excessive smartphone use : ಮಕ್ಕಳಿಲ್ಲದ ಮನೆಯೇ ಇಲ್ಲ ಎಂಬ ಕಾಲವೊಂದಿತ್ತು. ಆದರೆ ಇದೀಗ ಸ್ಮಾರ್ಟ್ಫೋನ್ಗಳಿಲ್ಲದ ಮನೆಯೇ ಇಲ್ಲ ಎಂಬಂತೆ ಆಗಿದೆ. ಯಾರ ಬಳಿ ನೋಡಿದರೂ ಈಗ ಸ್ಮಾರ್ಟ್ ಫೋನ್ ಇರುತ್ತೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರೂ ಸ್ಮಾರ್ಟ್ ಫೋನ್ಗಳನ್ನು ಬಳಕೆ ಮಾಡುತ್ತಾರೆ. ಸ್ಮಾರ್ಟ್ಫೋನ್ಗಳ ಚಟಕ್ಕೆ ಬಿದ್ದಿರುವ ಅನೇಕರು ತಮ್ಮ ಕುಟುಂಬಗಳಿಕೆ ಸಮಯವನ್ನು ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಅಲ್ಲದೇ ಸೈಪಿಯನ್ ಲ್ಯಾಬ್ ಸ್ಮಾರ್ಟ್ ಫೋನ್ಗಳ ಕುರಿತಂತೆ ಹೊಸ ಅಧ್ಯಯನವೊಂದನ್ನು ಮಾಡಿದ್ದು ಇದರಲ್ಲಿ ಬೆಚ್ಚಿ ಬೀಳಿಸುವ ಅಂಶಗಳು ಬೆಳಕಿಗೆ ಬಂದಿವೆ.
ಈಗಂತೂ ನಿಮಗೆ ಸ್ಮಾರ್ಟ್ ಫೋನ್ಗಳನ್ನು ಬಳಕೆ ಮಾಡದೇ ಇರುವವರು ಸಿಗೋಕೆ ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಪ್ರತಿಯೊಬ್ಬರು ಸ್ಮಾರ್ಟ್ ಫೋನ್ಗಳ ದಾಸರಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಹದಿಹರೆಯದವರಿಗೆ ಮೊಬೈಲ್ ಬಿಟ್ಟರೆ ಜಗತ್ತೇ ಇಲ್ಲ ಎಂಬಂತಾಗಿದೆ. ಸೈಪಿಯನ್ ಲ್ಯಾಬ್ ನಡೆಸಿದ ಅಧ್ಯಯನದಲ್ಲಿ 18 ರಿಂದ 24 ವರ್ಷದವರಲ್ಲಿ ಮಾನಸಿಕ ಆರೋಗ್ಯವನ್ನು ಕೆಡಿಸುವಲ್ಲಿ ಸ್ಮಾರ್ಟ್ ಫೋನ್ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿದು ಬಂದಿದೆ.
ಈ ಮೊದಲು ಮಕ್ಕಳು 18 ವರ್ಷ ಪ್ರಾಯಕ್ಕೆ ಬರುವ ವೇಳೆಗೆ ತಮ್ಮ ಕುಟುಂಬಸ್ಥರು ಹಾಗೂ ಆಪ್ತರ ಜೊತೆಯಲ್ಲಿ ಏನಿಲ್ಲವೆಂದರೂ 15 ರಿಂದ 18 ಸಾವಿರ ಗಂಟೆಗಳನ್ನು ಕಳೆಯುತ್ತಿದ್ದರಂತೆ. ಆದರೆ ಇದೀಗ ಸ್ಮಾರ್ಟ್ ಫೋನ್ಗಳ ಬಳಕೆ ಹೆಚ್ಚಾದ ಮೇಲೆ ಈ ಸಮಯವು 5 ಸಾವಿರ ಗಂಟೆಗಳಿಗೆ ಇಳಿಕೆಯಾಗಿದೆ ಎಂಬ ಬೆಚ್ಚಿ ಬೀಳಿಸುವ ಅಂಶವು ಅಧ್ಯಯನದಲ್ಲಿ ಬಯಲಾಗಿದೆ.
ಈ ಕುರಿತು ಮಾತನಾಡಿದ ಸೈಪಿಯನ್ ಲ್ಯಾಬ್ನ ವಿಜ್ಞಾನಿ ತಾರಾ ತ್ಯಾಗರಾಜನ್, ಸ್ಮಾರ್ಟ್ ಫೋನ್ಗಳನ್ನು ಅತಿಯಾಗಿ ಬಳಕೆ ಮಾಡುವವರಲ್ಲಿ ಮಾನಸಿಕ ಆರೋಗ್ಯ ಹದಗೆಡುತ್ತಿದೆ. ಆತ್ಮಹತ್ಯೆಯಂತಹ ಯೋಚನೆಗಳು ಇವರ ತಲೆಯಲ್ಲಿ ಬರುತ್ತಿದೆ. ಸ್ಮಾರ್ಟ್ ಫೋನ್ಗಳು ಬಂದ ಬಳಿಕ ಜನರಿಗೆ ಮುಖಕ್ಕೆ ಮುಖ ಕೊಟ್ಟು ಮಾತನಾಡಲೇ ಆಗುತ್ತಿಲ್ಲ. ಜನರು ಸಂವಹನ ನಡೆಸುವುದನ್ನೇ ಮರೆಯುತ್ತಿದ್ದಾರೆ. ಹೀಗಾಗಿ ಈಗಿನ ಯುವಜನತೆಗೆ ಸಮಾಜದೊಂದಿಗೆ ಸಂಬಂಧ ಬೆಸೆದುಕೊಳ್ಳಲು ವಿಫಲವಾಗುತ್ತಿದೆ. ಇದರಿಂದ ಯುವಕರಲ್ಲಿ ಆತ್ಮಹತ್ಯೆಯಂತಹ ಗಂಭೀರ ಯೋಚನೆಗಳು ಬರುತ್ತಿವೆ ಎಂದು ಹೇಳಿದರು.
ಇದನ್ನು ಓದಿ : Rashmika Mandanna : ಸ್ನೇಹಿತೆಯ ಮದುವೆಯಲ್ಲಿ ರಶ್ಮಿಕಾ ಮಿಂಚಿಂಗ್ : ಕೊಡವರ ಶೈಲಿಯ ಸೀರೆ ಧರಿಸಿದ ಕಿರಿಕ್ ಬೆಡಗಿ
ಇದನ್ನೂ ಓದಿ : Andrew Symonds Dies : ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ನಿಧನ
Impact on mental health with excessive smartphone use