್ಕೆ ಉಳಿತಾಯ ಮಾಡುವ ಮಹಿಳೆ ಮನೆಯ ಮಹಾಲಕ್ಷ್ಮಿಯಾಗಿರುತ್ತಾಳೆ. ಅವಳ ಆಶೀರ್ವಾದವೇ ಕುಟುಂಬಕ್ಕೆ ಶ್ರೀರಕ್ಷೆಯಾಗಿರುತ್ತದೆ. ಅವಳು ಮನೆಗೆ ಮಾತ್ರವಲ್ಲ ಪುರುಷರಿಗೂ ಜೀವನದಲ್ಲಿ ಮುನ್ನಡೆಯಲು ಸಹಕಾರಿಯಾಗಿರುತ್ತಾಳೆ.



